ಲಾಕ್ ಡೌನ್: ಚಿನ್ನ ಬೆಳ್ಳಿ ಕೆಲಸಗಾರರ ಸ್ಥಿತಿ ಶೋಚನೀಯ

ಉಡುಪಿ: ತಲತಲಾಂತರಗಳಿಂದ ಚಿನ್ನ ಬೆಳ್ಳಿ ಕೆಲಸವನ್ನು ಕುಲಕಸುಬಾಗಿ ಮಾಡಿಕೊಂಡು ಇದನ್ನೇ ನಂಬಿಕೊಂಡು ಉಡುಪಿ ಜಿಲ್ಲೆಯಲ್ಲಿ ಸಮಾರು 6000 ದಿಂದ 8000  ಕುಟುಂಬ ಜೀವನ ನಿರ್ವಹಿಸುತ್ತಿದೆ. ಸುಮಾರು ಹತ್ತು ವರ್ಷಗಳಿಂದ ನಮ್ಮ ಕೆಲಸ ಬಹಳ ಕಡಿಮೆಯಾಗಿದ್ದು, ಇದಕ್ಕೆ ಕಾರಣ ಹೊರರಾಜ್ಯಗಳಿಂದ ಬರುವ ರೆಡಿಮೆಡ್ ಆಭರಣಗಳು ಹಾಗೂ ಬಂಡವಾಳ ಶಾಹಿಗಳು,ಬಂಗಾಳಿ ಕೆಲಸಗಾರರಿಂದಾಗಿ.
ಇವರುಗಳಿಂದಾಗಿ ನಮ್ಮ ಕೆಲಸಗಾರರಿಗೆ ಕೆಲಸ ತುಂಬಾ ಕಡಿಮೆಯಾಗಿ ಜೀವನ ನಿರ್ವಹಿಸುವುದೇ ಕಷ್ಟಕರವಾಗಿದೆ.  ಉದ್ಯಮಕ್ಕಾಗಿ ಬ್ಯಾಂಕುಗಳಲ್ಲಿ ಸಾಲ ಕೇಳಿದಾಗ ಸಾಲ ಸಿಗದೆ ಮನೆಯನ್ನು ಅಡವಿಟ್ಟು ಅಧಿಕ ಬಡ್ಡಿಯಲ್ಲಿ ಸಾಲ ಪಡೆದು ವ್ಯವಹಾರ ನಡೆಸುತ್ತಿದ್ದ ಸಮಯದಲ್ಲಿ ನೋಟ್ ಬ್ಯಾನ್ ಹಾಗೂ ಜಿಎಸ್ ಟಿ ಯಿಂದ ಚಿನ್ನ ದ ಕೆಲಸವು ಮತ್ತಷ್ಟು ಕುಸಿದಿದೆ.

ಇತ್ತೀಚಿನ ದಿನಗಳಲ್ಲಿ ಚಿನ್ನದ ದರ ವಿಪರೀತ ಏರುತ್ತಿದ್ದು ಕೆಲಸಗಾರರ ಸ್ಥಿತಿ ಶೋಚನೀಯವಾಗಿದೆ.  ಈ ರೀತಿ ಅಧಿಕ ಬಡ್ಡಿಯ ಸಾಲ ಪಡೆದ ಸಾಲಗಾರರು ನಷ್ಟ ಹೊಂದಿ ಆತ್ಮಹತ್ಯೆಗೆ ಶರಣಾಗಿದ್ದಾರೆ.ಇಂತಹ ಸಂಧರ್ಭದಲ್ಲಿ ನಾವು ಸರಕಾರಕ್ಕೆ ಸಾಲ ಮನ್ನಾ ಹಾಗೂ ಕಡಿಮೆ ಬಡ್ಡಿಯಲ್ಲಿ ಸಿಗುವ ಹಾಗೆ ಮನವಿಯನ್ನು ಸಲ್ಲಿಸಿದ್ದೇವೆ. ಇದೀಗ ಕೋವಿಡ್ 19 ಕೊರೋನಾ ವೈರಸ್ ಮಹಾಮಾರಿಯಿಂದಾಗಿ ಮಾರ್ಚ್ 22 ರಿಂದ ಲಾಕ್ ಡೌನ್‌ ನಿಂದ ಪ್ರತಿಯೊಬ್ಬರೂ ಮನೆಯಲ್ಲೇ ಕುಳಿತಿರಬೇಕಾದ ಪರಿಸ್ಥಿತಿ ಬಂದಿದೆ.

ಮೊದಲೇ ಕೆಲಸವೇ ಕಡಿಮೆ ಹಾಗೂ ಕೆಲಸವಿಲ್ಲದೆ ತಕ್ಕಮಟ್ಟಿಗೆ ಜೀವನ ನಡೆಸುತ್ತಿದ್ದ ಕೆಲಸಗಾರರು ಆರ್ಥಿಕವಾಗಿ ಸಂಕಷ್ಟವಾಗಿ ಉಪವಾಸದಲ್ಲಿ ಇರಬೇಕಾದ ಪರಿಸ್ಥಿತಿ ಬಂದಿದೆ.
ಚಿನ್ನ ಬೆಳ್ಳಿ ಕೆಲಸಗಾರರನ್ನು ಅಸಂಘಟಿತ ಕಾರ್ಮಿಕ ಅಡಿಯಲ್ಲಿ ನಮಗೆ ಸರಕಾರದಿಂದ ಯಾವುದೇ ಸವಲತ್ತುಗಳು ಸಿಗುತ್ತಿಲ್ಲ. ಹಾಗಾಗಿ ಕಟ್ಟಡ ಕಾರ್ಮಿಕರಿಗೆ ಸಿಗುವ ಎಲ್ಲಾ ಸವಲತ್ತುಗಳು ನಮಗೂ ಸಿಗಬೇಕು ಎಂದು ಈ ಮೂಲಕ ಸರಕಾರಕ್ಕೆ ಒತ್ತಾಯ ಪಡಿಸುತ್ತೇವೆ. ಇದೆಲ್ಲವನ್ನೂ ಗಮನಿಸಿ ಸರಕಾರವು ಚಿನ್ನ ಬೆಳ್ಳಿ ಕೆಲಸಗಾರರಿಗೆ ಆರ್ಥಿಕ ಸಹಾಯ ಹಾಗೂ ಆಹಾರದ ಕಿಟ್ ಅನ್ನು ನೀಡಬೇಕೆಂದು ಆಗ್ರಹಿಸುತ್ತೇವೆ.
 ಕಿಶೋರ್ ಆರ್. ಆಚಾರ್ಯ ಜಿಲ್ಲಾ ಅಧ್ಯಕ್ಷರು ಉಡುಪಿ ಚಿನ್ನ,ಬೆಳ್ಳಿ ಕೆಲಸಗಾರರ ಸಂಘ (ರಿ)

3 thoughts on “ಲಾಕ್ ಡೌನ್: ಚಿನ್ನ ಬೆಳ್ಳಿ ಕೆಲಸಗಾರರ ಸ್ಥಿತಿ ಶೋಚನೀಯ

Leave a Reply

Your email address will not be published. Required fields are marked *

error: Content is protected !!