ಭುಜರಂಗ ಪಾರ್ಕಿನಲ್ಲಿ ಹುಚ್ಚು ನಾಯಿಗಳ ಹಾವಳಿ ಹಲವರಿಗೆ ಕಡಿತ ಕ್ರಮಕ್ಕೆ ಆಗ್ರಹ
ಉಡುಪಿ:ಅಜ್ಜರಕಾಡು ಭುಜಂಗ ಪಾರ್ಕಿನಲ್ಲಿ ೩೦ ಕ್ಕೂ ಅಧಿಕ ಬೀದಿ ನಾಯಿಗಳು ಸಾರ್ವಜನಿಕ ಸ್ಥಳಗಳಲ್ಲಿ ಅಲೆದಾಡುತ್ತಿದ್ದು ,ಕೆಲವು ನಾಯಿಗಳಿಗೆ ಹುಚ್ಚು ಹಿಡಿದಿರುವ ಬಗ್ಗೆ ದೂರುಗಳು ಕೇಳಿಬಂದಿದ್ದು. ಇಗಾಗಲೇ ಪಾರ್ಕಿಗೆ ವಾಯು ವಿಹಾರಕ್ಕೆ ಬಂದ ಹತ್ತಕ್ಕೂ ಅಧಿಕ ಮಂದಿಗೆ ಹುಚ್ಚು ನಾಯಿಗಳಿಂದ ಕಚ್ಚಿರುವ ಘಟನೆಗಳು ನಡೆದಿವೆ. ಹಿರಿಯ ನಾಗರಿಕರು, ವಾಯು ವಿಹಾರಿಗಳು, ಜಾರುಬಂಡಿಯಲ್ಲಿ ಆಡಲು ಬರುವ ಮಕ್ಕಳು ಭಯಭೀತರಾಗಿದ್ದಾರೆ.
ಶನಿವಾರ 10 ವರ್ಷದ ಬಾಲಕಿ ಬೈಕಾಡಿಯ ನವ್ಯ ಭುಜಂಗ ಪಾರ್ಕಿನಲ್ಲಿ ಜಾರುಬಂಡಿಯಲ್ಲಿ ಆಟ ಆಡುವಾಗ ನಾಯಿ ಕಚ್ಚಿದ ಘಟನೆ ನಡೆದಿದೆ. ಬಾಲಕಿ ಅಜ್ಜರಕಾಡು ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಮನೆಗೆ ಹೋಗಿದ್ದಾಳೆ. ನಗರಸಭೆ ಪೌರಾಯುಕ್ತರು ಸಮಸ್ಯೆಯತ್ತ ಗಮನಹರಿಸಿ ಸೂಕ್ತ ಕ್ರಮ ಜರುಗಿಸ ಬೇಕೆಂದು ಸಾಮಾಜಿಕ ಕಾರ್ಯಕರ್ತರ ಆಗ್ರ ವಾಗಿದೆ. ಈ ಪರಿಸರದಲ್ಲಿ ಕುಡುಕರ ,ಸಲಿಂಗಕಾಮಿಗಳ ಉಪಟಳವಿದ್ದು ಸ್ಥಳೀಯರು ಈ ಬಗ್ಗೆ ನಗರಠಾಣೆಗೆ ದೂರು ನೀಡಿದರೂ ಪೊಲೀಸರು ಯಾವುದೇ ಕ್ರಮಕ್ಕೆ ಮುಂದಾಗಿಲ್ಲ ಎಂಬ ಆರೋಪವೂ ಇಲ್ಲಿಗೆ ಪ್ರತಿನಿತ್ಯ ಭೇಟಿ ನೀಡುವವರ ಹೇಳುತ್ತಾರೆ.