ಸಂಸದೆ ಶೋಭಾಗೆ ಜೀವ ಬೆದರಿಕೆ : ಜಿಹಾದಿಗಳ ವಿರುದ್ಧ ಕಠಿಣ ಕ್ರಮಕ್ಕೆ ಯಶ್ ಪಾಲ್ ಆಗ್ರಹ

ಉಡುಪಿ: ಸಂಸದೆ ಶೋಭಾ ಕರಂದ್ಲಾಜೆ ಅವರಿಗೆ ಜಿಹಾದಿ ಶಕ್ತಿಗಳು ಬೆದರಿಕೆ ಒಡ್ಡಿರುವ ಘಟನೆ ನಿಜಕ್ಕೂ ಕಳವಳಕಾರಿ. ಈ ಬಗ್ಗೆ ಕೇಂದ್ರ ತನಿಖಾ ಸಂಸ್ಥೆಗಳು ಕೂಡಲೇ ಕ್ರಮ ವಹಿಸಬೇಕು ಎಂದು  ಬಿಜೆಪಿ ಮುಖಂಡ ಯಶ್ ಪಾಲ್ ಸುವರ್ಣ ಆಗ್ರಹಿಸಿದ್ದಾರೆ.

ಸಂಸದೆಯವರನ್ನು ಮಾನಸಿಕವಾಗಿ ಕುಗ್ಗಿಸಲು ಕೆಲವರು ಈ ಕೃತ್ಯ ನಡೆಸುತ್ತಿದ್ದು, ಅವರು ಹಿಂದೂ ಕಾರ್ಯಕರ್ತರ ಮೇಲೆ ಅನ್ಯಾಯವಾದ ಸಮಯದಲ್ಲಿ  ಅವರ ಪರವಾಗಿ ನಿರ್ಭೀತವಾಗಿ ದನಿ ಎತ್ತುತ್ತಿರುವುದು ಹಿಂದೂ ವಿರೋಧಿ ಶಕ್ತಿಗಳಿಗೆ  ಸಹಿಸಲಾಗುತ್ತಿಲ್ಲ. ವಿದೇಶದಲ್ಲಿ ಕುಳಿತು ನಮ್ಮ ದೇಶದೊಳಗೆ ಅರಾಜಕತೆ ಸೃಷ್ಟಿಸಲು ಯತ್ನಿಸುತ್ತಿರುವವರ ಬಗ್ಗೆ ಇಲಾಖೆ ನಿರ್ದಾಕ್ಷಿಣ್ಯವಾಗಿ ಕ್ರಮ ಕೈಗೊಳ್ಳಬೇಕು. ಶೋಭಾ ಕರಂದ್ಲಾಜೆ ಅವರ ಮೇಲೆ ಜಿಹಾದಿ ಮಾನಸಿಕತೆಯ ಸಂಘಟನೆಗಳ ಕಣ್ಣಿದ್ದು ಸರಕಾರ ಕೂಡಲೇ ಅವರಿಗೆ ಸೂಕ್ತ ಭದ್ರತೆ ಒದಗಿಸಬೇಕು ಎಂದು ಅವರು ಮನವಿ ಮಾಡಿದ್ದಾರೆ.

ಕೊಲ್ಲಿ ದೇಶಗಳಲ್ಲಿ ದುಡಿಯುತ್ತಿರುವ ಹಿಂದೂ ಯುವಕರ ಮೇಲೆ ದೌರ್ಜನ್ಯ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ.  ಕುಂದಾಪುರದ ಹರೀಶ್ ಬಂಗೇರಾ ಎಂಬ ಯುವಕನನ್ನು ಸೌದಿಯಲ್ಲಿ  ಸುಳ್ಳು ಪ್ರಕರಣವೊಂದರಲ್ಲಿ ಸಿಲುಕಿಸಿ ಐದು ತಿಂಗಳಿನಿಂದ ಜೈಲಿನಲ್ಲಿ ಕೂಡಿ ಹಾಕಿದ್ದಾರೆ. ತೀರಾ ಸಂಕಷ್ಟದಲ್ಲಿರುವ ಹರೀಶ್ ಕುಟುಂಬದ ನೋವಿಗೆ ಪೊಲೀಸ್ ಇಲಾಖೆ ಕೂಡಲೇ ಸ್ಪಂದಿಸಬೇಕು. ಆತನ ಬಿಡುಗಡೆಗೆ ಪ್ರಯತ್ನಿಸಬೇಕು ಎಂದು ಯಶಪಾಲ್ ಸುವರ್ಣ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!