ಲಾಕ್ ಡೌನ್ ವಿಸ್ತರಣೆ ಅರ್ಚಕ ಆತ್ಮಹತ್ಯೆ
ಉಡುಪಿ: ಲಾಕ್‌ಡೌನ್ ವಿಸ್ತರಣೆಯಿಂದ ಮನನೊಂದು ಕಾರ್ಕಳ ಮೂಲಕ ಅರ್ಚಕರೊಬ್ಬರು ಮುಂಬೈನ ಕಾಂದಿವಲಿಯ ದೇವಸ್ಥಾನದ ಆವರಣದಲ್ಲಿ ನೇಣುಬಿಗಿದುಕೊಂಡು ಮಂಗಳವಾರ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಕಾರ್ಕಳದ ನಿರೆಬೈಲೂರು ನಿವಾಸಿ ಕೃಷ್ಣ ಎಂಬುವರು ಆತ್ಮಹತ್ಯೆ ಮಾಡಿಕೊಂಡ ವ್ಯಕ್ತಿ.
ಮಾರ್ಚ್ 17ರಂದು ಮುಂಬೈನ ಕಾಳಿ ದೇವಸ್ಥಾನದಲ್ಲಿ ಪೂಜಾ ಕೈಂಕರ್ಯ ನೆರವೇರಿಸಲು ತೆರಳಿದ್ದರು. ಲಾಕ್‌ಡೌನ್ ಘೋಷಣೆ ಬಳಿಕ ಅಲ್ಲಿಂದ ಊರಿಗೆ ಬರಲು ಸಾಧ್ಯವಾಗಿರಲಿಲ್ಲ. ಅಲ್ಲೂ ಪೂಜಾ ಕೈಂಕರ್ಯದ ಕೆಲಸಗಳಿಲ್ಲದೆ ಮಾನಸಿಕವಾಗಿ ಒತ್ತಡಕ್ಕೆ ಸಿಲುಕಿದ್ದರು.
ಏಕಾಏಕಿ ಮಂಗಳವಾರ ದೇವಸ್ಥಾನದ ಸಮಿತಿಯಿಂದ ಕೊಡಲಾಗಿದ್ದ ಕೋಣೆಯಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಕುಟುಂಬದ ಮೂಲಗಳು ತಿಳಿಸಿವೆ