ಸಾರ್ವಜನಿಕರ ಎದುರೇ ಜೋಡಿಯಿಂದ ಲಿಪ್ ಲಾಕ್, ವಿಡಿಯೋ ವೈರಲ್!
ನವದೆಹಲಿ: ಹರೆಯದ ಯುವ ಜೋಡಿಯೊಂದು ಮೆಟ್ರೋ ರೈಲಿನಲ್ಲಿ ಸಾರ್ವಜನಿಕರ ಎದುರೇ ಚುಂಬಿಸಿಕೊಂಡಿದ್ದು ಈ ವಿಡಿಯೋ ಇದೀಗ ವೈರಲ್ ಆಗಿದೆ.
ದೆಹಲಿಯ ಮೆಟ್ರೋ ರೈಲಿನಲ್ಲಿ ಭಾನುವಾರ ಈ ಘಟನೆ ನಡೆದಿದ್ದು ಪ್ರಯಾಣಿಕರೊಬ್ಬರು ಇದನ್ನು ವಿಡಿಯೋ ಮಾಡಿ ಸಾಮಾಜಿಕ ಜಾಲತಾಣಕ್ಕೆ ಅಪ್ಲೋಡ್ ಮಾಡಿದ್ದಾರೆ.
ಈ ವಿಡಿಯೋ ನೋಡಿ ಗರಂ ಆಗಿರುವ ನೆಟಿಗರು ಸಾರ್ವಜನಿಕ ಸ್ಥಳಗಳಲ್ಲಿ ಇಂತಹ ಕೃತ್ಯಗಳಲ್ಲಿ ತೊಡಗುವ ಜೋಡಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಆಡಳಿತ ಮಂಡಳಿಗೆ ಆಗ್ರಹಿಸಿದ್ದಾರೆ.