‘ಲುಂಗಿ’ 50 ರ ಸಂಭ್ರಮ

ಮಂಗಳೂರು: ಖಾರ ಎಂಟರ್‌ಟೈನ್ ಮೆಂಟ್ ಬ್ಯಾನರ್‌ನಲ್ಲಿ ತಯಾರಾದ ಮುಖೇಶ್ ಹೆಗ್ಡೆ ನಿರ್ಮಾಣದ ಅರ್ಜುನ್ ಲೂಯಿಸ್ ಹಾಗೂ ಅಕ್ಷಿತ್ ಶೆಟ್ಟಿ ನಿರ್ದೇಶನದ ಲುಂಗಿ ಕನ್ನಡ ಸಿನಿಮಾ 50 ದಿನಗಳ ಪ್ರದರ್ಶನದ ಸಂಭ್ರಮವನ್ನು ಭಾರತ್ ಮಾಲ್‌ನ ಬಿಗ್ ಸಿನಿಮಾದಲ್ಲಿ ನಡೆಸಲಾಯಿತು.


ಯಂಗ್ ಟಾಲೆಂಟ್‌ಡ್ ಹುಡುಗರು ಮಾಡಿದ ಸಿನಿಮಾ 50 ದಿನಗಳನ್ನು ಯಶಸ್ವಿಯಾಗಿ ಪೂರೈಸಿ ಮುನ್ನಡೆಯುತ್ತಿದೆ. ಎಲ್ಲಾ ವರ್ಗದ ಪ್ರೇಕ್ಷಕರು ಸಿನಿಮಾವನ್ನು ಇಷ್ಟಪಟ್ಟಿದ್ದಾರೆ ಎಂದು ಸಿನಿಮಾದ ನಿರ್ಮಾಪಕ ಮುಖೇಶ್ ಹೆಗ್ಡೆ ತಿಳಿಸಿದರು.
ಎಲ್ಲರಿಗೂ ಇಷ್ಟವಾಗುವ ಕಥೆ ಸಿಂಪಲ್ಲಾಗಿದ್ದರೂ ವಿಭಿನ್ನವಾಗಿ ತೋರಿಸುವ ಪ್ರಯತ್ನವನ್ನು ನಿರ್ದೇಶಕರು ಮಾಡಿದ್ದಾರೆ ಎಂದು ನಟ ಪ್ರಣವ್ ಹೆಗ್ಡೆ ತಿಳಿಸಿದರು.
ಲುಂಗಿ ಸಿನಿಮಾದ ಮೂಲಕ ಕನ್ನಡಕ್ಕೆ ಒಬ್ಬ ನವನಟನ ಆಗಮನ ಆಗಿದೆ. ಮುಂದಿನ ದಿನಗಳಲ್ಲಿ ಪ್ರಣವ್ ಹೆಗ್ಡೆ ಚಿತ್ರರಂಗದಲ್ಲಿ ಉತ್ತಮ ನಟನಾಗಿ ಬೆಳೆಯಲಿ ಎಂದು ನಟ ದೇವದಾಸ್ ಕಾಪಿಕಾಡ್ ಶುಭ ಹಾರೈಸಿದರು.


ಸಮಾರಂಭದಲ್ಲಿ ಬಿಗ್‌ಸಿನಿಮಾಸ್‌ನ ವ್ಯವಸ್ಥಾಪಕ ಬಾಲಕೃಷ್ಣಶೆಟ್ಟಿ, ಡಾ. ಸುರೇಶ್, ವಿಶ್ವನಾಥ ಅಸೈಗೋಳಿ ಮೊದಲಾದವರು ಉಪಸ್ಥಿತರಿದ್ದರು.
ಲುಂಗಿ ಸಿನಿಮಾದಲ್ಲಿ ಮಂಗಳೂರಿನ ಸೊಗಡಿನಲ್ಲಿ ನಡೆಯುವ ಕಥೆ ಹೊಂದಿದ್ದು, ಹಾಸ್ಯದ ಲೇಪನದೊಂದಿಗೆ ಯುವ ಜನತೆಗೆ ಒಂದು ಉತ್ತಮವಾದ ಸಂದೇಶವನ್ನು ನೀಡುತ್ತಾ ಬಂದಿದೆ. ಸಿನಿಮಾದಲ್ಲಿ ಅಹಲ್ಯಾ ಸುರೇಶ್ ಮತ್ತು ರಾಧಿಕಾರಾವ್ ನಾಯಕಿ ನಟರಾಗಿ ಅಭಿನಯಿಸಿದ್ದಾರೆ. ಪ್ರಕಾಶ್ ತುಮಿನಾಡು, ವಿಜೆ ವಿನೀತ್, ಕಾರ್ತಿಕ್ ವರದರಾಜು, ದೀಪಕ್ ರೈ ಪಾಣಾಜೆ, ಜಯರಾಜ್, ರೂಪಾ ವರ್ಕಾಡಿ ಮೊದಲಾದವರು ತಾರಾಗಣದಲ್ಲಿ ಇದ್ದಾರೆ

Leave a Reply

Your email address will not be published. Required fields are marked *

error: Content is protected !!