ರಾಜ್ಯದಲ್ಲಿ ಬುಧವಾರದಿಂದ ಲಾಕ್’ಡೌನ್ ಸಡಿಲಿಕೆ

ಬೆಂಗಳೂರು: ಲಾಕ್’ಡೌನ್ ವೇಳೆ ಕೇಂದ್ರ ಗೃಹ ಇಲಾಖೆಯ ಮಾರ್ಗಸೂಚಿಗಳನ್ನು ಪಾಲನೆ ಮಾಡುವ ಅವಧಿಯನ್ನು ಎರಡು ದಿನ ವಿಸ್ತರಣೆ ಮಾಡಿ ಸರ್ಕಾರದ ಮುಖ್ಯ ಕಾರ್ಯದರ್ಶಿ ಟಿ.ಎಂ,.ವಿಜಯ್ ಭಾಸ್ಕರ್ ಆದೇಶಿಸಿದ್ದಾರೆ. ಹೀಗಾಗಿ ರಾಜ್ಯದಲ್ಲಿ ಲಾಕ್’ಡೌನ್ ಸಡಿಲಿಕೆಯು ಬುಧವಾರದಿಂದ ಅನ್ವಯವಾಗಲಿದೆ. 

ಕೇಂದ್ರ್ದ ಮಾರ್ಗೂಸೂಚಿಗಳ ಪಾಲನೆ ಅವಧಿಯು ಸೋಮವಾರದವರೆಗೆ ಇದ್ದು, ಇದೀಗ ಮಂಗಳವಾರ ಮಧ್ಯರಾತ್ರಿವರೆಗೂ ವಿಸ್ತರಿಸಲಾಗಿದೆ. ಸೋಮವಾರ ಸಚಿವ ಸಂಪುಟ ಸಭೆ ಇದ್ದು, ಈ ವೇಳೆ ಕೆಲವು ತೀರ್ಮಾನ ಕೈಗೊಂಡು ಮಾರ್ಗಸೂಚಿಗಳ ಆದೇಶ ಹೊರಡಿಸಬೇಕು. ಇದಕ್ಕೆ ಒಂದು ದಿನ ಕಾಲಾವಕಾಶ ಅಗತ್ಯ ಇರುವ ಕಾರಣ, ಸೋಮವಾರದವರೆಗೆ ಇದ್ದ ಪಾಲನೆ ಅವಧಿಯನ್ನು ಒಂದು  ದಿನಕ್ಕೆ ವಿಸ್ತರಣೆ ಮಾಡಲಾಗಿದೆ. 

ಜಿಲ್ಲಾಧಿಕಾರಿಗಳು, ಪೊಲೀಸ್ ವರಿಷ್ಠಾಧಿಕಾರಿಗಳು, ಸರ್ಕಾರದ ಎಲ್ಲಾ ಇಲಾಖೆಗಳು ಕೇಂದ್ರದ ಮಾರ್ಗಸೂಚಿಗಳನ್ನು ಮಂಗಳವಾರದವರೆಗೆ ಪಾಲನೆ ಮಾಡಬೇಕು ಎಂದು ಆದೇಶದಲ್ಲಿ ಸೂಚಿಸಲಾಗಿದೆ. 

ಮಂಗಳವಾರದವರೆಗೆ ಕೇಂದ್ರದ ಮಾರ್ಗಸೂಚಿಗಳು ಅನ್ವಯವಾಗುವುದರಿಂದ ಬುಧವಾರದಿಂದ ರಾಜ್ಯ ಸರ್ಕಾರ ಸಚಿವ ಸಂಪುಟದಲ್ಲಿ ಕೈಗೊಳ್ಳುವ ನಿರ್ಣಯಗಳು ಜಾರಿಯಾಗಲಿವೆ. ಸರ್ಕಾರವು ಈಗಾಗಲೇ ಲಾಕ್’ಡೌನ್ ನಿಯಮಗಳನ್ನು ಸಡಿಲಿಕೆ ಮಾಡಲು ತೀರ್ಮಾನಿಸಿದೆ. ಆರ್ಥಿಕ ಚಟುವಟಿಕೆ ಪ್ರಾರಂಭ ಮಾಡುವ ದೃಷ್ಟಿಯಿಂದ ಸಡಿಲಿಕೆ ಮಾಡಲು ಮುಂದಾಗಿದೆ. ಮಂಗಳವಾರದವರೆಗೆ ಕೇಂದ್ರದ ಮಾರ್ಗಸೂಚಿಗಳು ಜಾರಿಯಲ್ಲಿರುವ ಕಾರಣ ಬುಧವಾರದಿಂದ ರಾಜ್ಯದ ಮಾರ್ಗಸೂಚಿಗಳು ಕಾರ್ಯರೂಪಕ್ಕೆ ಬರಲಿವೆ ಎಂದು ತಿಳಿದುಬಂದಿದೆ . 

Leave a Reply

Your email address will not be published. Required fields are marked *

error: Content is protected !!