ಸಾಲಗಾರರ ಮುಖದಲ್ಲಿ ಮಂದಹಾಸ, ಸಾಲಗಳ ಪಾವತಿ 3 ತಿಂಗಳು ಮುಂದೂಡಲು ಅವಕಾಶ:ಆರ್ ಬಿಐ

ನವದೆಹಲಿ: ದೀರ್ಘಾವಧಿ ಸಾಲಗಳ ಮಾಸಿಕ ಕಂತು ಪಾವತಿಯನ್ನು 3 ತಿಂಗಳ ವರೆಗೂ ಮುಂದೂಡುವ ಅವಕಾಶ ಕಲ್ಪಿಸಿದೆ. ಎಲ್ಲ ಬ್ಯಾಂಕ್‌ಗಳು ಇಎಂಐ ಪಾವತಿಗೆ 3 ತಿಂಗಳ ಅವಕಾಶ ನೀಡಲು ಅನುಮತಿ ನೀಡಲಾಗಿದೆ ಎಂದು ಶಕ್ತಿಕಾಂತ ದಾಸ್‌ ತಿಳಿಸಿದರು. 

ಭಾರತೀಯ ರಿಸರ್ವ್‌ ಬ್ಯಾಂಕ್‌ ಶುಕ್ರವಾರ ರೆಪೊ ದರ (ಆರ್‌ಬಿಐ ಬ್ಯಾಂಕ್‌ಗಳಿಗೆ ನೀಡುವ ಸಾಲದ ಮೇಲಿನ ಬಡ್ಡಿದರ) ಪ್ರಕಟಿಸಿದ್ದು, ಹಿಂದಿನ ದರದಲ್ಲಿ 75 ಅಂಶಗಳನ್ನು ಕಡಿತಗೊಳಿಸುವ ಮೂಲಕ ಶೇ 4.4 ನಿಗದಿ ಪಡಿಸಿದೆ. 

ರಿವರ್ಸ್‌ ರೆಪೊ ದರ 90 ಅಂಶ ಕಡಿತಗೊಳಿಸಿದ್ದು, ಶೇ 4ರಷ್ಟು ನಿಗದಿ ಪಡಿಸಿರುವುದಾಗಿ ಆರ್‌ಬಿಐ ಗವರ್ನರ್‌ ಶಕ್ತಿಕಾಂತ ದಾಸ್‌. ಭಾರತೀಯ ರಿಸರ್ವ್‌ ಬ್ಯಾಂಕ್‌ನ ಹಣಕಾಸು ನೀತಿ ಸಮಿತಿಯು (ಎಂಪಿಸಿ) ಸಭೆ ನಡೆಸಿ ಈ ನಿರ್ಧಾರ ಪ್ರಕಟಿಸಲಾಗಿದೆ. 

ರೆಪೊ ದರ ಕಡಿತದಿಂದ ₹1.37 ಲಕ್ಷ ಕೋಟಿ ವ್ಯವಸ್ಥೆಯೊಳಗೆ ಹರಿಯಲಿದೆ ಎಂದಿದ್ದಾರೆ.

ಕಳೆದ ತಿಂಗಳು ರೆಪೊ ದರದಲ್ಲಿ ಯಾವುದೇ ಬದಲಾವಣೆ ಮಾಡದೆ ಶೇ 5.15 ಮುಂದುವರಿಸಲಾಗಿತ್ತು. 

ಕೊರೋನಾವೈರಸ್  ಸಾಂಕ್ರಾಮಿಕ ರೋಗದ ಹಾವಳಿ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಹೆಚ್ಚುತ್ತಿರುವ ಆರ್ಥಿಕ ವೆಚ್ಚದ ಕಾರಣದಿಂದಾಗಿ ಮೂಡಿಸ್ ಇನ್ವೆಸ್ಟರ್ಸ್ ಸರ್ವಿಸ್ 2020 ರ ಕ್ಯಾಲೆಂಡರ್ ವರ್ಷದಲ್ಲಿ ಭಾರತದ ಜಿಡಿಪಿ ಬೆಳವಣಿಗೆಯ ಅಂದಾಜನ್ನು ಹಿಂದಿನ  5.3 ಶೇಕಡಾದಿಂದ 2.5 ಶೇಕಡಕ್ಕೆ ಇಳಿಸಿದೆ.

ಇದು 2019 ರಲ್ಲಿ ಶೇಕಡಾ 5 ರ ಬೆಳವಣಿಗೆಗೆ ಹೋಲಿಕೆಯಾಗಲಿದ್ದು 2020 ರ ಅಂದಾಜು ಬೆಳವಣಿಗೆಯ ದರದಲ್ಲಿ, ಭಾರತದಲ್ಲಿ ಆದಾಯದತೀವ್ರ ಕುಸಿತ ಸಂಭವಿಸುವ ಸಾಧ್ಯತೆಯಿದೆ, ಇದು ದೇಶೀಯ ಬೇಡಿಕೆ ಮತ್ತು 2021 ರಲ್ಲಿ ಚೇತರಿಕೆಯ ವೇಗವನ್ನು ಇನ್ನಷ್ಟು ಪರಿಣಾಮವನ್ನುಂಟುಮಾಡಲಿದೆ.

 “ಭಾರತದಲ್ಲಿ, ಬ್ಯಾಂಕ್ ಮತ್ತು ಬ್ಯಾಂಕೇತರ ಹಣಕಾಸು ಕ್ಷೇತ್ರಗಳಲ್ಲಿನ ತೀವ್ರ ಸದಿಗ್ದತೆಯ ಕಾರಣ ಆರ್ಥಿಕತೆಗೆ ಸಾಲದ ಹರಿವು ಈಗಾಗಲೇ ತೀವ್ರವಾಗಿ ಅಡಚಣೆಯಾಗಿದೆ” ಎಂದು ಅದು ಹೇಳಿದೆ


Leave a Reply

Your email address will not be published. Required fields are marked *

error: Content is protected !!