ಕುಕ್ಕಿಕಟ್ಟೆ: ಪುಣ್ಯಕೋಟಿ ಗೋಸೇವಾ ಬಳಗದಿಂದ ಗೋಪೂಜೆ
ಉಡುಪಿ: ಪುಣ್ಯಕೋಟಿ ಗೋಸೇವಾ ಬಳಗ ಕುಕ್ಕಿಕಟ್ಟೆ ವತಿಯಿಂದ 54 ನೇ ತಿಂಗಳ ಗೋಪೂಜೆಯು ಉಡುಪಿಯ ಬೈಲೂರು ಶ್ರೀ ಮಹಿಷಮರ್ಧಿನಿ ದೇವಸ್ಥಾನದ ಬಳಿಯಿರುವ ಗೀತಾರಾವ್ ಅವರ ಮನೆಯಲ್ಲಿ ನಡೆಯಿತು.
ಗೋಪೂಜೆಯ ಅಂಗವಾಗಿ ನಡೆದ ಸಭಾ ಕಾರ್ಯಕ್ರಮದಲ್ಲಿ ಆರು ಮಂದಿ ಸಾಧಕರನ್ನು ಗೌರವಿಸಲಾಯಿತು.ಸಮಾಜಸೇವಕ ವಿಶು ಶೆಟ್ಟಿ ಅಂಬಲಪಾಡಿ, ಬೈಲೂರು ಶ್ರೀ ಮಹಿಷ ಮರ್ಧಿನಿ ದೇವಸ್ಥಾನದ ಪರಿಚಾರಿಕೆಯಾಗಿ ಸೇವೆಸಲ್ಲಿಸುತ್ತಿರುವ ಕಮಲ, ಮದುವೆ,ಗೃಹಪ್ರವೇಶ,ಮತ್ತಿತರ ಧಾರ್ಮಿಕ ಶುಭ ಕಾರ್ಯಕ್ರಮಗಳ ಸಂದರ್ಭದಲ್ಲಿ, ಸ್ವಚ್ಛತೆ ಇತ್ಯಾದಿ ಕೆಲಸಗಳಿಗೆ ಕಾರ್ಮಿಕರನ್ನು ಒದಗಿಸಿಕೊಡುವ ವೃತ್ತಿಯ ಬಸಮ್ಮ, ಶ್ರೀ ಮಹಿಷ ಮರ್ಧಿನಿ ಭಜನಾ ಮಂಡಳಿಯ ಮಾಜಿ ಅಧ್ಯಕ್ಷರಾಗಿ ಸೇವೆ ಸಲ್ಲಿಸಿರುವ ಗೋವಿಂದರಾಯ ಶೆಟ್ಟಿ, ಕಳೆದ 51 ವರ್ಷಗಳಿಂದ ಭಜನಾ ಮಂಡಳಿಯಲ್ಲಿ ಸಕ್ರಿಯ ಸದಸ್ಯರಾಗಿದ್ದುಕೊಂಡು ನಿರಂತರವಾಗಿ ಭಜನೆ ಸೇವೆಯಲ್ಲಿ ತೊಡಗಿಸಿಕೊಂಡಿರುವ ರಂಗ ಪೂಜಾರಿಯವರು, ಮತ್ತು ಮನೆಮನೆಗೆ ತೆರಳಿ ಭಜನೆ ಹಾಡುಗಳನ್ನು ಹಾಡುತ್ತಾ,ಭಜನೆಯನ್ನೇ ಬದುಕಿನ ವೃತ್ತಿಯಾಗಿಸಿಕೊಂಡಿರುವ,ಪಾಂಡುರಂಗ ಭಜನಾ ಮಂಡಳಿಯ ರಮೇಶ್ , ನಿಸ್ವಾರ್ಥ ಸೇವೆಯನ್ನು ಗುರುತಿಸಿ ಅವರನ್ನು ಸನ್ಮಾನಿಸಲಾಯಿತು.
ಬೈಲೂರು ಶ್ರೀ ಮಹಿಷ ಮರ್ಧಿನಿ ದೇವಸ್ಥಾನದ ಆಡಳಿತ ಮೊಕ್ತೇಸರರಾದ ರಮೇಶ್ ಶೆಟ್ಟಿ, ಪುಣ್ಯಕೋಟಿ ಗೋಸೇವಾ ಬಳಗದ ಸ್ಥಾಪಕಾಧ್ಯಕ್ಷೆ ಜ್ಯೋತಿ ಸತೀಶ್ ದೇವಾಡಿಗ, ಗೋಪೂಜೆಯ ಸೇವಾದಾರರಾದ ಅಜಿತ್ ರಾವ್ ಮುಂತಾದವರು ವೇದಿಕೆಯಲ್ಲಿ ಉಪಸ್ಥಿತರಿದ್ದರು. ಪುಣ್ಯಕೋಟಿ ಗೋಸೇವಾ ಬಳಗದ ಸದಸ್ಯೆ ತಾರಾ ಆಚಾರ್ಯ ಸ್ವಾಗತಿಸಿ, ನಿರೂಪಿಸಿದರು. ಅಜಿತ್ ರಾವ್ ಧನ್ಯವಾದ ಸಲ್ಲಿಸಿದರು.ಬೈಲೂರು ಪರಿಸರದ ಗೋಭಕ್ತರು, ಗೀತಾ ರಾವ್,ಅಜಿತ್ ರಾವ್ ಮತ್ತು ಮನೆಯವರು,ಬೈಲೂರು ಮಹಿಷಮರ್ಧಿನಿ ದೇವಸ್ಥಾನದ ವಿಪ್ರ ಮಂಡಳಿ ಸದಸ್ಯೆಯರು,ಮತ್ತು ದೇವಸ್ಥಾನದ ಮಹಿಳಾ ಸಮಿತಿ ಯ ಸದಸ್ಯರು,ಪುಣ್ಯಕೋಟಿ ಗೋಸೇವಾ ಬಳಗದ ಸದಸ್ಯೆಯರು ಎಲ್ಲರೂ ಒಟ್ಟಾಗಿ ಸೇರಿ,ಗೋವುಗಳಿಗೆ ನವಧಾನ್ಯವನ್ನು ತಿನ್ನಿಸಿ, ಆರತಿಯನ್ನು ಬೆಳಗಿ ಗೋಪೂಜೆಯನ್ನು ನೆರವೇರಿಸಿದರು.
ಧನ್ಯವಾದಗಳು.ಉಡುಪಿ ಟೈಮ್ಸ್.ಗೋಮಾತೆಯ ಅನುಗ್ರಹ ತಮಗೆಲ್ಲರಿಗಿರಲಿ.