ಪಂಚಭಾಷೆಗಳಲ್ಲಿ ಭಾಗವತ (ಮೊಬೈಲ್ ಆಪ್) ದ ಉದ್ಘಾಟನೆ

ಶ್ರೀಕೃಷ್ಣ ಮಠದ ರಾಜಾಂಗಣದಲ್ಲಿ,ಅಷ್ಟಮಠಗಳಿಂದ ನಡೆಸಲ್ಪಡುವ ಸಂಸ್ಕೃತ ಮಹಾಪಾಠಶಾಲೆಯ ಸಂಶೋಧನಾ ಕೇಂದ್ರದ ಸಮಾರಂಭದಲ್ಲಿ ಪರ್ಯಾಯ ಶೀಪಾದರಾದ ಪರಮಪೂಜ್ಯ ಶ್ರೀ ಶ್ರೀ ವಿದ್ಯಾಧೀಶತೀರ್ಥ ಶ್ರೀಪಾದರು “ಶ್ರೀಮದ್ಭಾಗವತದ ಶ್ರವಣ-ಅಧ್ಯಯನಗಳು ನಮ್ಮ ಎಲ್ಲಾ ಇಹ-ಪರದುಃಖಗಳನ್ನು ಪರಿಹರಿಸುವಂತಹದ್ದು. ಅದರ ಅಧ್ಯಯನವನ್ನು ಎಲ್ಲರೂ ಅವಶ್ಯವಾಗಿ ಮಾಡಬೇಕು.

ಇದಕ್ಕೆ ಅನುಕೂಲವಾಗಿ ಉಡುಪಿಯ ಶ್ರೀಮನ್ಮಧ್ವಸಿದ್ಧಾಂತ ಪ್ರಬೋಧಕ ಸಂಸ್ಕೃತಸಂಶೋಧನಕೇಂದ್ರವು ಐದುಭಾಷೆಗಳಲ್ಲಿ ಭಾಗವತದ ಅಪ್ಲಿಕೇಶನನ್ನು ಸಿದ್ಧಪಡಿಸಿರುವುದು ಅತ್ಯಂತ ಶ್ಲಾಘನೀಯ.” ಎಂಬುದಾಗಿ ಹೇಳಿದರು. ಅವರು ಇದನ್ನು ಉದ್ಘಾಟಿಸಿ ಆಶೀರ್ವದಿಸಿದರು.

ಸಂಶೋಧನ ಕೇಂದ್ರದ ನಿರ್ದೇಶಕರಾದ ಡಾ.ಕಡಂದಲೆ ಗಣಪತಿ ಭಟ್ ಅದರ ವಿವರಣೆಯನ್ನು ಕೊಟ್ಟರು. ಆಸಕ್ತರು 8971145225 ನಂಬರನ್ನು ಸಂಪರ್ಕಿಸಬಹುದು.

Leave a Reply

Your email address will not be published. Required fields are marked *

error: Content is protected !!