ಪರ್ಯಾಯೋತ್ಸವ: ಕಿನ್ನಿಮೂಲ್ಕಿಯಲ್ಲಿ ಡ್ಯಾನ್ಸ್ ಧಮಾಕ

ಉಡುಪಿ: ಉಡುಪಿಯ ನಾಡ ಹಬ್ಬಯೆಂದೇ ಪ್ರಖ್ಯಾತವಾದ ಪರ್ಯಾಯ ಮಹೋತ್ಸವದ ಅಂಗವಾಗಿ ಶ್ರೀ ಕೃಷ್ಣ ಗ್ರೂಪ್ ಆಫ್ ಡ್ಯಾನ್ಸ್(ರಿ) ವತಿಯಿಂದ ಜನವರಿ 17ರ ಶುಕ್ರವಾರ ಸಂಜೆ 6 ಗಂಟೆಗೆ ಕಿನ್ನಿಮೂಲ್ಕಿ ಜಂಕ್ಷನ್ ಬಳಿ “ಸಂಗೀತ ಸೌರಭ್ -2020” ಖ್ಯಾತ ಗಾಯಕರಿಂದ ಸಂಗೀತ ರಸಮಂಜರಿ ಕಾರ್ಯಕ್ರಮ ನಡೆಯಲಿದೆ ಎಂಬುದಾಗಿ ಉಡುಪಿಯ ಖ್ಯಾತ ಉದ್ಯಮಿ, ಸಮಾಜ ಸೇವಕ ಹಾಗು ಶ್ರೀ ಕೃಷ್ಣ ಗ್ರೂಪ್ಸ್ ನ ಮಾಲಕ ಕೃಷ್ಣಮೂರ್ತಿ ಆಚಾರ್ಯ ತಿಳಿಸಿದ್ದಾರೆ.

ಪ್ರತಿ ಪರ್ಯಾಯದಲ್ಲಿ ಅದ್ಭುತವಾದ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವುದರ ಮೂಲಕ ಜನರ ಮನಸು ಗೆದ್ದಿರುವ ಕೃಷ್ಣ ಮೂರ್ತಿ ಆಚಾರ್ಯ ಹಾಗು ಅಮೃತ ಕೃಷ್ಣಮೂರ್ತಿ ದಂಪತಿಗಳು ಈ ಬಾರಿ ಸಂಗೀತ ಸೌರಭ್ ಹಮ್ಮಿಕೊಳ್ಳುವುದರ ಮೂಲಕ ಉಡುಪಿಯ ಜನರಿಗೆ ಮನರಂಜನೆಯ ರಸದೌತಣ ನೀಡಲಿದ್ದಾರೆ.

“ಸಂಗೀತ ಸೌರಭ್ – 2020” ಸಂಗೀತ ರಸಮಂಜರಿ ಕಾರ್ಯಕ್ರಮವನ್ನ ನಾಡೋಜ ಡಾ. ಜಿ. ಶಂಕರ್ ಉದ್ಘಾಟಿಸಲಿದ್ದಾರೆ, ಕಾರ್ಯಕ್ರಮದ ಅಧ್ಯಕ್ಷತೆಯನ್ನ ಪ್ರಸಾದ್ ನೇತ್ರಾಲಯದ ವೈದ್ಯರಾದ ಡಾ. ಕೃಷ್ಣ ಪ್ರಸಾದ್ ನಿರ್ವಹಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ವಿಜೇಂದ್ರ ಯಡಿಯೂರಪ್ಪ ,ಯಶಪಾಲ್ ಸುವರ್ಣ, ಪ್ರಮೋದ್ ಮಧ್ವರಾಜ್, ಆಸ್ಕರ್ ಫೆರ್ನಾಂಡಿಸ್, ವಿನಯ ಕುಮಾರ್ ಸೊರಕೆ ಭಾಗವಹಿಸಲಿದ್ದಾರೆ.

ಇದೆ ಸಂದರ್ಭದಲ್ಲಿ ರಿಕ್ಷಾ ಚಾಲಕರಿಗೆ ಸಮವಸ್ತ್ರ ವಿತರಣೆ , ಧನ ಸಹಾಯ ವಿತರಣೆ, ಸಾಧಕರಿಗೆ ಸನ್ಮಾನ ನಡೆಯಲಿದೆ. ಸಂಜೆ 6 .30 ಕ್ಕೆ ವಿದುಷಿ ಡಾ. ರಶ್ಮಿ ಗುರುಮೂರ್ತಿ, ಅಭಿಜ್ಞ ನ್ರತ್ಯಭೂಮಿ ಇವರ ಶಿಷ್ಯೆ ವೈಭವಿ ರಾವ್ ಇವರಿಂದ ಭರತನಾಟ್ಯ ಕಾರ್ಯಕ್ರಮವಿದ್ದು. ರಸಮಂಜರಿ ಕಾರ್ಯಕ್ರಮದಲ್ಲಿ ಖ್ಯಾತ ಹಿನ್ನಲೆ ಗಾಯಕರಾದ ಅಜಯ್ ವಾರಿಯರ್ , ಶ್ರೀ ಹರ್ಷ , ಅರ್ಜುನ್ ಇಟಗಿ, ಡಿ. ವೈ. ರಾಮಚಂದ್ರ , ಪೊಲ್ಲಚ್ಚಿ ಮುತ್ತು,
ಸಭಾ ಕಾರ್ಯಕ್ರಮದಲ್ಲಿ ವಿಶೇಷ ಆಕರ್ಷಣೆಯಾಗಿ ಚಲನ ಚಿತ್ರ ನಟರಾದ ನಟಿಯರಾದ ವಿಜಯ್ ರಾಘವೇಂದ್ರ, ರೂಪೇಶ್ ಶೆಟ್ಟಿ, ಕಾರ್ತಿಕ್ ಕಾಪಿಕಾಡ್, ಅನೂಪ್ ಸಾಗರ್, ಸೌರವ್ ಭಂಡಾರಿ ಭಾಗವಹಿಸಲಿದ್ದರೆಂದು ಕೃಷ್ಣಮೂರ್ತಿ ಆಚಾರ್ಯ ತಿಳಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!