ಕೊಚ್ಚಿ: ಅಬುಧಾಬಿಯಿಂದ 177 ಭಾರತೀಯರಿದ್ದ ವಿಮಾನ ಆಗಮನ

ಕೊಚ್ಚಿ: ಕೊರೋನ ವೈರಸ್ ನಿಂದ ವಿದೇಶಗಳಲ್ಲಿ ಸಂಕಷ್ಟದಲ್ಲಿರುವ ಭಾರತೀಯರನ್ನು ವಾಪಸ್ ಕರೆತರುವ ಪ್ರಕ್ರಿಯೆಯ ಅಂಗವಾಗಿ ಅಬುಧಾಬಿಯಿಂದ 177 ಪ್ರಯಾಣಿಕರಿದ್ದ ವಿಮಾನವು ಕೊಚ್ಚಿ ವಿಮಾನ ನಿಲ್ದಾಣದಲ್ಲಿ ಬಂದಿಳಿದಿದೆ.

ವಿಮಾನದಲ್ಲಿ 49 ಗರ್ಭಿಣಿ ಮಹಿಳೆಯರು ಸೇರಿ 177 ಪ್ರಯಾಣಿಕರಿದ್ದರು. ಆಗಮಿಸಿದ ಪ್ರಯಾಣಿಕರಲ್ಲಿ ಯಾವುದೇ ಶಂಕಿತ ಕೊರೋನ ಪ್ರಕರಣಗಳಿಲ್ಲ.
181 ಪ್ರಯಾಣಿಕರನ್ನು ಹೊತ್ತ ಮೊದಲ ಏರ್ ಇಂಡಿಯಾದ ಐಎಕ್ಸ್ 452 ವಿಮಾನವು ಭಾರತೀಯ ಕಾಲಮಾನ ಸಂಜೆ 6:35 ರ ವೇಳೆಗೆ ಅಬುಧಾಬಿ ವಿಮಾನ ನಿಲ್ದಾಣದಿಂದ ಹಾರಾಟ ಆರಂಭಿಸಿದ್ದು, ರಾತ್ರಿ 10:30ರ ವೇಳೆಗೆ ಕೊಚ್ಚಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಬಂದಿಳಿದಿದೆ. ನಾಲ್ವರು ಮಕ್ಕಳು ಕೂಡಾ ಇದ್ದರು.

ಒಂದು ವಾರದ ಅವಧಿಯಲ್ಲಿ ನಡೆಯುವ ಮೊದಲ ಹಂತದ ಏರ್‌ಲಿಫ್ಟ್ ಕಾರ್ಯಾಚರಣೆಯಲ್ಲಿ ವಿದೇಶಗಳಲ್ಲಿ ಸಂಕಷ್ಟಕ್ಕೀಡಾಗಿರುವ 15 ಸಾವಿರ ಭಾರತೀಯರನ್ನು ಸ್ವದೇಶಕ್ಕೆ ವಾಪಸ್ ಕರೆತರಲಾಗುವುದು. ಐದು ಗಲ್ ರಾಷ್ಟ್ರಗಳಿಂದ ಭಾರತೀಯರನ್ನು ಕರೆತರಲು 24 ವಿಮಾನ ಹಾರಾಟಗಳನ್ನು ನಡೆಸಲಾಗುವುದು.

Leave a Reply

Your email address will not be published. Required fields are marked *

error: Content is protected !!