ಜನರ ವಿರೋಧ ಲೆಕ್ಕಿಸದೆ ಮತ್ತೆ ಮದ್ಯ ಮಾರಾಟ: ಉಡುಪಿಯಲ್ಲಿ ಮೂವರ ಬಲಿ!

ಉಡುಪಿ: (ಉಡುಪಿ ಟೈಮ್ಸ್ ವರದಿ) ನಗರದ ಸ್ವರ್ಣ ಆರ್ಕೆಡ್ ಬಳಿ ಫುಟ್ ಪಾತ್‌ನಲ್ಲಿ ವಿಪರೀತ ಮದ್ಯ ಸೇವಿಸಿ ಯುವಕನೋರ್ವ ಮೃತ ದೇಹ ಪತ್ತೆಯಾದರೆ, ಕುಂದಾಪುರ ಕಸಬಾ ಗ್ರಾಮದಲ್ಲಿ 40 ವರ್ಷದ ಗಂಡಸಿನ ಮೃತದೇಹ ರಾಷ್ಟ್ರೀಯ ಹೆದ್ದಾರಿಯ ಪಕ್ಕ ಕಂಡುಬಂದಿದ್ದು, ವ್ಯಕ್ತಿಯು ವಿಪರೀತ ಶರಾಬು ಸೇವನೆ ಮಾಡಿ ಹೃದಯಾಘಾತದಿಂದ ಅಥವಾ ಇನ್ನಾವುದೋ ಕಾರಣದಿಂದ ಮೃತಪಟ್ಟಿರುವ ಬಗ್ಗೆ ಕುಂದಾಪುರ ಠಾಣೆಯಲ್ಲಿ ದೂರು ದಾಖಲಾಗಿದೆ. ಇನ್ನೊಂದು ಪ್ರಕರಣದಲ್ಲಿ ಕಟಪಾಡಿ ಏಣಗುಡ್ಡೆ ಜೆ.ಎನ್. ನಗರದ ನಿವಾಸಿ, ಕೋಳಿ ಫಾರಂ ಉದ್ಯೋಗಿ ಚಂದ್ರಕಾಂತ್(32) ವರ್ಷದ ವಿವಾಹಿತ ವಿಪರೀತ ಮದ್ಯ ಸೇವಿಸಿ ಮನೆಯಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾಗಿ ಕಾಪು ಪೊಲೀಸರು ತಿಳಿಸಿದ್ದಾರೆ.

ಮದ್ಯ ಮಾರಾಟ ಸ್ಥಗಿತಗೊಂಡ ಹಿನ್ನೆಲೆಯಲ್ಲಿ13 ಕ್ಕೂ ಹೆಚ್ಚು ಮದ್ಯಪಾನಿಗಳು ಆತ್ಮಹತ್ಯೆ ಮಾಡಿಕೊಂಡ ಪ್ರಕರಣ ಜಿಲ್ಲೆಯಲ್ಲಿ ನಡೆದಿದ್ದರೆ, ಈಗ ಮದ್ಯ ಪ್ರಾರಂಭವಾದ ನಂತರ ಅತೀಯಾದ ಮದ್ಯ ಸೇವನೆಯಿಂದಾಗಿ ಉಡುಪಿಯಲ್ಲಿ ಎರಡು ದಿನದಲ್ಲಿ ಮೂವರ ಬಲಿಯಾಗಿದೆ.

ಲಾಕ್ ಡೌನ್ ಪ್ರಾರಂಭವಾದಗಿನಿಂದ ಅನೇಕ ಸ್ವಯಂ ಸೇವಕರು ಬೆಳಗ್ಗಿನ ಉಪಹಾರ, ಮಧ್ಯಾಹ್ನ, ರಾತ್ರಿ ಊಟ ನೀಡುತ್ತಿದ್ದರು. ಆದರೆ ಮೇ ನಾಲ್ಕರ ನಂತರ ಎಲ್ಲಾ ದಾನಿಗಳು ಆಹಾರ ವಿತರಣೆ ನಿಲ್ಲಿಸಿದ್ದರು. ಈಗ ಹೆಚ್ಚಿನ ಕೂಲಿ ಕಾರ್ಮಿಕರು ಖಾಲಿ ಮದ್ಯ ಸೇವಿಸಿ ಬದುಕುತ್ತಿದ್ದಾರೆಂಬ ಆರೋಪ ಕೇಳಿ ಬರುತ್ತಿದೆ. ಮದ್ಯಕ್ಕಾಗಿ ಅವರ ಜೇಬಿನಲ್ಲಿ 500 ರೂ ನೋಟು ಹೇಗೆ ಹೊರಬರುತ್ತಿದೆ ಎಂಬು ಎಲ್ಲರನ್ನು ಹುಬ್ಬೆರೆಸುವಂತೆ ಮಾಡಿದೆ ಎನ್ನುತ್ತಾರೆ ಸಮಾಜ ಸೇವಕ ನಿತ್ಯಾನಂದ ಒಳಕಾಡು.


ಇಂದು ಮುಂಜಾನೆ ಅಸ್ವಸ್ಥಗೊಂಡು ಬಿದ್ದಿರುವ, ಅಪರಿಚಿತ ಯುವಕನೊರ್ವನು ಕಂಡು ಬಂದಿದ್ದು, ಸಮಾಜಸೇವಕ ನಿತ್ಯಾನಂದ ಒಳಕಾಡು ಅವರು, ತಕ್ಷಣ ಯುವಕನನ್ನು ಅಜ್ಜರಕಾಡು ಜಿಲ್ಲಾಸ್ಪತ್ರೆಗೆ ಸಾಗಿಸಿದ್ದರು. ಯುವಕ ಚಿಕಿತ್ಸೆಗೆ ಸ್ಪಂದಿಸದೆ ಮೃತಪಟ್ಟಿದ್ದಾನೆ. ಅತಿಯಾದ ಮದ್ಯಸೇವನೆಯು ಯುವಕನ ಸಾವಿಗೆ ಕಾರಣ ಎಂದು ತಿಳಿದು ಬಂದಿದೆ.


ಯುವಕನ ವಿಳಾಸ ತಿಳಿದು ಬಂದಿಲ್ಲ. ಶವವನ್ನು ಅಜ್ಜರಕಾಡು ಜಿಲ್ಲಾಸ್ಪತ್ರೆಯ ಶವಗಾರದಲ್ಲಿ ಇಡಲಾಗಿದೆ. ವಾರಸುದಾರರು ತುರ್ತು ಅಜ್ಜರಕಾಡು ಜಿಲ್ಲಾಸ್ಪತ್ರೆಯ ನಾಗರಿಕ ಸಹಾಯ ಕೇಂದ್ರವನ್ನು ಸಂಪರ್ಕಿಸವಂತೆ, ಸಮಾಜಸೇವಕ ನಿತ್ಯಾನಂದ ಒಳಕಾಡು ಅವರು ಸೂಚಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!