ಕೊಲ್ಲೂರು: 1800 ಯಕ್ಷಗಾನ ಕಲಾವಿದರಿಗೆ ಆಹಾರ ಸಾಮಗ್ರಿಗಳ ಕಿಟ್ ಹಸ್ತಾಂತರ
ಕೊಲ್ಲೂರು: ಕೊರೋನಾ ಲಾಕ್ ಡೌನ್ ನಿಂದಾಗಿ ಸಂಕಷ್ಟ ಎದುರಿಸುತ್ತಿರುವ ಯಕ್ಷಗಾನ ಕಲಾವಿದರಿಗೆ ಕೊಲ್ಲೂರು ದೇವಳದಿಂದ ಮೂಕಾಂಬಿಕೆಯ ಪ್ರಸಾದ ರೂಪದಲ್ಲಿ 1800 ಕುಟುಂಬಗಳಿಗೆ ಆಹಾರ ಸಾಮಗ್ರಗಳ ಕಿಟ್ ಗಳನ್ನು ಒದಗಿಸಿದ್ದಾರೆ. ಶನಿವಾರ ದೇವಳದ ವಠಾರದಲ್ಲಿ ಈ ಕಿಟ್ ಗಳನ್ನು ಹಸ್ತಾಂತರಿಸಲಾಯಿತು .
ಸಚಿವ ಶ್ರೀನಿವಾಸ ಪೂಜಾರಿಯವರು ಈ ಕಿಟ್ ಗಳ ವಿತರಣೆಯ ಜವಾಬ್ದಾರಿ ಹೊತ್ತಿರುವ ಉಡುಪಿ ಯಕ್ಷಗಾನಕಲಾರಂಗದ ಅಧ್ಯಕ್ಷ ಕೆ ಗಣೇಶ್ ರಾವ್ ಮತ್ತು ಕಾರ್ಯದರ್ಶಿ ಮುರಳಿ ಕಡೆಕಾರ್ ಗೆ ಕಿಟ್ ಗಳನ್ನು ಸಾಂಕೇತಿಕವಾಗಿ ಹಸ್ತಾಂತರಿಸಿದರು .ದಕ್ಷಿಣ ಕನ್ನಡ ,ಉತ್ತರ ಕನ್ನಡ , ಉಡುಪಿ, ಶಿವಮೊಗ್ಗ ಜಿಲ್ಲೆಗಳಲ್ಲಿ ನೆಲೆಸಿರುವ , ಪ್ರಸ್ತುತ ಕೊರೊನಾ ಲಾಕ್ ಡೌನ್ ನಿಂದ ಸಂಕಷ್ಟದಲ್ಲಿರುವ ಕಲಾವಿದರಿಗೆ ರಾಜ್ಯ ಮುಜರಾಯಿ ಸಚಿವ ಕೋಟ ಶ್ರೀನಿವಾಸ ಪೂಜಾರಿಯವರು ಮಾನವೀಯ ನೆಲೆಯಲ್ಲಿ ಸ್ಪಂದಿಸಿದ್ದಾರೆ.
ಈ ಸಂದರ್ಭ ದೇವಳದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಅರವಿಂದ ಸುತ್ತುಗುಂಡಿ , ಸಹಾಯಕ ಇ ಒ ಕೃಷ್ಣಮೂರ್ತಿ , ಮೇಳಗಳ ಯಜಮಾನ ಪಿ ಕಿಶನ್ ಹೆಗ್ಡೆ , ಕಲಾರಂಗದ ಪಧಿಕಾರಿಗಳಾದ ಎಸ್ ವಿ ಭಟ್ , ಗಂಗಾಧರ ರಾವ್ , ನಾರಾಯಣ ಹೆಗಡೆ , ಗಣೇಶ್ ಬ್ರಹ್ಮಾವರ , ಅಜಿತ್ ರಾವ್ , ರಾಜೇಶ್ ನಾವಡ , ಹೆಚ್ ಎನ್ ವೆಂಕಟೇಶ್ , ಕಿಶೋರ್ ಆಚಾರ್ಯ , ಸನಕ ಕಡೆಕಾರ್ ಮೊದಲಾದವರು ಉಪಸ್ಥಿತರಿದ್ದರು .
ಈ ಮೂಲಕ ಕಲಾವಿದರಿಗೆ ನೆರವು ನೀಡಿದ ಮುಖ್ಯಮಂತ್ರಿ ಯಡಿಯೂರಪ್ಪ ನವರಿಗೆ ,ಸಚಿವರಿಗೆ , ದೇವಳದ ಆಡಳಿತ ಮಂಡಳಿಗೆ ಕಲಾರಂಗದ ಕಾರ್ಯದರ್ಶಿ ಮುರಳಿ ಕಡೆಕಾರ್ ಕೃತಜ್ಞತೆ ಅರ್ಪಿಸಿದರು .