ಕ್ರಾಸ್ಟೊಸ್ ಭಾಂಗ್ರಾಳಿ ಕೊಗುಳ್ 2020: 12 ಮಂದಿ ಗ್ರ್ಯಾಂಡ್ ಫಿನಾಲೆಗೆ
ಉಡುಪಿ / ಮಂಗಳೂರು : ಸುವರ್ಣ ಮಹೋತ್ಸವದ ಸಂಭ್ರಮದಲ್ಲಿರುವ ಭಾರತೀಯ ಕಥೊಲಿಕ್ ಯುವ ಸಂಚಲನ (ಐಸಿವೈಎಂ) ಉದ್ಯಾವರ ಸುವರ್ಣ ಸಮಿತಿಯ ಬಹುನಿರೀಕ್ಷಿತ ಕಾರ್ಯಕ್ರಮ “ಕ್ರಾಸ್ಟೊಸ್ ಭಾಂಗ್ರಾಳಿ ಕೊಗುಳ್ 2020” ಕೊಂಕಣಿ ಸಂಗೀತ ಕಾರ್ಯಕ್ರಮದ ಆಡಿಷನ್ ಎಂದು ಮಂಗಳೂರು ಮತ್ತು ಉಡುಪಿಯಲ್ಲಿ ಯಶಸ್ವಿಯಾಗಿ ನಡೆಯಿತು.
ಉಡುಪಿ ಧರ್ಮಪ್ರಾಂತ್ಯದಲ್ಲಿ ಒಟ್ಟು 32 ಸ್ಪರ್ಧಿಗಳು ಭಾಗವಹಿಸಿದರೆ, ಮಂಗಳೂರಿನಲ್ಲಿ 26 ಸ್ಪರ್ಧಿಗಳು ಆಡಿಶನ್ನಲ್ಲಿ ಭಾಗವಹಿಸಿದ್ದರು. ಉಡುಪಿ ಮತ್ತು ಮಂಗಳೂರು ಧರ್ಮ ಪ್ರಾಂತ್ಯದಿಂದ ಗ್ರ್ಯಾಂಡ್ ಫಿನಾಲೆಗೆ ಒಟ್ಟು ಆಡಿಷನ್ನಿಂದ ಹನ್ನೆರಡು ಮಂದಿ ಆಯ್ಕೆಯಾಗಿದ್ದು, ಅವರ ಹೆಸರುಗಳು ಈ ಕೆಳಗಿನಂತಿವೆ.
ಮಾರ್ವೆಲ್ ಡಿಸೋಜಾ, ಉಡುಪಿ, ಸಿಲ್ವಿಯಾ ಫೆರ್ನಾಂಡಿಸ್, ಉದ್ಯಾವರ, ರೋಯ್ಟನ್ ಡಿಸೋಜಾ, ಕೊಳಲಗಿರಿ, ರೀನಲ್ ಲುವಿಸ್ ಬ್ರಹ್ಮಾವರ, ಮೆಲ್ವಿಟಾ ಡಿಸೋಜಾ, ಪೆರಂಪಳ್ಳಿ , ಕ್ಯಾರೋಲ್ ದಾಂತಿ, ಪೆರ್ನಾಲ್, ಕ್ಯಾರಲ್ ಸಿಕ್ವೇರಾ, ವಲೆನ್ಸಿಯಾ, ಡಿಯೆಲ್ ಡಿಸೋಜ, ಬೊಂದೆಲ್, ಓಲಿಟಾ ಪಿಂಟೋ, ಆ್ಯನ್ಸನ್ ಮಿನೆಜಸ್, ಬ್ರಹ್ಮಾವರ, ಸೀಮಾ ಡಿಸೋಜ, ರೇಷ್ಮಾ ಮೋರಸ್.
ಉದ್ಯಾವರದ ಸಂತ ಫ್ರಾನ್ಸಿಸ್ ಝೇವಿಯರ್ ದೇವಾಲಯದ ಸಭಾಭವನದಲ್ಲಿ ಜರುಗಿದ ಆಡಿಷನ್ ನನ್ನು ಉಡುಪಿ ಧರ್ಮಪ್ರಾಂತ್ಯದ ಕುಲಪತಿ ವಂದನೀಯ ಫಾ. ಸ್ಟ್ಯಾನಿ ಬಿ ಲೋಬೊ ಮತ್ತು ಮಂಗಳೂರಿನ ಐಸಿವೈಎಂ ಕೇಂದ್ರೀಯ ಕಚೇರಿಯಲ್ಲಿ ಜರುಗಿದ ಆಡಿಷನ್ನ ಉದ್ಘಾಟನೆಯನ್ನು ಐಸಿವೈಎಂ ಮಂಗಳೂರು ಧರ್ಮ ಪ್ರಾಂತ್ಯದ ನಿರ್ದೇಶಕ ವಂದನೀಯ ಫಾ.ರೊನಾಲ್ಡ್ ಡಿಸೋಜ ನೆರವೆರಿಸಿ ಶುಭ ಹಾರೈಸಿದರು.
ತೀರ್ಪುಗಾರರಾಗಿ ಉದ್ಯಾವರದಲ್ಲಿ ಜೋಯಲ್ ಅತ್ತೂರು, ರೋನಿ ಕ್ರಾಸ್ಟಾ, ಮೀರಾ ಡಿಸೋಜಾ ಮತ್ತು ಮಂಗಳೂರಿನಲ್ಲಿ ಲಾಯಿ ಕಸ್ತಲಿನೋ, ನೆಲ್ಸನ್ ಲೂವಿಸ್ ಮತ್ತು ಐವಿ ಡಿಸೋಜಾ ಸಹಕರಿಸಿದರು.ಕಾರ್ಯಕ್ರಮದ ನಿರೂಪಣೆಯನ್ನು ಸ್ಟೀವನ್ ಕುಲಾಸೊ ಮತ್ತು ರೊಸಲಿಯಾ ಕಾರ್ಡೋಜ ನಡೆಸಿದರು.
ಈ ಸಂದರ್ಭದಲ್ಲಿ ಜೋನ್ ಗೋಮ್ಸ್, ರೊನಾಲ್ಡ್ ಡಿಸೋಜ, ಆನ್ಸನ್ ಅಂದ್ರಾದೆ, ರಾಯ್ಸ್ಟನ್ ಲೂವಿಸ್, ರಾಯಲ್ ಕಸ್ತಲೆನೊ, ಜೆಸ್ಟನ್ ಕರ್ಡೊಜ ಮತ್ತಿತರರು ಉಪಸ್ಥಿತರಿದ್ದರು. ಸುವರ್ಣ ಮಹೋತ್ಸವ ಸಮಿತಿಯ ಗೌರವಾಧ್ಯಕ್ಷ ಉದ್ಯಮಿ ನೊರ್ಬಟ್ ಕ್ರಾಸ್ಟೊ ಮತ್ತು ಕುಟುಂಬಸ್ಥರು ಪ್ರಾಯೋಜಿಸಿರುವ “ಕ್ರಾಸ್ಟೊಸ್ ಭಾಂಗ್ರಾಳಿ ಕೊಗುಳ್ 2020” ಮಾರ್ಚ್ 22 ರಂದು ಆದಿತ್ಯವಾರ ಸಂಜೆ 5 ಗಂಟೆಗೆ ಉದ್ಯಾವರ ಸಂತ ಫ್ರಾನ್ಸಿಸ್ ಝೇವೆಯರ್ ದೇವಾಲಯದ ವಠಾರದಲ್ಲಿ ಜರುಗಲಿದೆ.