ಸ್ವರ್ಣ ನದಿಗೆ ಬಾಗಿನ ಅರ್ಪಿಸಿದ ಸಚಿವ ಕೋಟ ಶ್ರೀನಿವಾಸ ಪೂಜಾರಿ

 ಉಡುಪಿ: ಜೀವನದಿ ಸುವರ್ಣೆಗೆ ಜಿಲ್ಲೆಯ ಜನತೆಯ ಪರವಾಗಿ ಮುಜರಾಯಿ ಮತ್ತು ಬಂದರು ಮೀನುಗಾರಿಕಾ ಮಂತ್ರಿ ಕೋಟ ಶ್ರೀನಿವಾಸ ಪೂಜಾರಿ ಹಾಗೂ ಪತ್ನಿ ಶಾಂತಾ ಇಂದು ಬೆಳಿಗ್ಗೆ ಪೆರಂಪಳ್ಳಿ ಸಮೀಪದ ಶೀಂಬ್ರ ಶ್ರೀ ಸಿದ್ಧಿವಿನಾಯಕ ದೇವಸ್ಥಾನದ ಕೃಷ್ಣಾಂಗಾರಕ ಸ್ನಾನಘಟ್ಟದಲ್ಲಿ ಹಾಲು ಅಭಿಷೇಕ ಸಹಿತ ಬಾಗಿನ ಸಲ್ಲಿಸಿ , ಮಂಗಳಾರತಿ ಬೆಳಗಿ  ಋಣಭಾರ ಒಪ್ಪಿಸಿದರು.

 ಇದೇ ಸಂದರ್ಭ   ಇಲ್ಲಿ ಬಹುವರ್ಷಗಳಿಂದ ಬೇಡಿಕೆ ಇರುವ ಸುಸಜ್ಜಿತ ಸ್ನಾನಘಟ್ಟವನ್ನು ಶೀಘ್ರದಲ್ಲೇ ಅನುಷ್ಠಾನಿಸುವುದಾಗಿ ಮಂತ್ರಿಗಳು ಹಾಗೂ ಶಾಸಕ ರಘುಪತಿ ಭಟ್ ಭರವಸೆ ನೀಡಿದರು‌.

 ವಾಸುದೇವ ಭಟ್ ಪೆರಂಪಳ್ಳಿ ಅವರ ಮಾರ್ದರ್ಶನದಲ್ಲಿ ಪೂಜಾ ವಿಧಿವಿಧಾನಗಳನ್ನು ಮಂತ್ರಿಗಳು ಶಾಸಕರು ನೆರವೇರಿಸಿದರು. ಬಳಿಕ ಶ್ರೀ ಸಿದ್ಧಿವಿನಾಯಕ ದೇವರಿಗೆ ಮಂಗಳಾರತಿ ನೆರವೇರಿಸಲಾಯಿತು ಅರ್ಚಕ ನವೀನ್ ಶಿವತ್ತಾಯ ,ಆಡಳಿತ ಮಂಡಳಿ ಸದಸ್ಯ ಕೃಷ್ಣಮೂರ್ತಿ ಶಿವತ್ತಾಯ ,ಇಂಜಿನಿಯರ್ ರಮೇಶ್ ರಾವ್  ನಗರ ಸಭಾ ಸದಸ್ಯರುಗಳಾದ ಮಂಜುಳಾ ನಾಯಕ್ ,ಮಂಜುನಾಥ ಶೆಟ್ಟಿಗಾರ್ ,ಬಾಲಕೃಷ್ಣ ಶೆಟ್ಟಿ ,ಚಂದ್ರಶೇಖರ್ ,ಜಯಂತಿ ಪೂಜಾರಿ ಗಿರೀಶ್ಅಂಚನ್ ,ಮಾಜಿನಗರ ಸಭಾಧ್ಯಕ್ಷ ಹೆರ್ಗ ದಿನಕರ ಶೆಟ್ಟಿ ,ಹರಿಕೃಷ್ಣ ಶಿವತ್ತಾಯ ಸತೀಶ್ ಕುಮಾರ್ ,ಶ್ರೀನಿವಾಸ ಬಲ್ಲಾಳ್ ,  ಮೊದಲಾದವರು ಉಪಸ್ಥಿತರಿದ್ದರು

Leave a Reply

Your email address will not be published. Required fields are marked *

error: Content is protected !!