ಕೋಟೇಶ್ವರ: ಭತ್ತ ಕಟಾವು ಯಂತ್ರದ ಅಪರೇಟರ್ ಗೆ ಲಾಠಿ ಏಟು, ಮುಂದುವರಿದ ಪೊಲೀಸ್ ದೌರ್ಜನ್ಯ
ಉಡುಪಿ: ಜಿಲ್ಲೆಯಲ್ಲಿ ಇಂದು ಕೂಡ ಪೊಲೀಸರ ದೌರ್ಜನ್ಯ ಮುಂದುವರಿದಿದ್ದು, ಕೋಟೇಶ್ವರದಲ್ಲಿ ಭತ್ತ ಕಟಾವು ಯಂತ್ರ ಕೊಂಡುಯ್ಯುತ್ತಿದ್ದ ಅಪರೇಟರ್‌ಗೆ ವಿನಹ: ಕಾರಣ ಲಾಠಿಯಲ್ಲಿ ಹೊಡೆದ ಘಟನೆ ನಡೆದಿದೆ.
ಜಿಲ್ಲಾಡಳಿತ ಅನುಮತಿಯೊಂದಿಗೆ ರೈತರ ಗದ್ದೆಗಳಲ್ಲಿ ಬೆಳೆದ ಭತ್ತದ ಕಟಾವು ಮಾಡಲು ಕೋಟೇಶ್ವರದಿಂದ ನೆಲ್ಲಿಕಟ್ಟೆಗೆ ಶುಕ್ರವಾರ ಮಧ್ಯಾಹ್ನ 12 ಗಂಟೆಗೆ ಕಟಾವು ಯಂತ್ರದೊಂದಿಗೆ ಹೊರಟ ವಾಹನವನ್ನು ತಡೆದ ಪೊಲೀಸರು ಅಪರೇಟರ್‌ಗೆ ಲಾಠಿಯಲ್ಲಿ ಹಿಗ್ಗಾಮುಗ್ಗ ಹಲ್ಲೆ ಮಾಡಿದ್ದಾರೆ.
ನಂತರ ಕೃಷಿ ಇಲಾಖೆ ಜಂಟಿ ನಿರ್ದೇಶಕರು ನೀಡಿದ ಅನುಮತಿ ಪತ್ರ ತೋಸಿದರು ಪೊಲೀಸರು ನೋಡಲು ತಯಾರಿರಲಿಲ್ಲ. ಈಗಾಗಲೇ ಜಿಲ್ಲೆಯಲ್ಲಿ ಭತ್ತ ಬೆಳೆ ಕಟಾವು ಮಾಡುವಷ್ಟು ಬೆಳೆದಿದ್ದು, ಕೊರೋನಾ ಸಾಂಕ್ರಾಮಿಕ ರೋಗ ಹರಡುವ ಭೀತಿಯಿಂದ ಯಾರು ಕೂಡ ಮನೆಯಿಂದ ಹೊರ ಬರುತ್ತಿಲ್ಲ ಆದ್ದರಿಂದ ಕೂಲಿ ಕಾರ್ಮಿಕರ ಸಮಸ್ಯೆ ತೀವೃತರವಾಗಿದೆ. ಅದಕ್ಕಾಗಿ ಜಿಲ್ಲಾಧಿಕಾರಿಯವರು ಯಂತ್ರದ ಸಹಾಯದಿಂದ ಭತ್ತ ಕಟಾವು ಮಾಡಲು ವಿಶೇಷ ಅನುಮತಿ ನೀಡಿದ್ದಾರೆ. ಈ ಅನುಮತಿ ಪತ್ರವಿದ್ದರೂ ಪೊಲೀಸರ ಈ ವರ್ತನೆಗೆ ಸ್ಥಳೀಯರು ತೀವೃ ಅಸಮಾಧನ ವ್ಯಕ್ತಪಡಿಸಿದ್ದಾರೆ.
ಬೇರೆ ಜಿಲ್ಲೆಗಳಿಗೆ ಹೋಲಿಸಿದರೆ ಉಡುಪಿ ಜಿಲ್ಲೆಯಲ್ಲಿ ಲಾಕ್ ಡೌನ್‌ಗೆ ಜನರು ಸಂಪೂರ್ಣ ಸಹಕಾರ ಕೊಡುತ್ತಿದ್ದಾರೆ. ಕೆಲವೊಂದು ತುರ್ತ ಸಂದರ್ಭಗಳಲ್ಲಿ ಮನೆಯಿಂದ ಹೊರ ಹೋಗುವವರ ಜೊತೆ ಪೊಲೀಸರು ಸಂಹಯದಿಂದ ವರ್ತಿಸಲು ಜಿಲ್ಲಾಧಿಕಾರಿ ಹಿರಿಯ ಪೊಲೀಸ್ ಅಧಿಕಾರಿಗಳಿಗೆ ನಿರ್ದೇಶನ ತಕ್ಷಣದಿಂದಲೇ ನೀಡಬೇಕೆಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.