ಶ್ರೀಗಳ ಅಂತ್ಯ ಸಂಸ್ಕಾರ ಹಾಗು ಬೃಂದಾವನ ಉಡುಪಿಯಲ್ಲೇ ಮಾಡಿ – ಕಿಶನ್ ಹೆಗ್ಡೆ ಆಗ್ರಹ

ಉಡುಪಿ – ಶ್ರೀಗಳ ಆಸೆಯಂತೆ ಬೆಂಗಳೂರಿನಲ್ಲಿ ಅವರ ಬೃಂದಾವನ ಮಾಡುವ ನಿರ್ಧಾರ ಸರಿಯಲ್ಲ ಎಂಬುದಾಗಿ ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಕಿಶನ್ ಹೆಗ್ಡೆ ಕೊಳ್ಕೆಬೈಲ್ ಪ್ರತಿಕ್ರಿಯಿಸಿದ್ದಾರೆ ,”ಇವತ್ತು ಇಡೀ ದೇಶದ ಹಿಂದೂ ಮುಸಲ್ಮಾನ್ ಹಾಗೂ ಎಲ್ಲಾ ಸಮುದಾಯದದವರು ಕಂಬನಿ ಮಿಡಿಯುತಿದ್ದಾರೆ ಉಡುಪಿಯ ಪೇಜಾವರ ಶ್ರೀ ಸ್ವಾಮೀಜಿ ಅವರು ದೈವಾಧೀನರಾಗಿರುವ ವಿಚಾರ ತಿಳಿದು ದೇಶದ ಮೂಲೆ ಮೂಲೆಯಿಂದ ಭಕ್ತರು ಆಗಮಿಸುತ್ತಿದ್ದಾರೆ ಆದರೆ ಇತಿಹಾಸದಲ್ಲೇ ಉಡುಪಿಯ ಸ್ವಾಮೀಜಿ ಅವರು ಅಥವಾ ಬೇರೆ ಜಿಲ್ಲೆಯಲ್ಲಿ ಸ್ವಾಮೀಜಿಗಳು ದೈವಾಧೀನರಾದರೆ ಮೂಲಮಠದಲ್ಲಿ ಅಥವಾ ಅವರ ಮಠದಲ್ಲಿ ಹಿಂದೂಸಂಪ್ರದಾಯದ ಪ್ರಕಾರ ಸಮಾಧಿಮಾಡುವುದು ವಾಡಿಕೆ. ಮಾನ್ಯ ಮುಖ್ಯಮಂತ್ರಿಗಳೇ ಪೇಜಾವರ ಶ್ರೀ ಅವರ ಪಾರ್ಥಿವ ಶರೀರವನ್ನು ವೀಕ್ಷಿಸಲು ಉಡುಪಿಯ ಸಹಸ್ರಾರು ಭಕ್ತರಿಗೆ ಅವಕಾಶ ಮಾಡಿಕೊಡದೆ ಬೆಂಗಳೂರಿಗೆ ಹೋಗಿ ಅಲ್ಲಿ ಶವಸಂಸ್ಕಾರ ಮಾಡಿ ಸಮಾಧಿ ಮಾಡುವ ನಿಮ್ಮ ಈ ನಿರ್ದಾರ ಸರಿ ಅಲ್ಲಾ ಈ ಕೂಡಲೇ ಈ ನಿರ್ಧಾರದಿಂದ ಹಿಂದೆ ಸರಿದು ಪೇಜಾವರ ಶ್ರೀ ಗಳ ಶವಸಂಸ್ಕಾರ ಉಡುಪಿ ಅಲ್ಲೇ ಮಾಡಿ ಹಾಗೆ ಅವರ ಸಮಾಧಿಯನ್ನು ಉಡುಪಿಯಲ್ಲೇ ಮಾಡಿ ಅವರ ಸಹಸ್ರಾರು ಭಕ್ತರು ಬಾವನೆಗಳಿಗೆ ಬೆಲೆ ಕೊಡಿ ಅನ್ನುವ ಮೂಲಕ ಆಗ್ರಹಿಸುತ್ತೇನೆ ಎಂಬುದಾಗಿ ಅವರು ಆಗ್ರಹಿಸಿದರು

Leave a Reply

Your email address will not be published. Required fields are marked *

error: Content is protected !!