ಕಂದಾಯ ಇಲಾಖೆಯ ಸಮಸ್ಯೆ ಪರಿಹರಿಸಲು ಸಚಿವ ಅರ್ ವಿ ದೇಶಪಾಂಡೆ ಗೆ ಮನವಿ

ಕಾಪು: ಕಂದಾಯ ಇಲಾಖೆಯ ಸಮಸ್ಯೆಗಳ ಶೀಘ್ರ ಪರಿಹರಿಸುವಂತೆ ಕಾಪು ಬ್ಲಾಕ್ ಯುವ ಕಾಂಗ್ರೆಸ್ ಅಧ್ಯಕ್ಷರಾದ ಮೆಲ್ವಿನ್ ಡಿಸೋಜರವರು ಕಂದಾಯ ಸಚಿವರಾದ ಅರ್ ವಿ ದೇಶಪಾಂಡೆಯವರಿಗೆ ಕಾಪುವಿನಲ್ಲಿ ಮನವಿ ಸಲ್ಲಿಸಿದರು.

ಕಾಪು ತಾಲೂಕು ಘೋಷಣೆಯಾಗಿ ವರ್ಷಗಳೇ ಕಳೆದರೂ ಕೆಲವು ಇಲಾಖೆಗಳು ಉಡುಪಿಯಲ್ಲಿ ಕೆಲಸ ಮಾಡುತ್ತಿದ್ದು. ಭೂನ್ಯಾಯ ಮಂಡಳಿ ಕಡತಗಳಿಗಾಗಿ, ಹಳೆಯ ಜನನ ಪ್ರಮಾಣ ಪತ್ರ ಕೈ ಬರಹದ ಪಹಣಿಪತ್ರಿಕೆ, ಮ್ಯುಟೇಶನ್‌ಗಳ ನಕಲು ಪ್ರತಿಗಳಿಗಾಗಿ ಜನರು ಉಡುಪಿಗೆ ಅಲೆಯಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ.

ಕಾಪುವಿನಲ್ಲಿ ಆರಂಭವಾಗಬೇಕಿದ್ದ ಸಬ್‌ರಿಜಿಸ್ಟಾರ್ ಕಚೇರಿ ಇನ್ನೂ ಉಡುಪಿ ಮತ್ತು ಮುಲ್ಕಿಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದು, ನಿತ್ಯ ಪರದಾಡುತ್ತಿರುವ ಜನರ ಸಮಸ್ಯೆ ಬಗ್ಗೆ ಅಧಿಕಾರಿಗಳ ಜೊತೆ ಸಭೆ ನಡೆಸಿ ಸೂಕ್ತ ಕ್ರಮಕೈಗೊಳ್ಳಬೇಕಾಗಿ ಮನವಿ ಸಲ್ಲಿಸಿದರು.

Leave a Reply

Your email address will not be published. Required fields are marked *

error: Content is protected !!