ಮಾಜಿ ಲೋಕಾಯುಕ್ತ ನ್ಯಾಯಮೂರ್ತಿ ಎನ್.ವೆಂಕಟಾಚಲ ಇನ್ನಿಲ್ಲ

ಬೆಂಗಳೂರು: ಲೋಕಾಯುಕ್ತರಾಗಿದ್ದ ನ್ಯಾಯಮೂರ್ತಿ ಎನ್.ವೆಂಕಟಾಚಲ (90) ಬುಧವಾರ ಮುಂಜಾನೆ ನಗರದ ಎಂ.ಎಸ್.ರಾಮಯ್ಯ ಆಸ್ಪತ್ರೆಯಲ್ಲಿ ನಿಧನರಾದರು. ಅವರು 2001ರಿಂದ 2006ರವರೆಗೆ ಲೋಕಾಯುಕ್ತರಾಗಿ ಸೇವೆ ಸಲ್ಲಿಸಿದ್ದರು.
ಆಡಳಿತ ವ್ಯವಸ್ಥೆಯಲ್ಲಿ ಹೆಚ್ಚುತ್ತಿರುವ ಭ್ರಷ್ಟಾಚಾರವನ್ನು ಮಟ್ಟ ಹಾಕಲೆಂದೇ ಕರ್ನಾಟಕದಲ್ಲಿ ಲೋಕಾಯುಕ್ತ ಸಂಸ್ಥೆಯನ್ನು ಸ್ಥಾಪಿಸಲಾಯಿತು. ಲಂಚ ಪಡೆಯುವುದರಲ್ಲಿ ನಿರತರಾಗಿದ್ದ ಅಧಿಕಾರಿಗಳು ಹಾಗೂ ನೌಕರರಲ್ಲಿ ಒಂದು ರೀತಿಯ ಭಯ, ಎಚ್ಚರವನ್ನು ಮೂಡಿಸುವ ಕೆಲಸ ಲೋಕಾಯುಕ್ತದಿಂದ ಸಾಧ್ಯವಾಯಿತು ಎನ್ನುವುದೂ ನಿಜ. ಅದರಲ್ಲೂ 2001ರಲ್ಲಿ ನ್ಯಾಯಮೂರ್ತಿ ಎನ್‌.ವೆಂಕಟಾಚಲ ಅವರು ಲೋಕಾಯುಕ್ತರಾಗಿ ನೇಮಕವಾದ ಬಳಿಕ ಲೋಕಾಯುಕ್ತ ಬಗ್ಗೆ ಸಾರ್ವಜನಿಕರಿಗೆ ಎಚ್ಚರ ಮೂಡುವಂತೆ ಆ ಸಂಸ್ಥೆ ಕಾರ್ಯ ನಿರ್ವಹಿಸಿತು.

ಜನರ ಪ್ರೀತಿಗೆ ಪಾತ್ರವಾದವರು

ಮೇಲ್ನೋಟಕ್ಕೆ ವೆಂಕಟಾಚಲ ಅವರ ಕಾರ್ಯವೈಖರಿ ಬಹು ಗಡಸು. ದಾಳಿ ಮತ್ತು ಕಚೇರಿ ಪರಿಶೀಲನೆಗೆ ಅವರ ಮೊದಲ ಪ್ರಾಶಸ್ತ್ಯ. ಅವರ ನೇಮಕವಾದದ್ದು ಎಸ್.ಎಂ.ಕೃಷ್ಣ ನೇತೃತ್ವದ ಕಾಂಗ್ರೆಸ್‌ ಸರ್ಕಾರದ ಕಾಲದಲ್ಲಿ. ಮೇಲ್ನೋಟಕ್ಕೆ ಕೃಷ್ಣ ಜಾತಿ ರಾಜಕಾರಣ ಮಾಡಿದ್ದಾರೆ ಎಂದು ಜನರ ಮನಸ್ಸಿನಲ್ಲಿ ಇಣುಕಿದ ಸಂಶಯವನ್ನು ವೆಂಕಟಾಚಲ ಬೇಗನೇ ಹೊಡೆದು ಹಾಕಿದರು.

ವಿವಿಧ ಕಚೇರಿಗಳಿಗೆ ಭೇಟಿ ಇತ್ತು, ಜನರಿಗೆ ಸೌಲಭ್ಯ ಕಲ್ಪಿಸುವಲ್ಲಿ ಆಗುವ ವಿಳಂಬಕ್ಕೆ ಚಾಟಿ ಏಟು ಕೊಟ್ಟು ಕೆಳಮಟ್ಟದ ಕಚೇರಿಗಳ ಕಾರ್ಯವೈಖರಿಯಲ್ಲಿ ಒಂದು ತರಹದ ಚುರುಕುತನ ತಂದರು.
‘ಬ್ರಿಟನ್‌ನಲ್ಲಿ ಅನುಸರಿಸುತ್ತಿರುವ ಭ್ರಷ್ಟಾಚಾರ ತಡೆ ಕಾನೂನನ್ನು ಭಾರತದಲ್ಲಿಯೂ ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸುವುದರಿಂದ ಮಾತ್ರ ಪ್ರಧಾನಿ ಕಚೇರಿಯಿಂದ ಹಿಡಿದು ಕೆಳಹಂತದವರೆಗಿನ ಭ್ರಷ್ಟಾಚಾರವನ್ನು ಕೊನೆಗಾಣಿಸಲು ಸಾಧ್ಯ’ ಎಂದು ನಿವೃತ್ತ ಲೋಕಾಯುಕ್ತ ನ್ಯಾಯಮೂರ್ತಿ ಎನ್. ವೆಂಕಟಾಚಲ ಆಗಾಗ ಹೇಳುತ್ತಿದ್ದರು. ವೆಂಕಟಾಚಲ ಇಂದು ನಮ್ಮೊಂದಿಗಿಲ್ಲದಿದ್ದರು ಅವರ ಕಾರ್ಯ ವೈಖರಿ ಜನರ ಮನಸಿನಲ್ಲಿ ಅಚ್ಹೊತ್ತಿದ್ದೆ.

Leave a Reply

Your email address will not be published. Required fields are marked *

error: Content is protected !!