ಉಡುಪಿ ಗ್ರೀನ್ ಝೋನ್‌ನಲ್ಲಿದ್ದರೂ ಲಾಕ್ ಡೌನ್ ಸಡಿಲಿಕೆಗೆ ಜನಪ್ರತಿನಿಧಿಯೇ ಅಡ್ಡಗಾಲು: ವ್ಯಾಪಕ ಆಕ್ರೋಶ

ಉಡುಪಿ: (ಉಡುಪಿ ಟೈಮ್ಸ್ ವರದಿ) ಜಿಲ್ಲೆಯು ಗ್ರೀನ್ ಝೋನ್‌ನಲ್ಲಿದ್ದರೂ ಲಾಕ್ ಡೌನ್ ಸಡಿಲಿಕೆಗೆ ಉಡುಪಿಯ ಜನಪ್ರತಿನಿಧಿಯೇ ಅಡ್ಡಗಾಲು ಹಾಕಿದ್ದಾರೆಂಬ ದೂರು ಸಾರ್ವಜನಿಕ ವಲಯದಲ್ಲಿ ಕೇಳಿಬರುತ್ತಿದೆ. ಪಕ್ಕದ ಜಿಲ್ಲೆಯಾದ ಮಂಗಳೂರು ಆರೆಂಜ್ ಝೋನ್‌ನಲ್ಲಿದ್ದರೂ ವ್ಯವಹಾರಕ್ಕೆ ಅಲ್ಲಿ ಬೆಳಿಗ್ಗೆ7 ರಿಂದ ರಾತ್ರಿ 7 ವರೆಗೆ ಅಲ್ಲಿನ ಜಿಲ್ಲಾಡಳಿತ ಅವಕಾಶ ಕೊಟ್ಟಿದೆ, ಆದರೆ ಉಡುಪಿಯಲ್ಲಿ ಯಾವುದೇ ಕೊರೋನಾ ಪ್ರಕರಣಗಳಿಲ್ಲದಿದ್ದರೂ ಬೆಳಿಗ್ಗೆ 7 ರಿಂದ ಮಧ್ಯಾಹ್ನ ಒಂದರವರೆಗೆ ಮಾತ್ರ ಅವಕಾಶ ಕಲ್ಪಿಸಲು ಇಲ್ಲಿನ ಜನಪ್ರತಿನಿಧಿಯ ಒತ್ತಾಡವೇ ಕಾರಣವೆಂದು ಜನರು ಮಾತನಾಡಿಕೊಳ್ಳುತ್ತಿದ್ದಾರೆ.


ಮಂಗಳೂರು ಆಟೋ ರಿಕ್ಷಾಗಳಲ್ಲೂ 1+2 ಅವಕಾಶ ಕೊಟ್ಟರೇ ಉಡುಪಿಯಲ್ಲಿ1+1 ಮಾತ್ರ ಸಂಚರಿಸಲು ಅವಕಾಶ ಮಾಡಿಕೊಟ್ಟಿರುವುದು ಆಟೋ ಚಾಲಕರ ಅಸಮಾಧಾನಕ್ಕೆ ಕಾರಣವಾಗಿದೆ. ಸಭೆಯಲ್ಲಿ ಮಾತನಾಡಿದ ಆ ಜನಪ್ರತಿನಿಧಿ ಜಿಲ್ಲೆಯ ಜನರು ತುಂಬಾ ಅನುಕೂಲವಂತರು ಲಾಕ್ ಡೌನ್ ನಿಂದ ಯಾವುದೇ ತೊಂದರೆ ಆಗಿಲ್ಲ, ಆದ್ದರಿಂದ ಇನ್ನೂ ಸ್ವಲ್ಪ ದಿನ ಲಾಕ್ ಡೌನ್ ಮುಂದುವರಿಸಿದರೂ ಜನ ಸಹಿಸಿಕೊಳ್ಳುತ್ತಾರೆಂದು ಸಭೆಯಲ್ಲಿ ಹೇಳಿದ್ದಾಗಿ ಜನರು ಆಡಿಕೊಳ್ಳುತ್ತಿದ್ದಾರೆ.


ಜನ ಪ್ರತಿನಿಧಿಗಳಿಗೆ ಏನು, ಬೇಕಾದಷ್ಟು ಹಣವಂತರು ಆದರೆ ಸಾಮಾನ್ಯ ಜನರ ಕಷ್ಟ ಕೇಳುವವರು ಯಾರು, ದಿನ ನಿತ್ಯ ಕೂಲಿ ಮಾಡುವ, ಮಧ್ಯಮ ವರ್ಗದ ಜನ ಊಟಕ್ಕೆ ಪರಿತಪಿಸುತ್ತಿದ್ದಾರೆ, ಮಾತ್ರವಲ್ಲದೆ ತಮಗೆ ಕೆಲಸವಿಲ್ಲದೆ ಸಾಲ ಪಾವತಿ, ಜೀವನ ನಿರ್ವಹಣೆಯೇ ಕಷ್ಟಸಾಧ್ಯವಿರುವಾಗ ಈ ಜನಪ್ರತಿನಿಧಿಯ ಹೇಳಿಕೆಗೆ ಜನರಲ್ಲಿ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ.

4 thoughts on “ಉಡುಪಿ ಗ್ರೀನ್ ಝೋನ್‌ನಲ್ಲಿದ್ದರೂ ಲಾಕ್ ಡೌನ್ ಸಡಿಲಿಕೆಗೆ ಜನಪ್ರತಿನಿಧಿಯೇ ಅಡ್ಡಗಾಲು: ವ್ಯಾಪಕ ಆಕ್ರೋಶ

  1. ನಮ್ಮ ಉಡುಪಿ ಜಿಲ್ಲಾದಿಕಾರಿ ಯವರಿಗೆ..ಮನವಿ
    ಜನ ಪ್ರತಿನಿಧಿಗಳ ಮಾತಿಗೆ ನಿಮ್ಮ ತಿರ್ಮಾನ ಬದ್ದ ವಾಗಿದೆ…
    ಹಾಗದರೆ ಬಡಜನರಿಗೆ ನಾಳೆ ನಿಮ್ಮ ಕಛೆರಿಗೆ ಕರೆದು ತಿರ್ಮಾನ ಮಾಡಿ
    ಯಾರೊ 10 ಜನರ ಜಿಲ್ಲೆ ಅಲ್ಲ ಇದು…
    ಮಂಗಳೂರು ಸೊಂಕಿತರು ಇರುವಾಗ …ಸಮಯ ನಿಗಧಿ ಗೆ …ಮೆಚ್ಚುಗೆ …
    ಇಲ್ಲಿ ನಿಮಗೆ ತಿರ್ಮನಾ ಮಾಡಲು ಯಾರನ್ನು ಕೇಳೊದು…
    ಸರಿಯಾದ ತಿರ್ಮಾನ ಮಾಡಿ….

  2. DC and MLA sahebre nimge swalpa nu parijyana ilwa, namma akka pakkada jille galu RED ZONE nalli iddu, business hours 7 am to 7 pm ide adru namma Udupi jille morning 7 am to 1 pm yake, navenu bere graha dalli vasisutiddeva.

  3. ಮಾನ್ಯ ಜಿಲ್ಲಾಧಿಕಾರಿಗಳು lockdown ನಿಂದಾಗಿ ಪಕ್ಕದ ಹಸಿರು ವಲಯ ಗಡಿ ಜಿಲ್ಲೆಗಳಾದ ಶಿವಮೊಗ್ಗ, ಚಿಕ್ಕಮಗಳೂರಿನಿಂದ ಊರಿಗೆ ಬರಲಿಚ್ಚಿಸುವ ಉಡುಪಿಯ ಜನರನ್ನು ಮತ್ತು ಮಹಾರಾಷ್ಟ್ರ, ಜಮ್ಮು ಕಾಶ್ಮೀರ ಅಥವಾ ಅಮೇರಿಕಾ ದಿಂದ ಬರುತ್ತಿರುವವರನ್ನು ಒಂದೇ ರೀತಿ ತಪಾಸಣೆ ಮತ್ತು ಕ್ವಾರಂಟೈನ್ ಗೆ ಕಳುಹಿಸಲು ನಿರ್ಧರಿಸಿರುವುದು ಬಹಳ ಬೇಸರ ತರಿಸಿದೆ. ನನ್ನಂತೆ ಬಹಳಷ್ಟು ಜನ ಶಿವಮೊಗ್ಗ ಮತ್ತು ಚಿಕ್ಕಮಗಳೂರಿನಿಂದ 2-4 ಗಂಟೆಗಳಷ್ಟು ಕಡಿಮೆ ಪ್ರಯಾಣ ಸಮಯವಿದ್ದರೂ ತಮ್ಮ ಮತ್ತು ಮಕ್ಕಳು ಮರಿಗಳ ಮೇಲೆ ನಡೆಯಲಿರುವ ಹಿಂಸೆಯನ್ನು ಊಹಿಸಿಕೊಂಡು ಹಿಡಿಶಾಪ ಹಾಕುತ್ತಾ ಇದ್ದಲ್ಲಿಯೇ ಇನ್ನಷ್ಟು ದಿನ ಇರುವಂತಾಗಿದೆ.
    ಗ್ರೀನ್ ಝೋನ್ ಅಂದರೆ ಕೊರೊನ ಮುಕ್ತ ಪ್ರದೇಶ.. ಅಂದರೆ ಅಲ್ಲಿಂದ ಬರುವ ದೊಡ್ಡವರಿಗೆ, ಹಿರಿಯರಿಗೆ, ಮಕ್ಕಳು ಮರಿಗಳಿಗೆ ಕೊರೊನ ಸೋಂಕು ತಗಲಿಲ್ಲ ಎಂದರ್ಥ.
    Please allow us to join our family.

  4. ಮಾನ್ಯ ಜಿಲ್ಲಾಧಿಕಾರಿಗಳು lockdown ನಿಂದಾಗಿ ಪಕ್ಕದ ಹಸಿರು ವಲಯ ಗಡಿ ಜಿಲ್ಲೆಗಳಾದ ಶಿವಮೊಗ್ಗ, ಚಿಕ್ಕಮಗಳೂರಿನಿಂದ ಊರಿಗೆ ಬರಲಿಚ್ಚಿಸುವ ಉಡುಪಿಯ ಜನರನ್ನು ಮತ್ತು ಮಹಾರಾಷ್ಟ್ರ, ಜಮ್ಮು ಕಾಶ್ಮೀರ ಅಥವಾ ಅಮೇರಿಕಾ ದಿಂದ ಬರುತ್ತಿರುವವರನ್ನು ಒಂದೇ ರೀತಿ ತಪಾಸಣೆ ಮತ್ತು ಕ್ವಾರಂಟೈನ್ ಗೆ ಕಳುಹಿಸಲು ನಿರ್ಧರಿಸಿರುವುದು ಬಹಳ ಬೇಸರ ತರಿಸಿದೆ. ನನ್ನಂತೆ ಬಹಳಷ್ಟು ಜನ ಶಿವಮೊಗ್ಗ ಮತ್ತು ಚಿಕ್ಕಮಗಳೂರಿನಿಂದ 2-4 ಗಂಟೆಗಳಷ್ಟು ಕಡಿಮೆ ಪ್ರಯಾಣ ಸಮಯವಿದ್ದರೂ ತಮ್ಮ ಮತ್ತು ಮಕ್ಕಳು ಮರಿಗಳ ಮೇಲೆ ನಡೆಯಲಿರುವ ಹಿಂಸೆಯನ್ನು ಊಹಿಸಿಕೊಂಡು ಹಿಡಿಶಾಪ ಹಾಕುತ್ತಾ ಇದ್ದಲ್ಲಿಯೇ ಇನ್ನಷ್ಟು ದಿನ ಇರುವಂತಾಗಿದೆ.
    ಗ್ರೀನ್ ಝೋನ್ ಅಂದರೆ ಕೊರೊನ ಮುಕ್ತ ಪ್ರದೇಶ.. ಅಂದರೆ ಅಲ್ಲಿಂದ ಬರುವ ಯಾರಿಗೂ ಸೋಂಕು ತಗಲಿಲ್ಲ ಎಂದರ್ಥ.
    ದಯವಿಟ್ಟು ನಮ್ಮನ್ನು ತಪಾಸಣೆ ಮಾಡಿ ಆದರೆ ಖಡ್ಡಾಯ ಕ್ವಾರೆಂಟಿನ್ ಗೆ ಒಳಪಡಿಸಬೇಡಿ.
    Please allow us to join our family.

Leave a Reply

Your email address will not be published. Required fields are marked *

error: Content is protected !!