ತುಳುವರ `ಲುಂಗಿ ‘
ಪೂರ್ಣ ಪ್ರಮಾಣದಲ್ಲಿ ಮಂಗಳೂರಿನ ಕನ್ನಡ, ಸೊಗಡು, ರೊಮ್ಯಾಂಟಿಕ್ ಕಾಮಿಡಿ ಹೊಂದಿರುವ `ಲುಂಗಿ’ ಕನ್ನಡ ಚಿತ್ರ ಅ. ೧೧ರಂದು ರಾಜ್ಯಾದ್ಯಂತ ಬಿಡುಗಡೆಯಾಗಲಿದೆ.
ಚಿತ್ರದ ಟ್ರೇಲರನ್ನು ಚಲನಚಿತ್ರ ನಟ ರಕ್ಷಿತ್ ಶೆಟ್ಟಿ ಬಿಡುಗಡೆಗೊಳಿಸಿದ್ದು, ಅತ್ಯುತ್ತಮ ಸ್ಪಂದನೆ ದೊರೆತಿದೆ ಇದರಿಂದ ಚಿತ್ರ ಫಲಿತಾಂಶದ ಕುರಿತು ನಮಗಿದ್ದ ವಿಶ್ವಾಸ ಹೆಚ್ಚಿದೆ ಎಂದು ಚಿತ್ರದ ನಿರ್ಮಾಪಕ ಮುಖೇಶ್ ಹೆಗ್ಡೆ ತಿಳಿಸಿದರು.
ಕನ್ನಡ ಸಿನಿಮಾ ಮಾಡುವ ಪ್ಲ್ಯಾನ್ ಇತ್ತು ಅದೇ ಸಂದರ್ಭದಲ್ಲಿ ನಿರ್ದೇಶಕರುಗಳು ಸಿಕ್ಕಿ ಕಥೆ ಹೇಳಿದರು. ಕಥೆ ಚೆನ್ನಾಗಿದ್ದರಿಂದ ಈ ಸಿನಿಮಾ ಮಾಡಲು ಒಪ್ಪಿಕೊಂಡೆ. ನಂತರ ನಮ್ಮ ಮಗ ಕಥೆಗೆ ಆಪ್ತ ಆದ್ದರಿಂದ ಅವನೇ ನಾಯಕನಾದ. ಕಳೆದ ವರ್ಷ ಶುರುವಾದ ಚಿತ್ರ ಸದ್ಯ ಬಿಡುಗಡೆ ಹಂತಕ್ಕೆ ಬಂದಿದ್ದು, ಅಕ್ಟೋಬರ್ 11 ರಂದು ಜಯಣ್ಣ ಕಂಬೈನ್ಸ್ ಮುಖೇನ ರಾಜ್ಯಾದ್ಯಂತ ರಿಲೀಸ್ ಆಗಲಿದೆ.
ಇದು ಯಂಗ್ ಟಾಲೆಂಟೆಡ್ ಹುಡುಗರು ಮಾಡಿರುವ ಸಿನಿಮಾ ಎಲ್ಲರಿಗೂ ಇಷ್ಟ ಆಗುತ್ತದೆ’ ಎಂದು ಮುಖೇಶ್ ಹೆಗ್ಡೆ ತಿಳಿಸಿದರು. ನಾಯಕ ಪ್ರಣವ್ ಹೆಗ್ಡೆ ಮಾತನಾಡಿ ‘ಒಂದೂವರೇ ವರ್ಷ ಆಯ್ತು ಈ ಸಿನಿಮಾ ಜರ್ನಿ ಪ್ರಾರಂಭ ಆಗಿ. ಎಲ್ಲರಿಗೂ ಇಷ್ಟವಾಗುವಂತ ಕಥೆ ಸಿಂಪಲ್ಲಾಗಿದ್ದರೂ ವಿಭಿನ್ನವಾಗಿ ತೋರಿಸುವ ಪ್ರಯತ್ನ ಮಾಡಲಾಗಿದೆ’ ಎಂದು ತಿಳಿಸಿದರು.
`ಖಾರ ಎಂಟರ್ಟೈನ್ಮೆಂಟ್’ ಸಂಸ್ಥೆಯ ಮೂಲಕ ನಿರ್ಮಿಸಿರುವ ಈ ಚಿತ್ರವನ್ನು ಅರ್ಜುನ್ ಲೂಯಿಸ್ ಮತ್ತು ಅಕ್ಷಿತ್ ಶೆಟ್ಟಿ ನಿರ್ದೇಶಿಸಿದ್ದಾರೆ. ಮುಖೇಶ್ ಹೆಗ್ಡೆ ಅವರ ಪುತ್ರ ಪ್ರಣವ್ ಹೆಗ್ಡೆ ನಾಯಕ ನಟನಾಗಿ ಅಭಿನಯಿಸುತ್ತಿದ್ದಾರೆ.
ಇವರು ರಂಗಾಯಣದ ವಿದ್ದು ಉಚ್ಚಿಲ ಮತ್ತು ಒಂದು ಮೊಟ್ಟೆ ಖ್ಯಾತಿಯ ರಾಜ್ ಬಿ ಶೆಟ್ಟಿ ಅವರಿಂದ ನಟನೆಯ ತರಬೇತಿ ಪಡೆದು ಚಲನಚಿತ್ರ ಅಭಿನಯ ಕ್ಷೇತ್ರ ಪ್ರವೇಶ ನಡೆಸಿದ್ದಾರೆ. ಅಹಲ್ಯಾ ಸುರೇಶ್ ಮತ್ತು ರಾಧಿಕಾ ರಾವ್ ನಾಯಕಿಯಾಗಿ ಅಭಿನಯಿಸಿ ದ್ದಾರೆ. ಪ್ರಕಾಶ್ ಕೆ ತೂಮಿನಾಡು, ವಿ.ಜೆ ವಿನೀತ್, ಕಾರ್ತಿಕ್ ವರದ ರಾಜು, ದೀಪಕ್ ರೈ ಪಾಣಾಜೆ, ರೂ ಪಾ ವರ್ಕಾಡಿ ಮುಂತಾದವರು ಇತರ ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿ ದ್ದಾರೆ ಎಂದು ವಿವರಿಸಿದರು.
ವರು ರಂಗಾಯಣದ ವಿದ್ದು ಉಚ್ಚಿಲ ಮತ್ತು ಒಂದು ಮೊಟ್ಟೆ ಖ್ಯಾತಿಯ ರಾಜ್ ಬಿ ಶೆಟ್ಟಿ ಅವರಿಂದ ನಟನೆಯ ತರಬೇತಿ ಪಡೆದು ಚಲನಚಿತ್ರ ಅಭಿನಯ ಕ್ಷೇತ್ರ ಪ್ರವೇಶ ನಡೆಸಿದ್ದಾರೆ. ಅಹಲ್ಯಾ ಸುರೇಶ್ ಮತ್ತು ರಾಧಿಕಾ ರಾವ್ ನಾಯಕಿಯಾಗಿ ಅಭಿನಯಿಸಿ ದ್ದಾರೆ. ಪ್ರಕಾಶ್ ಕೆ ತೂಮಿನಾಡು, ವಿ.ಜೆ ವಿನೀತ್, ಕಾರ್ತಿಕ್ ವರದ ರಾಜು, ದೀಪಕ್ ರೈ ಪಾಣಾಜೆ, ರೂ ಪಾ ವರ್ಕಾಡಿ ಮುಂತಾದವರು ಇತರ ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿ ದ್ದಾರೆ ಎಂದು ವಿವರಿಸಿದರು.
ತಾಂತ್ರಿಕ ವರ್ಗದಲ್ಲಿ ರೀಜೋ ಪಿ.ಜಾನ್ ಛಾಯಾಗ್ರಹಣ, ಪ್ರಸಾದ್ ಕೆ. ಶೆಟ್ಟಿ ಸಂಗೀತ, ಮನು ಶೇಡ್ಗಾರ್ ಸಂಕಲನ, ಅರ್ಜುನ್ ಲೂವಿಸ್ ಸಾಹಿತ್ಯ, ರಕ್ಷಿತ್ ರೈ ಸಹ ನಿರ್ದೇಶನ ಹಾಗೂ ಹೈಟ್ ಮಂಜು, ವಿನಾಯಕ ಆಚಾರ್ಯ, ಚೇತಕ್ ಕುಲಾಕ್ ಮತ್ತು ಅಕ್ಷಿತ್ ಶೆಟ್ಟಿಯವರ ನೃತ್ಯ ನಿರ್ದೇಶನವಿದೆ ಎಂದು ವಿವರಿಸಿದರು.