ಉಡುಪಿ: ರಿಲಯನ್ಸ್ ಸ್ಮಾರ್ಟ್ ನಿಂದ ಹೊಸ ಬೆಳಕು ಆಶ್ರಮಕ್ಕೆ ದಿನಸಿ ಸಾಮಗ್ರಿಗಳ ಪೂರೈಕೆ
ಮಣಿಪಾಲ (ಉಡುಪಿ ಟೈಮ್ಸ್ ವರದಿ): ಕೊರೋನಾದ ಸೋಂಕು ಜನರ ಬದುಕನ್ನ ಮೂರಾಬಟ್ಟೆ ಮಾಡುತ್ತಿದ್ದೆ , ಕೇವಲ ಬಡವರ್ಗದವರು ಮಾತ್ರವಲ್ಲದೆ ಮಧ್ಯಮ ವರ್ಗದವರ ಸ್ಥಿತಿಯು ಕಂಗಾಲಾಗಿದೆ. ಇನ್ನೆಷ್ಟು ದಿನ ಈ ಸಂಕಟ ಎಂಬಂತಾಗಿದೆ. ಇಂತಹ ಸಮಯದಲ್ಲಿ ಅನೇಕ ಜನ ತಮ್ಮ ಸಹಾಯ ಅವಶ್ಯಕತೆಯಿರುವವರಿಗೆ ತಮ್ಮ ಕೈಲಾದ ಸೇವೆಯನ್ನು ಮಾಡುತ್ತಿದ್ದಾರೆ. ಉಡುಪಿ ನಗರದ ಪ್ರತಿಷ್ಠಿತ ಮಳಿಗೆ ರಿಲಯನ್ಸ್ ಸ್ಮಾರ್ಟ್ ಮಣಿಪಾಲದ ಸರಳಬೆಟ್ಟು ವಿನಲ್ಲಿರುವ ಹೊಸ ಬೆಳಕು ಆಶ್ರಮಕ್ಕೆ ದಿನಸಿ ಸಾಮಗ್ರಿಗಳನ್ನು ಪೂರೈಸಿದರು.
ಭಾರತ ಲಾಕ್ ಡೌನ್ ನಿಂದ ಆಗಿರುವ ತೊಂದರೆಗಳನ್ನು ಗ್ರಹಿಸಿ ಹೊಸ ಬೆಳಕು ಆಶ್ರಮಕ್ಕೆ ಅಕ್ಕಿ, ಬೆಳೆ. ಎಣ್ಣೆ. ಸಾಬೂನು ಹೀಗೆ ಸಾವಿರಾರು ರೂಪಾಯಿ ಮೌಲ್ಯದ ಸಾಮಗ್ರಿಗಳನ್ನು ನೀಡಿದ್ದಾರೆ. ಈ ಸಂದರ್ಭದಲ್ಲಿ ರಿಲಯನ್ಸ್ ಸ್ಮಾರ್ಟ್ ನ ಉಡುಪಿ ವಿಭಾಗದ ಮ್ಯಾನೇಜರ್ ಮೋಹನ್ ಕುಮಾರ್ , ಅಸಿಸ್ಟಂಟ್ ಮ್ಯಾನೇಜರ್ ಪ್ರವೀಣ್ ಕುಮಾರ್ , ಡಿಪಾರ್ಟ್ಮೆಂಟ್ ಮ್ಯಾನೇಜರ್ ಶೈಲೇಶ್ , ಮನೋಜ್ ಕುಮಾರ್, ವೀರೇಶ್ ಹೊಸ ಬೆಳಕು ಆಶ್ರಮದ ಟ್ರಸ್ಟಿ ತನುಲಾ ತರುಣ್ ಹಾಗು ವಿನಯಚಂದ್ರ ಸಾಸ್ತಾನ ಉಪಸ್ಥಿತರಿದ್ದರು.
“ಕರೋನ ಎಮರ್ಜೆನ್ಸಿಯಲ್ಲಿ ಬಡ ಹಾಗು ಮಧ್ಯಮ ವರ್ಗದವರು ಕಠಿಣ ಪರಿಸ್ಥಿತಿಯನ್ನ ಎದುರಿಸುತ್ತಿದ್ದಾರೆ, ಉಡುಪಿ ನಗರದಲ್ಲಿ ಅವಶ್ಯಕತೆಯಿರುವರಿಗೆ ಸಹಾಯ ಹಸ್ತ ನೀಡುತ್ತಿದ್ದೇವೆ. . ರಿಲಯನ್ಸ್ ಸ್ಮಾರ್ಟ್ ನ ಸಿಬ್ಬಂದಿಗಳೆಲ್ಲ ಒಟ್ಟಾಗಿ ಹೊಸಬೆಳಕು ಆಶ್ರಮಕ್ಕೆ ನಮ್ಮ ಕೈಲಾದಷ್ಟು ದಿನಸಿ ಸಾಮಗ್ರಿಗಳನ್ನು ನೀಡಿದ್ದೇವೆ , ದಿನಸಿಗಳನ್ನು ನೀಡಿದ್ದಾಗ ಹಿರಿ ಜೀವಗಳ ಮುಖದಲ್ಲಿ ಕಂಡ ನಗು ನಮಗೆ ತೃಪ್ತಿ ನೀಡಿತು”
ಮೋಹನ್ ಕುಮಾರ್ , ಮ್ಯಾನೇಜರ್ , ರಿಲಯನ್ಸ್ ಸ್ಮಾರ್ಟ್ ನ ಉಡುಪಿ