ಜನತಾ ಕರ್ಫ್ಯೂ ಗೆ ಕುಂದಾಪುರ ಜನತಾ ಸಾಥ್
ಕುಂದಾಪುರ – ಕೊರೋನಾ ವೈರಸ್ ಗೆ ಸಂಬಂಧಪಟ್ಟಂತೆ ಪ್ರಧಾನಿ ನರೇಂದ್ರ ಮೋದಿ ಕರೆ ನೀಡಿರುವ ಜನತಾ ಕರ್ಫ್ಯೂ ಗೆ ಕುಂದಾಪುರದ ಜನ ಬೆಂಬಲ ನೀಡಿದ್ದಾರೆ. ಯಾವಾಗಲು ಜನರಿಂದ ತುಂಬಿರುತ್ತಿದ್ದ ಕುಂದಾಪುರ ಪೇಟೆ ಇಂದು ಮೌನವಾಗಿದೆ.
ಜನತಾ ಕರ್ಫ್ಯೂ ಗೆ ಕುಂದಾಪುರದ ಪೇಟೆ ಯಾ ಅಂಗಡಿ ಮುಂಗಟ್ಟುಗಳು ಬಾಗಿಲು ಹಾಕಿವೆ. ಅಲ್ಲೊಂದು ಇಲ್ಲೊಂದು ಆಟೋ ರಿಕ್ಷಾಗಳು ಕಾಣುತ್ತಿದ್ದೆ. ಕುಂದಾಪುರದ ಶಾಸ್ತ್ರಿ ಪಾರ್ಕ್ , ಹಳೆ ಬಸ್ ನಿಲ್ದಾಣ, ಹೊಸ ಬಸ್ ನಿಲ್ದಾಣ, ಪಾರಿಜಾತ ಸರ್ಕಲ್ ಎಲ್ಲ ಕಡೆ ಜನರಿಲ್ಲದೆ ,ವಾಹನ ವಿಲ್ಲದೆ ಬರಿದಾಗಿದೆ . ಪ್ರಧಾನಿ ಕೊಟ್ಟ ಜನತಾ ಕರ್ಫ್ಯೂ ಕರೆಗೆ ಜನತೆ ಸ್ವಯಂ ಪ್ರೇರಿತರಾಗಿ ಮನೆಯಲ್ಲಿ ಇದ್ದಾರೆ , ಜನ ತಮ್ಮ ಅಂಗಡಿ ಮುಂಗಟ್ಟುಗಳು ಬಂದ್ ಮಾಡಿದ್ದಾರೆ