ಉಡುಪಿಗೂ ಕಾಲಿಟ್ಟ ಮಹಾ ಮಾರಿ ಕೊರೊನಾ ವೈರಸ್: ನಾಲ್ವರಿಗೆ ಸೋಂಕು?
ಉಡುಪಿ: ಕಳೆದ ಹದಿನೈದು ದಿನಗಳ ಹಿಂದೆ ಚೀನಾದಿಂದ ಮರಳಿದ ನಾಲ್ವರಲ್ಲಿ ಸಂಶಯಾಸ್ಪದ ಕೊರೊನಾ ವೈರಸ್ ಪತ್ತೆಯಾಗಿದೆ.
ಇವರಿಗೆ ಉಡುಪಿ ಜಿಲ್ಲಾಸ್ಪತ್ರೆಯ ವಿಶೇಷ ಕೊಠಡಿಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆಂದು ಉಡುಪಿ ಜಿಲ್ಲಾ ಆರೋಗ್ಯ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.
ಚೀನಾದಿಂದ ಬಂದಿದ್ದ ಕಾಪುವಿನ ವ್ಯಕ್ತಿಯೊರ್ವರಿಗೆ ಮತ್ತು ಬ್ರಹ್ಮಾವರದ ದಂಪತಿ ಹಾಗೂ ಮಗು ಶೀತ, ಗಂಟಲು ಸೋಂಕಿನಿಂದ ಬಳಲುತ್ತಿದ್ದರು. ಅವರಿಗೆ ಜಿಲ್ಲಾಸ್ಪತ್ರೆಯಲ್ಲಿರುವ ಕೊರೊನಾ ಚಿಕಿತ್ಸೆಗಾಗಿ ಸಿದ್ದಪಡಿಸಿರುವ ವಿಶೇಷ ಕೊಠಡಿಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.
ದಂಪತಿಗಳಲ್ಲಿ ಪತ್ನಿಯ ಆರೋಗ್ಯದಲ್ಲಿ ಸುಧಾರಣೆ ಕಂಡುಬಂದಿದೆ ಎಂದು ವೈದ್ಯರು ತಿಳಿಸಿದ್ದಾರೆ. ಸೋಂಕಿತರ ರಕ್ತ ಹಾಗೂ ಗಂಟಲಿನ ದ್ರವವನ್ನು ಕೊರೊನಾ ವೈರಸ್ ಪರೀಕ್ಷೆಗಾಗಿ ಕಳುಹಿಸಿಕೊಡಲಾಗಿದೆಂದು ತಿಳಿದು ಬಂದಿದೆ.
God save us from deadly Virus
Education is very important. Washing hands with soap and water all the time is very important. Eating out side in hotels have to be careful. Avoid red meat especially pork, it is better to avoid all meat ,must make a habit of washing hands with soap and water before eating or even a before drinking cup of tea or coffee , and also wash hands with soap and water after you have done with your #1 and #2 work in wash room is very vital. To cover mouth while coughing and sneezing is also essential. Thank you