ಬಂಟ್ವಾಳ ಆಸ್ಪತ್ರೆ,ಹಾಸ್ಟೆಲ್ ಗಳಿಗೆ ಲೋಕಾಯುಕ್ತರ ಭೇಟಿ
ಬಂಟ್ವಾಳ: ರಾಜ್ಯದ ಲೋಕಾಯುಕ್ತರಾದ ನ್ಯಾಯಮೂರ್ತಿ ಸಿ.ವಿಶ್ವನಾಥ ಶೆಟ್ಟಿ ಅವರು ಶನಿವಾರ ಬಂಟ್ವಾಳ ಪ್ರವಾಸದಲ್ಲಿದ್ದು,ಎರಡು ಹಾಸ್ಡೆಲ್ ಹಾಗೂ ಬಂಟ್ವಾಳ ಸಮುದಾಯ ಆರೋಗ್ಯ ಕೇಂದ್ರ ಹಾಗೂ ಪೊಳಲಿ ಶ್ರೀ ರಾಜರಾಜೇಶ್ವರೀ ದೇವಸ್ಥಾನಕ್ಕು ಭೇಟಿಯಿತ್ತರು. ಬಿ.ಮೂಡಗ್ರಾಮದ ಮೊಡಂಕಾಪುವಿನಲ್ಲಿ ಸಮಾಜ ಕಲ್ಯಾಣ ಇಲಾಖೆಯ ಅಧೀನದಲ್ಲಿರುವ ವಿದ್ಯಾರ್ಥಿ ನಿಲಯಕ್ಕೆ ಭೇಟಿ ನೀಡಿ, ಶಿಥಿಲಾವಸ್ಥೆಯಲ್ಲಿರುವ ಕಟ್ಟಡದ ಬಗ್ಗೆ ಮಾಹಿತಿ ಪಡೆದುಕೊಂಡರು.
ಹಳೆಯ ಕಟ್ಟಡವಾಗಿದ್ದರಿಂದ ಈ ಕಟ್ಟಡಕ್ಕೆ ಸುಣ್ಣ ,ಬಣ್ಷ ಬಳಿಯಲು ಮತ್ತು ವಠಾರದಲ್ಲಿ ಶುಚಿತ್ವ ಕಾಪಾಡಿ,, ಸೊಳ್ಳೆ ಉತ್ಪತ್ತಿ ಯಾಗದಂತೆ ಕ್ರಮ ಕೈಗೊಳ್ಳುವಂತೆ ಸೂಚಿಸಿದರು.
ಇದೇ ವೇಳೆ ವಿದ್ಯಾರ್ಥಿ ನಿಲಯದ ವಿದ್ಯಾರ್ಥಿ ಗಳು ಇಲಾಖೆಯ ವತಿಯಿಂದ ಪ್ರವಾಸದ ಅವಕಾಶ ಮಾಡಿಕೊಡುವಂತೆ ಲೋಕಾಯುಕ್ತರಲ್ಲಿ ಮನವಿ ಮಾಡಿಕೊಂಡರು. ಈ ಬಗ್ಗೆ ಅಧಿಕಾರಿ ಗಳಿಗೆ ತಿಳಿಸುವುದಾಗಿ ಭರವಸೆಯಿತ್ತರು. ಬಳಿಕ ಬಿ.ಸಿ.ರೋಡಿನಲ್ಲಿರುವ ಆಶ್ರಮ ಶಾಲೆಗೆ ಭೇಟಿಯಿತ್ತ ಲೋಕಾಯುಕ್ತ ನ್ಯಾಯಮೂರ್ತಿ ವಿಶ್ವನಾಥ ಶೆಟ್ಟಿ ಅವರು ನಾನು ಬರುತ್ತಿದ್ದೆನೆಂದು ವಸತಿ ಶಾಲೆಯನ್ನು ಶುಚಿತ್ವ ಮಾಡಿ ಇಟ್ಟಿದ್ದೀರಾ? ಗೋಡೆಯಲ್ಲಿ ಪಾಚಿ ಹಿಡಿದಿದೆ.ಕಟ್ಟಡ ಸೋರುತ್ತಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು. ಇಲ್ಲಿ ವಿದ್ಯಾರ್ಥಿಗಳಿಗೆ ನೀಡಲಾಗುತ್ತಿರುವ ಶಿಕ್ಷಣ,ಆಹಾರದ ಬಗ್ಗೆಯು ಮಾಹಿತಿ ಪಡೆದರಲ್ಲದೆ ಶೌಚಾಲಯದ ಶುಚಿತ್ವವನ್ನು ಪರಿಶೀಲಿಸಿದರು. ವಸತಿ ಶಾಲೆಯ ಹಿಂಭಾಗದಲ್ಲಿ ಪ್ಳೈವುಡ್ ಪ್ಯಾಕ್ಟರಿಯೊಂದರ ಕೊಳಕು ನೀರು ಹರಿಯುತ್ತಿರುವುದನ್ನು ಗಮನಿಸಿದ ಲೋಕಾಯುಕ್ತರು ಸಂಬಂಧಪಟ್ಟವರಿಗೆ ನೊಟೀಸ್ ಜಾರಿಗೊಳಿಸುವಂತೆ ಸೂಚಿಸಿದರಲ್ಲದೆ ಪುರಸಭೆಯ ಮುಖ್ಯಧಿಕಾರಿಯವರನ್ನು ಬುಲಾವ್ ಮಾಡಿದರು. ಇಲ್ಲಿ ಗುತ್ತಿಗೆಯಾಧಾರದಲ್ಲಿ ದುಡಿಯುವ ಶಿಕ್ಷಕರಿಗೆ ನೀಡಲಾಗುವ ವೇತನದ ಬಗ್ಗೆಯು ಮಾಹಿತಿ ಪಡೆದರು.
ಸರಕಾರಿ ಆಸ್ಪತ್ರೆಗೆ ಮೆಚ್ಚುಗೆ: ಬಂಟ್ವಾಳ ಸಮುದಾಯ ಆರೋಗ್ಯ ಕೇಂದ್ರಕ್ಕೆ ಭೇಟಿ ನೀಡಿ ಆಸ್ಪತ್ರೆ ಯ ಪ್ರತಿಘಟಕ ಗಳ ವೀಕ್ಷಣೆ ನಡೆಸಿದರು. ತಾಲೂಕು ಆರೋಗ್ಯ ಅಧಿಕಾರಿ ದೀಪಾ ಪ್ರಭು ಹಾಗೂ ವೈದ್ಯಾಧಿಕಾರಿ ಸದಾಶಿವ ಅವರಿಂದ ಮಾಹಿತಿ ಪಡೆದುಕೊಂಡರು. ಬಳಿಕ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಲೋಕಾಯುಕ್ತ ನ್ಯಾ.ವಿಶ್ವನಾಥ ಶೆಟ್ಟಿ ಅವರು,
ಆಸ್ಪತ್ರೆ ಯಲ್ಲಿ ನ ವೈದ್ಯಾಧಿಕಾರಿ ಗಳು ಸರಿಯಾಗಿ ಶುಶ್ರೂಷೆ ಮಾಡುವುರಿಂದ ಈ ಅಸ್ಪತ್ತೆಯಲ್ಲಿ ರೋಗಿಗಳು ಕ್ಯೂ ನಿಂತಿದ್ದಾರೆ ಎಂದು ಇಲ್ಲಿನ ಸರಕಾರಿ ಅಸ್ಪತ್ರೆಯ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು. ಸದ್ಯ ಈ ಆಸ್ಪತ್ರೆಯಲ್ಲಿ ಅರಿವಳಿಕೆ ತಜ್ಙರ ಕೊರತೆಯಿದ್ದು, ಈ ವೈದ್ಯರ ನೇಮಕವಾಗುವ ವರೆಗೆ ಹೊರಗುತ್ತಿಗೆಯಲ್ಲಿ ವೈದ್ಯರನ್ನು ನೇಮಕಮಾಡುವಂತೆ ಸೂಚಿಸಲಾಗಿದೆ.ಈ ಬಗ್ಗೆ ಸಂಬಂಧಪಟ್ಟವರ ಗಮನಕ್ಕು ತರಲಾಗುವುದು ಎಂದರು. ಇದೇ ವೇಳೆ ಆಸ್ಪತ್ರೆ ಯ ಡಿ.ಗ್ರೂಪ್ ನೌಕರರು ಕಳೆದ 4 ತಿಂಗಳಿನಿಂದ ಮಾಸಿಕ ವೇತನ ಸಿಗಲಿಲ್ಲ ಎಂದು ಲೋಕಾಯುಕ್ತರಲ್ಲಿ ಅಳಲನ್ಮು ತೋಡಿಕಕೊಂಡರು. ವೇತನ ವಿಳಂಬದ ಬಗ್ಗೆ ಅಧಿಕಾರಿಗಳಿಂದ ಮಾಹಿತಿ ಪಡೆದುಕೊಂಡ ಅವರು ಏಜೆನ್ಸಿಗಳಿಗೆ ಸೂಕ್ತ ನಿರ್ದೇಶನ ನೀಡುವಂತೆ ಸೂಚಿಸಿದರು. ಭೇಟಿ ನೀಡಿದ ಎರಡು ಹಾಸ್ಟೆಲ್ ಗಳು ಸುಧಾರಣೆಯಾಗಬೇಕಾದ ಅಗತ್ಯವಿದೆ.ಒಂದು ತಿಂಗಳಲ್ಲಿ ಸರಿಪಡಿಸುವಂತೆ ನಿರ್ದೇಶನ ನೀಡಲಾಗಿದೆ ಎಂದರು.
ಈ ಸಂದರ್ಭದಲ್ಲಿ ಲೋಕಾಯುಕ್ತ ಎಸ್.ಪಿ.ಕೆ.ಎನ್ ಮಾದಯ್ಯ, ಲೋಕಾಯುಕ್ತ ಇನ್ಸ್ ಪೆಕ್ಟರ್ ಭಾರತಿ, ಬಂಟ್ವಾಳ ಎ.ಎಸ್.ಪಿ.ಸೈದುಲು ಅಡಾವತ್, ಬಂಟ್ವಾಳ ನಗರ ಠಾಣೆಯ ಪೋಲೀಸ್ ಇನ್ಸ್ ಪೆಕ್ಟರ್ ಚಂದ್ರಶೇಖರ್, ಬಂಟ್ವಾಳ ತಹಶೀಲ್ದಾರ್ ರಶ್ಮಿ ಎಸ್.ಆರ್. ತಾಲೂಕು ವೈದ್ಯಾಧಿಕಾರಿ ಡಾ| ದೀಪಾ ಪ್ರಭು, ತಾಲೂಕು ಸಾರ್ವಜನಿಕ ಆರೋಗ್ಯ ಕೇಂದ್ರ ದ ವೈದ್ಯಾಧಿಕಾರಿ ಸದಾಶಿವ ಶಾನುಬೋಗ, ಹಿಂದುಳಿದ ವರ್ಗದ ಜಿಲ್ಲಾ ಅಧಿಕಾರಿ ಸಚಿನ್ ಕುಮಾರ್ ಸಮಾಜ ಕಲ್ಯಾಣಾಧಿಕಾರಿ ಮೋಹನ್ ಕುಮಾರ್,ಪ್ರಸಾದ್, ಪಾಣೆಮಂಗಳೂರು ಹೋಬಳಿ ಕಂದಾಯ ನಿರೀಕ್ಷಕ ರಾಮ ಕಾಟಿ ಪಳ್ಳ ಬಂಟ್ವಾಳ ಹೋಬಳಿ ಕಂದಾಯ ನಿರೀಕ್ಷಕ ನವೀನ್ ಬೆಂಜನ ಪದವು,ಸದಾಶಿವ ಕೈಕಂಬ ಮತ್ತಿತರರಿದ್ದರು.ನಂತರ ಪೊಳಲಿ ಕ್ಷೇತ್ರ ಕ್ಕೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದರು.ವಾಪಾಸ್ ಬಂಟ್ವಾಳ ಪ್ರವಾಸಿ ಮಂದಿರಕ್ಕೆ ಅಗಮಿಸಿದರು.