ಲಾಕ್ ಡೌನ್ ಬಿಸಿ: ಸರಳವಾಗಿ ಹಸೆಮಣೆಗೆರಿದ ಕುಂದಾಪುರದ ಜೋಡಿ!

ಕುಂದಾಪುರ (ಉಡುಪಿ ಟೈಮ್ಸ್ ವರದಿ ): ಕೊರೋನಾ ಎಮರ್ಜೆನ್ಸಿಯಾ ಬಿಸಿ ಮದುವೆಗಳಿಗೂ ತಟ್ಟಿದೆ. ಇಂದು ಧರ್ಮಸ್ಥಳದ ಶ್ರೀ ಮಂಜುನಾಥೇಶ್ವರ ಸನ್ನಿಧಿಯ ಶ್ರೀ ಶಿವಪಾರ್ವತಿ ಕೃಪಾ ಸಭಾಭವನದಲ್ಲಿ ನಡೆಯಬೇಕಿದ್ದ ವಿವಾಹ ಕೇವಲ 8 ಮಂದಿ ಕುಟುಂಬಿಕರ ಸಮ್ಮುಖದಲ್ಲಿ ಆಗಿದೆ.

ಈ ಘಟನೆ ನಡೆದಿದ್ದು ಕುಂದಾಪುರ ತಾಲೂಕಿನ ಹಳ್ನಾಡು ಗಣಪತಿ ದೇವಸ್ಥಾನದಲ್ಲಿ ಕೊರೋನಾ ತಡೆಗಟ್ಟುವಿಕೆ ಹಿನ್ನೆಲೆ ದೇಶಾದ್ಯಂತ ಲಾಕ್ ಡೌನ್ ಇದ್ದು ಯಾವುದೇ ಶುಭ ಸಮಾರಂಭಗಳಲ್ಲಿ ಕುಟುಂಬಿಕರನ್ನು ಹೊರತುಪಡಿಸಿ ಹೆಚ್ಚು ಮಂದಿ ಸೇರಬಾರದೆಂಬ ಆದೇಶದ ಹಿನ್ನೆಲೆ ಕುಂದಾಪುರದಲ್ಲಿ ಗುರುವಾರ ಸರಳವಾಗಿ ವಿವಾಹವೊಂದು ನೆರವೇರಿದೆ.


ಅಂಪಾರು ಗುಡಿಬೆಟ್ಟು ನಿವಾಸಿ ಗಿರೀಶ್ ಹಾಗೂ ಅಚ್ಲಾಡಿ ಮೂಲದ ಪ್ರೀತಿಕಾ ಎನ್ನುವರ ವಿವಾಹವು ಸರಳವಾಗಿ ಕುಂದಾಪುರದ ಹಳ್ನಾಡು ಗಣಪತಿ ದೇವಸ್ಥಾನದಲ್ಲಿ ಜರುಗಿತು.
ಈ ವಿವಾಹದಲ್ಲಿ ವರನ ಕಡೆಯಿಂದ ನಾಲ್ವರು ಹಾಗೂ ವಧುವಿನ ಕಡೆಯಿಂದ ನಾಲ್ವರು ಮತ್ತು ವಧು-ವರರಿಬ್ಬರು ಸೇರಿ 10 ಮಂದಿ ಭಾಗಿಯಾಗಿದ್ದರು.
ಇಂದು ಧರ್ಮಸ್ಥಳದ ಶ್ರೀ ಮಂಜುನಾಥೇಶ್ವರ ಸನ್ನಿಧಿಯ ಶ್ರೀ ಶಿವಪಾರ್ವತಿ ಕೃಪಾ ಸಭಾಭವನದಲ್ಲಿ ನಡೆಯಬೇಕಿದ್ದ ಇವರ ವಿವಾಹವನ್ನು ಲಾಕ್ ಡೌನ್ ಹಿನ್ನೆಲೆ ಸರಳವಾಗಿ ನಡೆಸಲಾಗಿದೆ. ಅಲ್ಲದೆ ಭಾನುವಾರ ನಡೆಯಬೇಕಾದ ಆರತಕ್ಷತೆಯನ್ನು ರದ್ದುಪಡಿಸಲಾಗಿದೆ.

Leave a Reply

Your email address will not be published. Required fields are marked *

error: Content is protected !!