ಉಡುಪಿಯಲ್ಲಿ ಪಾಕಿಸ್ತಾನದ ಉಗ್ರನ ಪತ್ತೆಗೆ ಲುಕ್‌ಔಟ್ ನೋಟೀಸ್

ಉಡುಪಿ: ಪಾಕಿಸ್ತಾನದ ಉಗ್ರನೊರ್ವ ತಮಿಳುನಾಡುವಿನಿಂದ  ತಪ್ಪಿಸಿಕೊಂಡು ಕರಾವಳಿ ಭಾಗದಲ್ಲಿ ಅವಿತಿರುವ ಸಾಧ್ಯತೆಯಿದ್ದು ,ಈತನ ಪತ್ತೆಗೆ ಪೊಲೀಸರು ಸಾರ್ವಜನಿಕರ ಸಹಕಾರ ಕೋರಿದ್ದಾರೆ.

 ಮಲ್ಪೆ ಕರಾವಳಿ ಕಾವಲು ಪಡೆಯು ಶಂಕಿತ  ಉಗ್ರನ ಪತ್ತೆಗೆ ಲುಕ್‌ಔಟ್ ನೋಟಿಸು ಜಾರಿ ಮಾಡಿದೆ. ಶಂಕಿತ ಪಾಕಿಸ್ತಾನಿ ಉಗ್ರನ ಭಾವಚಿತ್ರವನ್ನು  ಮಲ್ಪೆಯ ಬಂದರು, ಬೀಚ್ ಪಡುಕೆರೆ ,ಕೆಮ್ಮಣ್ಣು ,ಹೂಡೆಯ ಸಾರ್ವಜನಿಕ ಪ್ರದೇಶದಲ್ಲಿ ಹಾಕಲಾಗಿದ್ದು ಶಂಕಿತನ ಬಗ್ಗೆ ಏನಾದರೂ ಮಾಹಿತಿ ಇದ್ದರೆ ತಿಳಿಸಲು ಕೋರಿಕೊಂಡಿದ್ದಾರೆ.

ಕಳೆದ ಎರಡು ದಿನಗಳ ಹಿಂದೆ ಉಗ್ರಗಾಮಿ ಸಂಘಟನೆಯ 6 ಜನರ ತಂಡವೊಂದು ತಮಿಳುನಾಡು ಪ್ರವೇಶಿಸಿದ ಬಗ್ಗೆ ಮಾಹಿತಿಬಂದಿದ್ದು ಅದರಲ್ಲಿ ಓರ್ವ ಪಾಕಿಸ್ತಾನದ ಪ್ರಜೆಯಾಗಿರುತ್ತಾನೆ ಎಂಬುದಾಗಿ ತಿಳಿದು ಬಂದಿರುತ್ತದೆ.

ಇವರು ಭಾರತದಲ್ಲಿ ವಿಧ್ವಂಸಕ ಕೃತ್ಯ ಎಸಗುವ ಸಾಧ್ಯತೆ ಇದೆ. ಆದ್ದರಿಂದ ಇವರ ಮೇಲೆ
ನಿಗಾ ವಹಿಸುವುದಕ್ಕಾಗಿ  ಮಲ್ಪೆ  ಠಾಣೆ ವ್ಯಾಪ್ತಿಯ ಸಮುದ್ರದ ಹಾಗೂ ತೀರ ಪ್ರದೇಶದಲ್ಲಿ
ಇವರ ಚಹರೆ ಹಾಗೂ ಚಲನವಲನಗಳು ಕಂಡು ಬಂದಲ್ಲಿ ಕೂಡಲೇ ಕರಾವಳಿ ಕಾವಲು
ಪೊಲೀಸ್ ಠಾಣೆ ದೂ : 0820-2538299ಈ ನಂಬರಿಗೆ ಮಾಹಿತಿ ನೀಡಲು ಹಾಗೂ
ಕರಾವಳಿ ಕಾವಲು  ಉಡುಪಿ ಇದರ ಉಚಿತ ಸಹಾಯವಾಣಿ ನಂಬರ್ ‘1093’ ಗೆ
ಕರೆ ಮಾಡಿ ಮಾಹಿತಿ ನೀಡಲು ಪೊಲೀಸರು ಕೋರಿಕೊಂಡಿದ್ದಾರೆ.

Leave a Reply

Your email address will not be published. Required fields are marked *

error: Content is protected !!