ಕಾಳಿಕಾಂಬ ಮಹಿಳಾ ಮಂಡಳಿ ಚಿಟ್ಪಾಡಿ ,ಮಂಚಿಯಲ್ಲಿ ನಡೆದ ವರ ಮಹಾಲಕ್ಷ್ಮಿ ಪೂಜೆ

ಉಡುಪಿ ಕಡಿಯಾಳಿ ದೇವಾಲಯದ ಆಡಳಿತ ಮಂಡಳಿಯ ಮತ್ತು ಕಾತ್ಯಾಯಿನಿ ಮಂಟಪದ  ನಡುವೆ ಇದ್ದ ಮನಸ್ಥಾಪವನ್ನು ಸರಿಪಡಿಸಿ ವರಮಹಾಲಕ್ಷ್ಮೀ ಆಚರಣೆಗೆ ಅನುವು ಮಾಡಿಕೊಟ್ಟ ಶಾಸಕರಾದ ಕೆ ರಘುಪತಿ ಭಟ್..

ಕಡಿಯಾಳಿ ದೇವಾಲಯದ ಆಡಳಿತ ಮಂಡಳಿ ಮತ್ತು ಕಾತ್ಯಾಯಿನಿ ಮಂಟಪದ ಸದಸ್ಯರ ನಡುವೆ ಇದ್ದ ಒಳಜಗಳದಿಂದಾಗಿ ದೇವಾಲಯದ ಆವರಣದಲ್ಲಿ ಕಟ್ಟಡ ಸಾಮಾಗ್ರಿಗಳನ್ನು ಸಂಗ್ರಹಿಸಿ ಇಟ್ಟಿದ್ದು ನಾಗರಿಕರಿಗೆ ಮತ್ತು ದೇವಾಲಯಕ್ಕೆ ಬರುವ ಭಕ್ತಾದಿಗಳಿಗೆ ತುಂಬಾ ತೊಂದರೆ ಉಂಟಾಗುತ್ತಿತ್ತು ಮತ್ತು ಇಂದು ವರಮಹಾಲಕ್ಷ್ಮೀ ಆಚರಣೆಗೂ ಅಡೆತಡೆ ಎದುರಾಗಿತ್ತು.ಆದರೆ ಸಮಸ್ಯೆ ಅರಿತ ಶಾಸಕರಾದ ಕೆ ರಘುಪತಿ ಭಟ್ ಅವರು ಇಂದು ದೇವಾಲಯದ ಆಡಳಿತ ಮಂಡಳಿ ಮತ್ತು ಕಾತ್ಯಾಯಿನಿ ಮಂಟಪದ ಸದಸ್ಯರನ್ನು ಕರೆದು ಸಭೆ ನಡೆಸಿ ಸಮಸ್ಯೆ ಬಗೆಹರಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಸಂಬಂಧಪಟ್ಟ ಅಧಿಕಾರಿಗಳ ಜೊತೆ ಕೂಡ ಮಾತನಾಡಿದ ಶಾಸಕರು ದೇವಾಲಯದ ಆವರಣದಲ್ಲಿ ಇದ್ದ ಸಾಮಾಗ್ರಿಗಳನ್ನು ತೆರವುಗೊಳಿಸುವಂತೆ ಸೂಚಿಸಿದರು,ತಕ್ಷಣವೇ ಅಧಿಕಾರಿಗಳು ಸಾಮಾಗ್ರಿಯನ್ನು ತೆರವುಗೊಳಿಸಿ ಕಾರ್ಯಕ್ರಮ ನಡೆಸಲು ಅನುವು ಮಾಡಿಕೊಟ್ಟರು. ಈ‌ ಸಂದರ್ಭದಲ್ಲಿ ಜೀರ್ಣೋದ್ಧಾರ ಸಮಿತಿಯ ಅಧ್ಯಕ್ಷರಾದ ರತ್ನಾಕರ ಶೆಟ್ಟಿ, ಡಾ.ವಿಜಯೇಂದ್ರ, ನಗರಸಭಾ ಸದಸ್ಯರಾದ ಗಿರೀಶ್ ಎಂ ಅಂಚನ್, ಗಿರಿಧರ ಆಚಾರ್ಯ ಶ್ರೀಮತಿ ಗೀತಾ ದೇವರಾಯ ಶೇಟ್, ಮತ್ತಿತರರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

error: Content is protected !!