ಕೃಷ್ಣನೊಳಗೆ ಐಕ್ಯರಾದ ಕೃಷ್ಣ ಭಕ್ತ

ಉಡುಪಿ: ತೀವ್ರ ಉಸಿರಾಟದ ಸಮಸ್ಯೆ ಹಾಗೂ ನ್ಯುಮೋನಿಯಾದಿಂದ ಬಳಲುತ್ತಿದ್ದ ಪೇಜಾವರ ಮಠದ ವಿಶ್ವೇಶತೀರ್ಥ ಸ್ವಾಮೀಜಿ(88) ಭಾನುವಾರ ಪೇಜಾವರ ಮಠದಲ್ಲಿ ನಿಧನರಾಗಿದ್ದಾರೆ. ಸತತ 9 ದಿನಗಳಿಂದ ಜೀವನ್ಮರಣ ಹೋರಾಟ ನಡೆಸುತ್ತಿದ್ದ ಶ್ರೀಗಳು ಚಿಕಿತ್ಸೆಗೆ ಸ್ಪಂದಿಸದೆ ಉಸಿರು ಚೆಲ್ಲಿದ್ದಾರೆ.

ಡಿಸೆಂಬರ್ 19 ರಂದು ರಾತ್ರಿ 9.30ಕ್ಕೆ ಉಸಿರಾಟದ ಸಮಸ್ಯೆ ಕಾಣಿಸಿಕೊಂಡಾಗ ಖಾಸಗಿ ಆಸ್ಪತ್ರೆಗೆ ಕರೆದೊಯ್ಯಲಾಯಿತು. ನ್ಯುಮೋನಿಯಾ ಇದೆ, ತಕ್ಷಣ ಚಿಕಿತ್ಸೆ ಆರಂಭಿಸಬೇಕು ಎಂದು ವೈದ್ಯರು ಸೂಚಿಸಿದರೂ ಶ್ರೀಗಳು ಅಲಕ್ಷ್ಯಿಸಿದರು.

ಬೆಳಗ್ಗೆ ಬೇಗ ದೇವರ ಪೂಜೆ ಮುಗಿಸಿ ಬರುತ್ತೇನೆ ಎಂದು ಮಠಕ್ಕೆ ಹಿಂದಿರುಗಿದ ಶ್ರೀಗಳು, ಬೆಳಗ್ಗೆ ಪ್ರಜ್ಞಾಹೀನ ಸ್ಥಿತಿಯಲ್ಲಿ ಆಸ್ಪತ್ರೆಗೆ ಬಂದಿದ್ದರು. ಆ ವೇಳೆಗಾಗಲೇ ಅವರ ಆರೋಗ್ಯ ಗಂಭೀರವಾಗಿತ್ತು ಎಂದು ಹೇಳಲಾಗಿದೆ.

ಡಿ.20ರಂದು ನಸುಕಿನ 3 ಗಂಟೆಗೆ ಪೇಜಾವರ ಶ್ರೀಗಳು ಅಸ್ವಸ್ಥರಾದರು. ನಂತರ ಅವರನ್ನು ಕೆಎಂಸಿಗ ಆಸ್ಪತ್ಕೆಗೆ ದಾಖಲಿಸಲಿಸಲಾಯಿತು, ನ್ಯುಮೋನಿಯಾ ಸೋಂಕು ಪತ್ತೆಯಾಗಿತ್ತು.
ಶ್ರೀಗಳ ಆರೋಗ್ಯ ಗಂಭೀರವಾದ ಮೇಲೆ ವೆಂಟಿಲೇಟರ್ ಅಳವಡಿಸಲಾಯಿತು, ಡಾ. ಸುಧಾ ವಿದ್ಯಾಸಾಗರ ನೇತೃತ್ವದ ವೈದ್ಯರ ತಂಡದಿಂದ ಚಿಕಿತ್ಸೆ ಆರಂಭಿಸಲಾಯಿತು
ಡಿಸೆಂಬರ್ 21ರಂದು ಚಿಕಿತ್ಸೆಗೆ ಸ್ಪಂದಿಸಿದ ಶ್ರೀಗಳು, ಡಿಸೆಂಬರ್ 22ರಂದು ಬೆಂಗಳೂರಿನ ಮಣಿಪಾಲ್ ವೈದ್ಯರ ಆಗಮನ, ಡಿಸೆಂಬರ್ 23ರಂದು ರಕ್ತದೊತ್ತಡ ನಿಯಂತ್ರಣ, ಏಮ್ಸ್‌ ವೈದ್ಯರ ನೆರವು ಪಡೆದುಕೊಳ್ಳಾಯಿತು ಡಿಸೆಂಬರ್ 24ರಂದು ಚಿಕಿತ್ಸೆಗೆ ಅಲ್ಪ ಸ್ಪಂದನೆ ಸಿಕ್ಕಿದ ನಂತರ ಅವರ ಆರೋಗ್ಯದಲ್ಲಿ ಸ್ವಲ್ಪ ಚೇತರಿಕೆ ಕಂಡುಬಂದಿತ್ತು.


ಶ್ರೀಗಳ 9 ದಿನಗಳ ಜೀವನ್ಮರಣ ಹೋರಾಟ: ಅರೋಗ್ಯ ನಿರ್ಲಕ್ಷ್ಯಿಸಿದ್ರಾ ಶ್ರೀಗಳು?
ಹೀಗೊಂದು ಪ್ರಶ್ನೆ ಅವರ ಭಕ್ತ ಸಮುದಾಯದಲ್ಲಿ ಎದ್ದಿದೆ, ತನ್ನ ಬಿಡುವಿರದ ಕಾರ್ಯಗಳಲ್ಲಿ ಮಗ್ನರಾದ ಯತಿಗಳು ತನ್ನ ಆರೋಗ್ಯದ ಬಗ್ಗೆ ಜಾಗ್ರತೆ ವಹಿಸಲೇ ಇಲ್ಲ.
ಡಿಸೆಂಬರ್ 25ರಂದು ಶ್ವಾಸಕೋಶ ನಿಧಾನವಾಗಿ ಚೇತರಿಕೆ, ಪ್ರಜ್ಞಾಹೀನ ಸ್ಥಿತಿ ತಲುಪಿದ ಶ್ರೀಗಳು ,ಡಿಸೆಂಬರ್ 26ರಂದು ಮತ್ತೆ ಆರೋಗ್ಯ ದಿಢೀರ್ ಏರುಪೇರು, ಗಂಭೀರ, ಡಿಸೆಂಬರ್ 27ರಂದು ಆರೋಗ್ಯ ತೀರಾ ಗಂಭೀರ, ದೇಹಸ್ಥಿತಿ ಇಳಿಮುಖಗೊಳ್ಳತೊಡಗಿತು
ಡಿಸೆಂಬರ್ 28ಕ್ಕೆ ಮಿದುಳು ನಿಷ್ಕ್ರಿಯ. ಡಿಸೆಂಬರ್ 29ರಂದು ಮಠಕ್ಕೆ ಶ್ರೀಗಳ ಸ್ಥಳಾಂತರ. ಬೆಳಗ್ಗೆ 9.20ಕ್ಕೆ ನಿಧನರಾಗಿದ್ದರೆಂದು ಅಧಿಕೃತ ಘೋಷಣೆ ಮಾಡಲಾಯಿತು ಹೀಗೆ ೯ ದಿನಗಳ ಜೀವನ್ಮರಣದಲ್ಲಿ ಯತಿಗಳು ಕೃಷ್ಣ ನಲ್ಲಿ ಲೀನರಾದರು ಅವರ ಕೋಟ್ಯಂತರ ಭಕ್ತರ ಪಾಲಿಗೆ ಅವರಿನ್ನೂ ಕೈಗೆಟುಕದ ನಕ್ಷತ್ರ .

Leave a Reply

Your email address will not be published. Required fields are marked *

error: Content is protected !!