ಮುಸ್ಲಿಂ ಯುನಿಟಿ ದುಬೈ ಮತ್ತು ಹಾಲಿಮಾ ಸಾಬ್ಜು ಟ್ರಸ್ಟ್ ವತಿಯಿಂದ 60 ಕಿಟ್ ವಿತರಣೆ

ಕಟಪಾಡಿ : (ಉಡುಪಿ ಟೈಮ್ಸ್ ವರದಿ) ವಿಶ್ವವನ್ನೇ ತಲ್ಲಣಗೊಳಿಸಿರುವ ಮಹಾಮಾರಿ ಕೋರೋನ ಹಾವಳಿ ಮುಂದುವರಿದಿದ್ದು, ದೇಶದಲ್ಲಿ ಇದೀಗ ಲಾಕ್ ಡೌನ್ ಜಾರಿಯಲ್ಲಿದೆ. ಇದರಿಂದ ದಿನಗೂಲಿ ನೌಕರರು, ಬಡಜನರು ಮತ್ತು ನಿರ್ಗತಿಕರ ಕಷ್ಟವನ್ನು ಅರಿತಿರುವ ಹಲವಾರು ಸಂಘಟನೆಗಳು, ಸಮಾಜ ಸೇವಕರು, ರಾಜಕೀಯ ಪಕ್ಷಗಳು ತಮ್ಮ ತಮ್ಮ ಪರಿಸರದಲ್ಲಿ, ಜಿಲ್ಲೆಗಳಲ್ಲಿ ಕಷ್ಟದಲ್ಲಿರುವವರಿಗೆ ಊಟ ಮತ್ತು ದಿನಸಿ ವಸ್ತುಗಳು ಹಾಗೂ ಔಷಧಿಗಳನ್ನು ವಿತರಿಸುತ್ತಿದ್ದಾರೆ.

ಉದ್ಯಾವರದ ಖ್ಯಾತ ದಾನಿ ಉದ್ಯಮಿ ಹಾಜಿ ಅಬ್ದುಲ್ ಜಲೀಲ್ ಸಾಹೇಬ್ ತನ್ನ ಹಲಿಮಾ ಸಾಬ್ಜು ಆಡಿಟೋರಿಯಂ ಟ್ರಸ್ಟ್ ಮತ್ತು ದುಬೈಯಲ್ಲಿರುವ ಉದ್ಯಾವರದ ಮುಸ್ಲಿಂ ಯುನಿಟಿ ದುಬೈ (ಯುಎಇ) ಸಂಸ್ಥೆಯ ವತಿಯಿಂದ ತಲಾ 30 ರಂತೆ ಒಟ್ಟು 60, ದಿನ ಬಳಕೆಯ ಆಕ್ಕಿ ಸಹಿತ ದಿನಸಿ ವಸ್ತುಗಳ ಕಿಟ್-ಗಳನ್ನು ಉದ್ಯಾವರದ ಅತಿ ಅಗತ್ಯವಿರುವ ಸರ್ವ ಧರ್ಮದ ಕುಟುಂಬದವರಿಗೆ ಗ್ರಾಮ ಪಂಚಾಯತ್ ಉಪಾಧ್ಯಕ್ಷ ರಿಯಾಜ್ ಪಳ್ಳಿಯವರ ನೇತೃತ್ವದಲ್ಲಿ ಮನೆ ಮನೆಗೆ ತೆರಳಿ ಹಸ್ತಾಂತರಿಸಲಾಯಿತು.

ಪ್ರತಿಯೊಂದು ಕಿಟ್ ನಲ್ಲಿ ಸುಮಾರು 2 ಸಾವಿರ ರೂಪಾಯಿ ಬೆಲೆ ಬಾಳುವ ಅಕ್ಕಿ ಸಹಿತ ದಿನಸಿ ವಸ್ತುಗಳಿದ್ದು, 60 ಬಡ ಕುಟುಂಬಗಳನ್ನು ಗುರುತಿಸಿ, ಸುಮಾರು 1 ಲಕ್ಷ ಕ್ಕೂ ಅಧಿಕ ವೆಚ್ಚದ ವಸ್ತುಗಳನ್ನು ಸ್ವತಃ ಅವರ ಮನೆಗೆ ತೆರಳಿ ನೀಡುವುದರ ಮೂಲಕ ಹಾಜಿ ಅಬ್ದುಲ್ ಜಲೀಲ್ ಸಾಹೇಬ್ ಹಾಗೂ ಉದ್ಯಾವರದ ಮುಸ್ಲಿಂ ಯುನಿಟಿ ದುಬೈ ಸದಸ್ಯರು ಸೌಹಾರ್ದತೆ ಮೆರೆದಿದ್ದಾರೆ.

ಈ ಸಂದರ್ಭದಲ್ಲಿ ಗ್ರಾಮ ಪಂಚಾಯತ್ ಉಪಾಧ್ಯಕ್ಷ, ಸಮಾಜ ಸೇವಕ ರಿಯಾಜ್ ಪಳ್ಳಿ, ಸಾದಿಕ್ ಹಂಝ ಇಮ್ತಿಯಾಜ್ ಬಾಷಾ, ಆಬಿದ್ ಅಲಿ, ಅನ್ವರ್ ಹುಸೇನ್ ಮತ್ತಿತರರು ಉಪಸ್ಥಿತರಿದ್ದರು

Leave a Reply

Your email address will not be published. Required fields are marked *

error: Content is protected !!