ಅರಣ್ಯ ಸಂಪತ್ತು ಮುಗಿದರೆ ಜೀವನ ಕಷ್ಟ : ಉಪ ಅರಣ್ಯಾಧಿಕಾರಿ ನಾಗೇಶ ಬಿಲ್ಲವ 

ಶಿರ್ವ: ಅಭಿವೃದ್ಧಿಗೋಸ್ಕರ ಅರಣ್ಯ ಸಂಪತ್ತು ಕಡಿಮೆಗೊಳ್ಳುತ್ತಿದೆ. ಅರಣ್ಯ ಸಂಪತ್ತು ಮುಗಿದರೆ ಜೀವನ ಕಷ್ಟ. ಮನೆಗೊಂದು ಗಿಡವನ್ನು ನೆಟ್ಟು ಅದನ್ನು ಮರವಾಗಿ ಬೆಳೆಸಬೇಕು. ಅಭಿವೃದ್ಧಿಯ ಕಾರಣಗಳಿಗೋಸ್ಕರ ಅರಣ್ಯಗಳನ್ನು ನಾಶ ಮಾಡಿರುವುದರಿಂದ ಕಾಲಕ್ಕೆ ತಕ್ಕಂತೆ ಮಳೆ ಬರುತ್ತಿಲ್ಲ.  ಇದರಿಂದ ಪ್ರಾಣಿ ಸಂಕುಲವೂ ಕಡಿಮೆಯಾಗುತ್ತಿದೆ. ಅರಣ್ಯವನ್ನು ಉಳಿಸುವುದು ಪ್ರತಿಯೊಬ್ಬ ಪ್ರಜ್ಞಾವಂತ ನಾಗರಿಕನ ಆದ್ಯ ಕರ್ತವ್ಯ ಎಂದು ಕಾಪು ವಲಯ ಉಪ ಅರಣ್ಯಾಧಿಕಾರಿ ನಾಗೇಶ್ ಬಿಲ್ಲವ ತಿಳಿಸಿದರು.

ಬಾಲ ಏಸುವಿನ ದೇವಾಲಯ ಪಿಲಾರು ಇಲ್ಲಿಯ  ಕಥೋಲಿಕ್ ಸಭಾ ನೇತೃತ್ವದಲ್ಲಿ ಐಸಿವೈಎಂ ಮತ್ತು ವೈಪಿಎಸ್ ಇವರ ಸಹಕಾರದೊಂದಿಗೆ ವನಮಹೋತ್ಸವ ಮತ್ತು ಗಿಡ ವಿತರಣಾ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದರು.
ದೇವಾಲಯದ ಧರ್ಮಗುರು ವಂದನೀಯ ಫಾ.  ವಿಶಾಲ್ ಲೋಬೋ ಮತ್ತು ಕಾಪು ವಲಯ ಅರಣ್ಯ ರಕ್ಷಕ ಮಂಜುನಾಥ್ ಸಂಘಟನೆಗಳ ಕಾರ್ಯಕ್ರಮಕ್ಕೆ ಮೆಚ್ಚುಗೆಯನ್ನು ವ್ಯಕ್ತಪಡಿಸಿದರು.

ವೇದಿಕೆಯಲ್ಲಿ ಬ್ರದರ್ ಪ್ರದೀಪ್ ಕಾರ್ಡೋಜ,  ಮುದರಂಗಡಿ ಗ್ರಾಮ ಪಂಚಾಯತ್ ಅಧ್ಯಕ್ಷ ಡೇವಿಡ್ ಡಿಸೋಜ, ಜೆಸಿಂತಾ ಮಾರಿಯ ಮಥಾಯಸ್ ಶಿರ್ವ ಉಪಸ್ಥಿತರಿದ್ದರು.
ಕಥೊಲಿಕ್ ಸಭಾ ಅಧ್ಯಕ್ಷೆ ಪ್ರಿಯ ಡಿಸೋಜಾ ಸ್ವಾಗತಿಸಿದ್ದರೆ, ವೆನಿಸ್ಸಾ ಡಿಸೋಜಾ ಕಾರ್ಯಕ್ರಮ ನಿರೂಪಿಸಿ, ಧನ್ಯವಾದ ಸಮರ್ಪಿಸಿದರು.
ಸಾಗುವಾನಿ, ಚಿಕ್ಕು, ಹಲಸಿನ ಗಿಡ ಸಹಿತ 150 ಕ್ಕೂ ವಿವಿಧ ಬಗೆಯ ಗಿಡಗಳನ್ನು ವಿತರಿಸಲಾಯಿತು.

Leave a Reply

Your email address will not be published. Required fields are marked *

error: Content is protected !!