ಶಾಸಕ ಭಟ್-ಅರಣ್ಯಾಧಿಕಾರಿ ವಾಕ್ಸಮರ: ಎತ್ತಂಗಡಿ ಮಾಡಲು ಬಿಜೆಪಿ ಹುನ್ನಾರ?
ಉಡುಪಿ: ಬ್ರಹ್ಮಾವರದ ಕುಂಜಾಲು ರಸ್ತೆ ಅಗಲೀಕರಣಕ್ಕಾಗಿ ಮರ ತೆರವು ವಿಚಾರವಾಗಿ ಉಡುಪಿ ಶಾಸಕ ಮತ್ತು ಅರಣ್ಯಾಧಿಕಾರಿ ನಡುವೆ ತಾಪಂ ಸಾಮಾನ್ಯ ಸಭೆಯಲ್ಲಿ ತೀವ್ರ ಮಾತಿನ ಚಕಮಕಿ ನಡೆಯಿತು.
ಸೋಮವಾರ ತಾಲೂಕು ಪಂಚಾಯತ್ ಸಭಾಂಗಣದಲ್ಲಿ ನಡೆದ ಸಾಮಾನ್ಯ ಸಭೆಯಲ್ಲಿ ಅರಣ್ಯ ಇಲಾಖೆಯು ರಸ್ತೆ ಬದಿಯ ಮರ ತೆರವು ಮಾಡುವ ವಿಚಾರ ಹೆಬ್ರಿ ವಲಯ ಅರಣ್ಯಾಧಿಕಾರಿ ಮುನಿರಾಜ್ ಮತ್ತು ಶಾಸಕ ರಘುಪತಿ ಭಟ್ ನಡುವೆ ವಾಕ್ಸಾಮರಕ್ಕೆ ಕಾರಣವಾಯಿತು.
ಅರಣ್ಯಧಿಕಾರಿ ಮುನಿರಾಜ್, ನಾನು ಮರ ತೆರವು ವಿಚಾರವಾಗಿ ಅರಣ್ಯ ಕಾಯ್ದೆಯಂತೆ ನಾನು ನಡೆದುಕೊಳ್ಳುತ್ತಿದ್ದೇನೆ ಇದರಂತೆ ನಾನು ನಡೆದುಕೊಳ್ಳದಿದ್ದರೆ ಮೇಲಾಧಿಕಾರಿಗಳು ನನ್ನನ್ನು ತರಾಟೆಗೆ ತೆಗೆದುಕೊಳ್ಳುತ್ತಾರೆಂದರು. ಇದಕ್ಕೆ ಸಿಟ್ಟುಗೊಂಡ ಶಾಸಕ ರಘುಪತಿ ಭಟ್ ನಾವು ಜನರಿಗೆ ಬೇಕಾಗಿ ರಸ್ತೆ ಅಗಲೀಕರಣಾ ಮಾಡುತ್ತಿದ್ದೇವೆ, ನೀವು ಅದಕ್ಕೆ ಒಪ್ಪಿ ಅಭಿವೃದ್ಧಿ ಕಾರ್ಯಕ್ಕೆ ಬೇಕಾದಂತೆ ಸ್ಪಂದಿಸಿ ಕೆಲಸ ಮಾಡಬೇಕೆಂದರು. ಇದಕ್ಕೆ ಒಪ್ಪದ ಅಧಿಕಾರಿ ಮುನಿರಾಜ್ ವರ್ತನೆ ವಿರುದ್ಧ ಕೆಂಡಾಮಂಡಲವಾದರು ರಘುಪತಿ ಭಟ್.
ನೀವು ಜನಪ್ರತಿನಿಧಿ ಕುಳಿತುಕೊಳ್ಳುವ ಸ್ಥಳದಲ್ಲಿ ಕುಳಿತುಕೊಂಡಿರುವುದು ಯಾಕೆ ಎಂದು ಪ್ರಶ್ನಿಸಿದರು.
ನಾನು ಮತ್ತು ಇತರ ನಾಲ್ಕು ಮಂದಿ ಅಧಿಕಾರಿಗಳು ಇಲ್ಲಿ ಇದ್ದೇವೆ , ನಾನು ಒಬ್ಬನೇ ಕುಳಿತುಕೊಂಡಿಲ್ಲ ಎಂದು ಎದುರುತ್ತರ ಕೊಟ್ಟರು ಅರಣ್ಯಧಿಕಾರಿ, ಇದರಿಂದ ತಾಳ್ಮೆ ಕಳೆದುಕೊಂಡ ಶಾಸಕರು ಜನಪ್ರತಿನಿಧಿಗಳ ಸಾಲಿನಲ್ಲಿ ಇದ್ದ ಅಧಿಕಾರಿಗಳನ್ನು ಎಬ್ಬಿಸಿ ಸಭಾಂಗಣದ ಬಲ ಬದಿಕುಳಿತುಕೊಳ್ಳುವಂತೆ ತಾಲೂಕು ಪಂಚಾಯತ್ ಕಾರ್ಯನಿರ್ವಹಣಾಧಿಕಾರಿ ಮೂಲಕ ಸೂಚಿಸಿದರು.
ಸಭೆಯ ಮುಂದೆ ಬಂದ ಮುನಿರಾಜ್ ಅಲ್ಲೂ ಶಾಸಕರ ಎದುರು ನಿಂತು ನಾನೂ ಎಲ್ಲೂ ಅಗೌರವ ತೋರಿಲ್ಲ. ನಾನು ಸರ್ಕಾರಿ ಇಲಾಖೆಯ ಅಧಿಕಾರಿ. ಹಾಗಾಗಿ ಗೌರವಕೊಟ್ಟು ಮಾತನಾಡಿ ಎಂದು ಅಧಿಕಾರಿ ಶಾಸಕರಿಗೆ ಹೇಳಿದರು. ಅಧಿಕಾರಿ ಈ ಮಾತಿಗೆ ಮತ್ತಷ್ಟು ಕೆರಳಿದ ಶಾಸಕರು ಜನಪ್ರತಿನಿಧಿಯ ಸಾಲಿನಲ್ಲಿ ಕುಳಿತ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿ ಗುಡುಗಿದರು. ನಂತರ ಅಧಿಕಾರಿಗಳ ಸಾಲಿನಲ್ಲಿ ಕುಳಿತುಕೊಳ್ಳುವಂತೆ ಸೂಚಿಸಿದರು.
ಮುನಿರಾಜ್ ಅಧಿಕಾರಿಗಳ ಸಾಲಿನಲ್ಲಿ ಕುಳಿತ ನಂತರ ಶಾಸಕರು ಹಾಗೂ ಅಧಿಕಾರಿಯ ಜಟಾಪಟಿ ಮುಂದುವರಿಯಿತು. ಎಲ್ಲಾ ಸದಸ್ಯರು ಅರಣ್ಯಧಿಕಾರಿ ವರ್ತನೆಗೆ ಅಸಮಾಧನ ವ್ಯಕ್ತಪಡಿಸಿದರು.
ಬಳಿಕ ಅಧಿಕಾರಿ ಸಭೆಗೆ ಹಾಗೂ ಶಾಸಕರಿಗೆ ಅಗೌರವ ತೋರಿದ್ದಾರೆ ಎಂದು ಅಧಿಕಾರಿಯ ವಿರುದ್ಧ ಎಲ್ಲ ಸದಸ್ಯರು ಸರ್ವಾನುಮತದಿಂದ ನಿರ್ಣಯ ಕೈಗೊಂಡರು.
ಅರಣ್ಯಾಧಿಕಾರಿ ಮುನಿರಾಜು ಅರಣ್ಯ ಇಲಾಖೆ ಕಾಯ್ದೆಯಂತೆ ನಿಷ್ಠೆಯಲ್ಲಿ ತಮ್ಮ ಕೆಲಸ ನಿರ್ವಹಿಸುತ್ತಿದ್ದಾರೆ. ಇತ್ತೀಚೆಗೆ ಹೆಬ್ರಿಯಲ್ಲಿ ಬಿಜೆಪಿ ಮುಖಂಡನ ಅಕ್ರಮ ಮರದ ದಂಧೆಯಲ್ಲಿ ತೋಡಗಿದ್ದವರ ಮೇಲೆ ನಿರ್ದಾಕ್ಷಿಣ್ಯ ಕ್ರಮ ಕೈಗೊಂಡಿದ್ದರು. ಇದನ್ನು ಅರಗಿಸಿಕೊಳ್ಳಲಾಗದ ಬಿಜೆಪಿ ನಾಯಕರು ಸಭೆಯಲ್ಲಿ ಒಗ್ಗಟ್ಟಾಗಿ ಅಧಿಕಾರಿಯನ್ನು ತರಾಟೆಗೆ ತೆಗೆದುಕೊಳ್ಳಲು ಮೊದಲೇ ಮಾತನಾಡಿಕೊಂಡಿದ್ದಾರೆಂಬ ಮಾತು ಸಾರ್ವಜನಿಕ ವಲಯದಲ್ಲಿ ಕೇಳಿ ಬರುತ್ತಿದೆ. ಮರದ ದಂಧೆಯಲ್ಲೇ ಬೆಳೆಯುತ್ತಿರುವ ಸ್ಥಳೀಯ ಬಿಜೆಪಿ ನಾಯಕರುಗಳು ಪ್ರಾಮಾಣಿಕ ಅಧಿಕಾರಿಯನ್ನು ಎತ್ತಂಗಡಿ ಮಾಡಿಸುವ ಬಗ್ಗೆ ಸಂಚು ಹೆಣೆದಿದ್ದಾರೆ. ಇಂತಹ ಅಧಿಕಾರಿಯನ್ನು ಉಳಿಸಿಕೊಳ್ಳಬೇಕು ಎಂಬ ಸಾಮಾನ್ಯ ಕಾಳಜಿ ಇಲ್ಲದ ಕಾಂಗ್ರೆಸ್ ಸದಸ್ಯರು ತಮಗೂ ಇದಕ್ಕೂ ಯಾವುದೇ ಸಂಬಂಧ ಇಲ್ಲದಂತೆ ಸಭೆಯಲ್ಲಿ ವರ್ತಿಸುತ್ತಿರುವುದು ಆಶ್ಚರ್ಯವಾದಂತಿದೆ.