ಅಯೋಧ್ಯೆ ತೀರ್ಪನ್ನು ಸಮಾನತೆಯಿಂದ ಸ್ವಾಗತಿಸೋಣ – ಕೋಟ ಟ್ವಿಟ್
ಉಡುಪಿ – ಅಯೋಧ್ಯೆ ತೀರ್ಪನ್ನು ಸಮಾನತೆಯಿಂದ ಸ್ವಾಗತಿಸೋಣ. ಹಿಂದೂ – ಮುಸ್ಲಿಂ ಸಹಿತ ಸರ್ವರು ಭಾರತ ಮಾತೆಯ ಮಡಿಲಲ್ಲಿ ನೆಮ್ಮದಿಯ ಬದುಕು ಕಟ್ಟಿ ಕೊಳ್ಳೋಣ ಎಂಬುದಾಗಿ ಮುಜರಾಯಿ ಸಚಿವ ಕೋಟ ಶ್ರೀನಿವಾಸ್ ಪೂಜಾರಿ ಟ್ವಿಟ್ ಮಾಡಿದ್ದಾರೆ.
ಅಯೋದ್ಯೆ ಕುರಿತಾದ ಸರ್ವೋಚ್ಛ ನ್ಯಾಯಾಲಯ ನೀಡಿದ ತೀರ್ಪಿನ ಕುರಿತು ತಮ್ಮ ಟ್ವಿಟರ್ ಕಥೆಯಲ್ಲಿ ಟ್ವಿಟ್ ಮಾಡಿದ ಅವರು ಈ ತೀರ್ಪನ್ನು ಸಮಾನತೆಯಿಂದ ಸ್ವೀಕರಿಸೋಣ ಎಂಬುದಾಗಿ ಜನತೆಯಲ್ಲಿ ಟ್ವಿಟ್ ಮೂಲಕ ಮನವಿ ಮಾಡಿದ್ದಾರೆ.