ಲಾಕ್’ಡೌನ್ ಮೇ 3 ವರೆಗೆ ವಿಸ್ತರಣೆ: ಪ್ರಧಾನಿ ನರೇಂದ್ರ ಮೋದಿ

ನವದೆಹಲಿ:(ಉಡುಪಿ ಟೈಮ್ಸ್ ವರದಿ)ದೇಶದ ಜನತೆಯ ಸಹಕಾರದಿಂದ ಕೊರೋನಾ ಒಂದಷ್ಟು ಮಟ್ಟಿದೆ ನಿಯಂತ್ರಣಕ್ಕೆ ಬರಲು ಅನುಕೂಲವಾಗಿದ್ದು, ಕೊರೋನಾ ಹತ್ತಿಕ್ಕಲು ದೇಶದಾದ್ಯಂತ ಮೇ.3ರವರೆಗೂ ಲಾಕ್’ಡೌನ್ ಮುಂದೂಡುವ ಅಗತ್ಯವಿದೆ ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಮಂಗಳವಾರ ಹೇಳಿದ್ದಾರೆ. 

ಮಹಾಮಾರಿ ಕೊರೋನಾ ವೈರಸ್ ನಿಗ್ರಹಕ್ಕಾಗಿ ಮಾರ್ಚ್ 24 ರಂದು ಘೋಷಣೆ ಮಾಡಿದ್ದ ಸುದೀರ್ಘ 21 ದಿನಗಳ ಭಾರತ ಲಾಕ್ ಡೌನ್ ಮಂಗಳವಾರ ಮುಕ್ತಾಯಗೊಳ್ಳಲಿದೆ. ಈ ಹಿನ್ನೆಲೆಯಲ್ಲಿ ಇಂದು ಜನತೆಯನ್ನುದ್ದೇಶಿಸಿ ಮಾತನಾಡುತ್ತಿರುವ ಪ್ರಧಾನಿ ಮೋದಿಯವರು, ನಿಮ್ಮ ಸಹಕಾರದಿಂದ ಕೊರೋನಾ ವೈರಸ್ ಒಂದಿಷ್ಟು ಮಟ್ಟಿಗೆ ನಿಯಂತ್ರಣಕ್ಕೆ ಬರಲು ಅನುಕೂಲವಾಗಿದೆ ಎಂದು ಹೇಳಿದ್ದಾರೆ. 

ಇದೇ ವೇಳೆ ಅಂಬೇಡ್ಕರ್ ಜಯಂತಿ ಹಿನ್ನೆಲೆಯಲ್ಲಿ ಬಾಬಾ ಸಾಹೇಬ್ ಅವರನ್ನು ನೆನೆದ ಅವರು, ಸಾಮೂಹಿಕ ಶಕ್ತಿಯ ಪ್ರದರ್ಶನದ ಸಂಕಲ್ಪವೇ ಬಾಬಾ ಸಾಹೇಬರಿಗೆ ಅರ್ಪಿಸುವ ನಿಜವಾದ ಶ್ರದ್ಧಾಂಜಲಿ ಎಂದು ಹೇಳಿದ್ದಾರೆ. 

ಭಾರತದ ಉತ್ಸವ, ಸಂಸ್ಕೃತಿಗಳಿಂದ ತುಬಂದಿದ್ದು, ಸದಾ ಹಸಿರಾಗಿದೆ. ವಿಷು, ಬೈಸಾಖಿ ಮುಂತಾದ ಹೊಸ ವರ್ಷದ ದಿನ ಇಂದು ಆರೋಗ್ಯಕ್ಕಾಗಿ ಪ್ರಾರ್ಥಿಸಿ ನಿಮಗೆಲ್ಲರಿಗೂ ಶುಭಾಶಯಗಳನ್ನು ಕೋರುತ್ತಿದ್ದೇನೆಂದಿದ್ದಾರೆ. 

ದೇಶಲ್ಲಿ ಸೋಂಕು ಪ್ರಕರಣಗಳು 550 ದಾಖಲಾಗಿದ್ದಾಗಲೇ 21 ದಿನನಗಳ ಲಾಕ್’ಡೌನ್ ಘೋಷಸಿಸಲಾಗಿತ್ತು. ಇದು ಭಾರೀ ಪ್ರಮಾಣದಲ್ಲಿ ಕೊರೋನಾ ಸೋಂಕು ಹರಡುವಿಕೆಗೆ ಕಡಿವಾಣ ಹಾಕಿತು. ಬೇರೆ ದೇಶಗಳಲ್ಲಿನ ಹಾನಿ ಗಮನಿಸಿದರೆ, ಭಾರತವು ಉತ್ತಮ ಸ್ಥಿತಿಯಲ್ಲಿದೆ. ಬೇರೆ ದೇಶಗಳಲ್ಲಿ 25-30 ಪಟ್ಟು ಅಧಿಕವಾಗಿದೆ. ಸಕಾಲಕ್ಕೆ ಸೂಕ್ತ ನಿರ್ಧಾರ ಕೈಗೊಳ್ಳದೇ ಹೋಗಿದ್ದರೆ, ನಾವು ಈ ಸ್ಥಿತಿಯಲ್ಲಿರುವುದು ಸಾಧ್ಯವಾಗುತ್ತಿರಲಿಲ್ಲ. ಲಾಕ್ ಡೌನ್ ಮೇ.3ರವರೆಗೆ ವಿಸ್ತರಣೆ ಮಾಡುವ ಅಗತ್ಯವಿದೆ. ಕೊರೋನಾ ಹೊಸ ಪ್ರದೇಶಕ್ಕೆ ಹರಡಲು ಬಿಡಬಾರದುು. ಕೊರೊನಾ ವಿರುದ್ಧ ಯುದ್ಧ ಮುಂದುವರಿಸುವುದು ಹೇಗೆ ಎಂಬ ಬಗ್ಗೆ ರಾಜ್ಯಗಳೊಂದಿಗೆ ನಿರಂತರ ಸಂಪರ್ಕದಲ್ಲಿದ್ದೇವೆ ಎಂದು ತಿಳಿಸಿದ್ದಾರೆ. ಅಲ್ಲದೆ, ರಾಜ್ಯ ಸರ್ಕಾರಗಳು, ಸ್ಥಳೀಯಾಡಳಿತಗಳು ಉತ್ತಮವಾಗಿ ಕಾರ್ಯ ನಿರ್ವಹಿಸಿವೆ ಎಂದು ಇದೇ ವೇಳೆ ಪ್ರಧಾನಿ ಮೋದಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. 

ಕೊರೋನಾ ಹಾಟ್ ಸ್ಪಾಟ್ ಆಗಿ ಪರಿಣಮಿಸಿರುವ ಪ್ರದೇಶಗಳನ್ನು ಗುರ್ತಿಸಿ ಕಠೋರ ಕ್ರಮಗಳನ್ನು ಕೈಗೊಳ್ಳಬೇಕಿದೆ. ಹಾಟ್’ಸ್ಪಾಟ್ ಗಳಲ್ಲಿ ಈ ಹಿಂದಿನದ್ದಿಕ್ಕಿಂತಲೂ ಹೆಚ್ಚಿನ ಗಮನವಹಿಸಿ, ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗುತ್ತದೆ. ಈ ಕುರಿತು ಏಪ್ರಿಲ್ 20 ರವರೆಗೂ ಪರಿಶೀಲನೆ ನಡೆಸಲಾಗುವುದು. ಹಾಟ್ ಸ್ಪಾಟ್ ಗಳಲ್ಲಿ ಪರಿಸ್ಥಿತಿ ಬದಲಾಗದಿದ್ದರೆ, ಎಲ್ಲವೂ ಕೈಮೀರಲಿದೆ. 

ಮೇ 3 ರವರೆಗೂ (19 ದಿನಗಳ) ಲಾಕ್’ಡೌನ್ ಕುರಿತಂತೆ ಏಪ್ರಿಲ್ 15 ರಂದು ಕೇಂದ್ರ ಸರ್ಕಾರದಿಂದ ಮಾರ್ಗಸೂಚಿ ಪ್ರಕಟವಾಗಲಿದೆ. ಕೃಷಿ, ಕಾರ್ಮಿಕರಿಗೆ, ದಿನಗೂಲಿ ನೌಕರರಿಗೆ ಹೊಸ ಮಾರ್ಗಸೂಚಿ ಅನ್ವಯ ವಿನಾಯಿತಿ ನೀಡಲಾಗುತ್ತದೆ. 

ಕೊರೋನಾ ಔಷಧಿ ಕಂಡು ಹಿಡಿಯುವ ನಿಟ್ಟಿನಲ್ಲಿ ಮುಂದಡಿ ಇಡುವಂತೆ ಭಾರತದ ಯುವ ವಿಜ್ಞಾನಿಗಲಲ್ಲಿ ಮನವಿ ಮಾಡಿಕೊಳ್ಳುತ್ತೇನೆ. ವಿಶ್ವ ಕಲ್ಯಾಣ, ಭಾರತ ಕಲ್ಯಾಣಕ್ಕೆ ಕೈಜೋಡಿಸಿ ಕೊರೋನಾ ವಿರುದ್ಧ ಗೆಲುವು ಸಾಧಿಸೋಣ. ವಯೋವೃದ್ಧರ ಮೇಲೆ ನಿಗಾ  ಇರಿಸಿ, ಅನಾರೋಗ್ಯ ಪೀಡಿತರ ಬಗ್ಗೆ ಹೆಚ್ಚಿನ ಗಮನ ಇರಲಿ. ಲಾಕ್’ಡೌನ್ ಸಾಮಾಜಿಕ ಅಂತರ ಪಾಲಿಸಿ, ಮನೆಯಲ್ಲೇ ತಯಾರಿಸಿದ ಮಾಸ್ಕ್ ಧರಿಸಿ. ನಿಮ್ಮ ರೋಗ ನಿರೋಧಕ ಶಕ್ತಿ ಹೆಚ್ಚಿಸಿಕೊಳ್ಳಲು ಆಯುಷ್ ಸಚಿವಾಲಯದ ಸೂಚನೆಗಳನ್ನು ಪಾಲನೆ ಮಾಡಿ. ಕೊರೋನಾ ವೈರಸ್ ಸೋಂಕು ಹರಡದಂತೆ ತಡೆಯಲು ಹೊರ ತಂದಿರುವ ಆರೋಗ್ಯ ಸೇತು ಆ್ಯಪ್ ಡೌನ್ಲೋಡ್ ಮಾಡಿ ಬಳಕೆ, ಮಾಡಿ. ಇತರರಿಗೂ ಈ ಬಗ್ಗೆ ಮಾಹಿತಿ ನೀಡಿ ಎಂದು ಮನವಿ ಮಾಡಿಕೊಂಡಿದ್ದಾರೆ. 

Leave a Reply

Your email address will not be published. Required fields are marked *

error: Content is protected !!