ಲಾಕ್ ಡೌನ್ ಎಫೆಕ್ಟ್: ಉಡುಪಿಯಲ್ಲಿ ಆರು ಮದ್ಯ ವ್ಯಸನಿಗಳ ಆತ್ಮಹತ್ಯೆ!
ಉಡುಪಿ: (ಉಡುಪಿ ಟೈಮ್ಸ್ ವರದಿ) ಜಿಲ್ಲೆಯಲ್ಲಿ ಕೊರೋನಾ ಸೋಂಕು ವ್ಯಾಪಕವಾಗಿ ಹರಡುತ್ತಿರುವುದರ ನಡುವೆ ಮದ್ಯ ಪ್ರಿಯರಿಗೆ ಕಳೆದ ಒಂದು ವಾರದಿಂದ ಮದ್ಯ ಸಿಗದೆ ಜಿಲ್ಲೆಯಲ್ಲಿ 6 ಜನ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಕಳೆದ ಐದು ದಿನಗಳಲ್ಲಿ ಆರು ಮಂದಿ ಆತ್ಮಹತ್ಯೆ ಮಾಡಿಕೊಂಡವರು
ಕಾರ್ಕಳದ ತೆಳ್ಳಾರು ಗ್ರಾಮದ ನಾಗೇಶ್ ಆಚಾರ್ಯ (37), ಕಾಪು ತಾಲೂಕು ಪಡು ಗ್ರಾಮದ ಶಶಿಧರ ಸುವರ್ಣ (46) ,ಕುಂದಾಪುರ ತಾಲೂಕು ಹೆಮ್ಮಾಡಿಯ ರಾಘವೇಂದ್ರ (37), ಕಾರ್ಕಳ ತಾಲೂಕು ವರಂಗ ಗ್ರಾಮದ ಅರವಿಂದ (37), ಬೆಳ್ಳಂಪಳ್ಳಿ ಗ್ರಾಮ ಕುಕ್ಕಿಕಟ್ಟೆ ವಾಲ್ಟರ್ ಡಿಸೋಜ (57), ಉದ್ಯಾವರ ಗ್ರಾಮದ ಗಣೇಶ (42) ಸಾವನ್ನಪ್ಪಿದ್ದಾರೆ.
ಜಿಲ್ಲಾಡಳಿತಕ್ಕೆ ಕೊರೋನಾ ಸೋಂಕು ವ್ಯಾಪಕವಾಗಿ ಹರಡದಂತೆ ಮುನ್ನೆಚ್ಚರಿಕೆ ಕ್ರಮ ತೆಗೆದುಕೊಳ್ಳುವುದರ ನಡುವೆ ಇದೀಗ ಕುಡುಕರು ಮದ್ಯವಿಲ್ಲದೆ ಆತ್ಮಹತ್ಯೆ ಮಾಡಿಕೊಳ್ಳುವುದನ್ನು ತಡೆಯುವುದೇ ದೊಡ್ಡ ತಲೆನೋವಿನ ಕೆಲಸವಾಗಿದೆ. ಜಿಲ್ಲಾಡಳಿತ ವ್ಯಸನಿಗಳನ್ನು ಕೌನ್ಸಿಲಿಂಗ್ ಮಾಡಲು ನಿರ್ಧರಿಸಿದ್ದು, ಅದಕ್ಕಾಗಿ ಜಿಲ್ಲಾ ಆರೋಗ್ಯ ಇಲಾಖೆಯಲ್ಲಿ ವೈದ್ಯರನ್ನು ನಿಯೋಜಿಸಿದೆ. ಅಗತ್ಯ ಇರುವವರು ಹಾಗೂ ವ್ಯಸನಿಗಳ ಮನೆಯವರು ಆರೋಗ್ಯ ಇಲಾಖೆಯ ಉಚಿತ ಕಾಲ್ ಸೆಂಟರಿಗೆ ಸಂಪರ್ಕಿಸ ಬಹುದೆಂದು ಉಡುಪಿ ಜಿಲ್ಲಾಧಿಕಾರಿ ಪತ್ರಿಕಾಗೊಷ್ಠಿಯಲ್ಲಿ ತಿಳಿಸಿದ್ದಾರೆ.
ಜಿಲ್ಲಾಡಳಿತ ವ್ಯಸನಿಗಳನ್ನು ಕೌನ್ಸಿಲಿಂಗ್ ಮಾಡಲು ನಿರ್ಧರಿಸಿದ್ದು, ಅದಕ್ಕಾಗಿ ಜಿಲ್ಲಾ ಆರೋಗ್ಯ ಇಲಾಖೆಯಲ್ಲಿ ವೈದ್ಯರನ್ನು ನಿಯೋಜಿಸಿದೆ. ಅಗತ್ಯ ಇರುವವರು ಹಾಗೂ ವ್ಯಸನಿಗಳ ಮನೆಯವರು ಆರೋಗ್ಯ ಇಲಾಖೆಯ ಉಚಿತ ಕಾಲ್ ಸೆಂಟರಿಗೆ ಸಂಪರ್ಕಿಸ ಬಹುದೆಂದು ಉಡುಪಿ ಜಿಲ್ಲಾಧಿಕಾರಿ ಪತ್ರಿಕಾಗೊಷ್ಠಿಯಲ್ಲಿ ತಿಳಿಸಿದ್ದಾರೆ.