ಉಡುಪಿ ಬಾರ್‌ಗಳಲ್ಲಿ ಮದ್ಯಗಳ ಕಳ್ಳತನ: ಹೆಚ್ಚಿನ ಭದ್ರತೆಗೆ ಸೂಚನೆ

ಉಡುಪಿ: ಕೋವಿಡ್-19 ಹರಡುವಿಕೆಯನ್ನು ತಡೆಗಟ್ಟಲು ಜಿಲ್ಲೆಯಾದ್ಯಂತ ಈಗಾಗಲೇ ಇಲಾಖೆಯು ಎಲ್ಲಾ ಮದ್ಯದಂಗಡಿಗಳನ್ನು ಮುಚ್ಚಲಾಗಿದ್ದು. ಜಿಲ್ಲೆಯಲ್ಲಿ ಈಗಾಗಲೇ ಎರಡು ಬಾರ್‌ಗಳಲ್ಲಿ ಮದ್ಯಗಳನ್ನು ಕಳ್ಳರು ದೋಚಿದ್ದಾರೆ. ಆದ್ದರಿಂದ ಬಾರ್ ಮಾಲೀಕರು ಮುತುವರ್ಜಿ ವಹಿಸಿ ಮದ್ಯದಂಗಡಿಗಳಿಗೆ ಭದ್ರತೆಗಳನ್ನು ಮಾಡಿಕೊಳ್ಳಬೇಕೆಂದು ಉಡುಪಿ ಜಿಲ್ಲಾ ಅಬಕಾರಿ ಉಪ ಆಯುಕ್ತರು ಪತ್ರಿಕಾ ಪ್ರಕಟನೆಯಲ್ಲಿ ತಿಳಿಸಿರುತ್ತಾರೆ.


ಈಗಾಗಲೇ ಕುಂದಾಪುರ ತಾಲೂಕು ವ್ಯಾಪ್ತಿಯಲ್ಲಿನ ಕನಕ ಬಾರ್‌ನಲ್ಲಿ ಕಳ್ಳತನಕ್ಕೆ ವಿಫಲ ಪ್ರಯತ್ನ ನಡೆದಿರುತ್ತದೆ ಹಾಗೂ ಕಾಪು ತಾಲೂಕು ವ್ಯಾಪ್ತಿಯಲ್ಲಿ ಶಕ್ತಿ ಬಾರ್‌ನಲ್ಲಿ ಕಳ್ಳತನ ನಡೆದಿರುತ್ತದೆ. ಉಡುಪಿ ಜಿಲ್ಲೆಯಲ್ಲಿ ಎಲ್ಲಾ ರೀತಿಯ ಮದ್ಯದ ಸನ್ನದುಗಳು ಮುಚ್ಚಿರುವುದರಿಂದ ಹಾಗೂ ಜನ ಸಂಚಾರ ವಿರಳವಿರುವ ಸಂದರ್ಭದಲ್ಲಿ ಮದ್ಯದಂಗಡಿಗಳ ಕಳ್ಳತನ ನಡೆಯುವ ಸಂಭವಿರುತ್ತದೆ. ಈ ಬಗ್ಗೆ ಅಬಕಾರಿ ಇಲಾಖೆಯಿಂದ ಮದ್ಯದಂಗಡಿಗಳ ಮೇಲೆ ಗಸ್ತು ಸಮಯದಲ್ಲಿ ಸೂಕ್ತ ನಿಗಾವಹಿಸಲಾಗುತ್ತಿದ್ದು, ಮದ್ಯದ ಸನ್ನದುದಾರರು ತಮ್ಮ ಮದ್ಯದ ಸನ್ನದಿನ ಬಗ್ಗೆ ನಿಗಾ ವಹಿಸುವರೇ ಅವರೇ ಸ್ವತ: ಜವಾಬ್ದಾರರಾಗಿರುತ್ತಾರೆ.

Leave a Reply

Your email address will not be published. Required fields are marked *

error: Content is protected !!