ಬೆತ್ತಲೆ ಮಾಡುವವರು ಮೊದಲು ಕೇಂದ್ರ ಸರ್ಕಾರದಿಂದ ರಪ್ತು ನಿಲ್ಲಿಸಲಿ -ಅನ್ಸಾರ್ ಅಹಮ್ಮದ್

ಉಡುಪಿ ಜಿಲ್ಲಾ ಬಿಜೆಪಿ ಪ್ರಧಾನ ಕಾರ್ಯದರ್ಶಿಯಾದ ಯಶ್ ಪಾಲ್ ಸುವರ್ಣರವರು ಗೋಕಳ್ಳತನ ಪ್ರಕರಣವನ್ನು ಹತೋಟಿಗೆ ತರಲು ಆಗ್ರಹಿಸುವ ಭರದಲ್ಲಿ ಸಮಾಜದ ಶಾಂತಿ ಕದಡುವ ರೀತಿಯಲ್ಲಿ ಪ್ರಚೋದನಕಾರಿ ಹೇಳಿಕೆ ನೀಡಿರುವುದು ಖಂಡನೀಯ.

ಗೋಕಳ್ಳತನವನ್ನು ಯಾವ ಜಾತಿ ಧರ್ಮದವರೂ ಸಮರ್ಥಿಸಿಕೊಳ್ಳುತ್ತಿಲ್ಲ.

ಯಶ್ ಪಾಲ್ ಸುವರ್ಣದವರು ಭಾರತದಿಂದ ವಿದೇಶಕ್ಕೆ ರಫ್ತಾಗುತ್ತಿರುವ ಗೋಮಾಂಸದ ಬಗ್ಗೆ ಚಕಾರವೆತ್ತದೆ ಸ್ಥಳೀಯವಾಗಿ ನಡೆಯುತ್ತಿರುವ ಗೋಸಾಗಾಟ ಗೋಹತ್ಯೆಯ ಬಗ್ಗೆ ಮಾತನಾಡುತ್ತಿರುವುದು ಅವರ ದ್ವಿಮುಖ ನೀತಿಯನ್ನು ಎತ್ತಿ ತೋರಿಸುತ್ತಿದೆ.

ಗೋಹತ್ಯೆಯನ್ನು ವಿರೋಧಿಸುವ ನಿಟ್ಟಿನಲ್ಲಿ ಹೇಳಿಕೆ ನೀಡುವ ಪ್ರತಿಭಟನೆಯನ್ನು ನಡೆಸುವ ಸಂಘ ಸಂಸ್ಥೆಗಳು ಸಂಘಟನೆಗಳು ತಾಕತ್ತಿದ್ದರೆ ವಿದೇಶಕ್ಕೆ ಗೋಮಾಂಸ ರಫ್ತು ಆಗುತ್ತಿರುವುದನ್ನು ಮೊದಲು ಪ್ರಶ್ನಿಸಲಿ ಎಂದು ಸಾಮಾಜಿಕ ಹೋರಾಟಗಾರರಾದ ಅನ್ಸಾರ್ ಅಹಮದ್ ರವರು ಸವಾಲೆಸೆದಿರುತ್ತಾರೆ

Leave a Reply

Your email address will not be published. Required fields are marked *

error: Content is protected !!