ಕಟಪಾಡಿಯ ಡಂಪಿಂಗ್ ಯಾರ್ಡ್..ಚೊಕ್ಕಾಡಿಯ ರೈಲ್ವೇ ಬ್ರಿಡ್ಜ್

ಉಡುಪಿ: ದಿನಬೆಳಗಾದರೇ ಹೇಗಪ್ಪಾ ಈ ರಸ್ತೆಯಲ್ಲಿ ಓಡಾಡೋದು ಅನ್ನೋ ಚಿಂತೆ ಇಲ್ಲಿಯ ಜನರಿಗೆ ಸಾಮಾನ್ಯ. ಹೌದು ರಸ್ತೆಯೇನೋ ನೀಟಾಗಿದೆ ಆದ್ರೆ ರಸ್ತೆಯ ಅಕ್ಕ ಪಕ್ಕದಲ್ಲಿ ಮಾತ್ರ ಕಣ್ಣೆತ್ತಿ ಉಸಿರುಬಿಟ್ಟು ಹೋಗೋ ಹಾಗಿಲ್ಲ. ಕಟಪಾಡಿ-ಬೆಳ್ಮಣ್ ಮಾರ್ಗದಲ್ಲಿ ಓಡಾಡೋ ಜನರು ಕಸದ ರಾಶಿ ರಾಶಿಯನ್ನು ನೋಡಬಹುದು.

ಸ್ವಚ್ಛ ಭಾರತದ ಕನಸು ಹೊತ್ತ ದೇಶದ ಪ್ರಧಾನಿ ನರೇಂದ್ರ ಮೋದಿಯವರು,ಮಹಾತ್ಮ ಗಾಂಧಿಜೀಯವರ ಕನಸಾಗಿದ್ದ ಸ್ವಚ್ಛ ಭಾರತ ಅಭಿಯಾನ ಕ್ಕೆ  ಸ್ವತಃ ತಾವೇ ಕೈಯಲ್ಲಿ ಪೊರಕೆ ಹಿಡಿದು, ಸ್ವಚ್ಛಗೊಳಿಸಿ, ಚಾಲನೆ ನೀಡುವ ಮೂಲಕ ದೇಶದ ಜನರಲ್ಲಿ ಸ್ವಚ್ಛತೆಯ ಬಗ್ಗೆ ಅರಿವು ಮೂಡಿಸಿದ್ದರು. ಆದರೆ ಚೊಕ್ಕಾಡಿಯ ರೈಲ್ವೇ ಬ್ರಿಡ್ಜ್ ಕಟಪಾಡಿಯ ಡಂಪಿಂಗ್ ಯಾರ್ಡ್ ಆಗಿಬಿಟ್ಟಿದೆ.

ಕಟಪಾಡಿಯಿಂದ ಸುಮಾರು 1 ಕಿ.ಮೀ ದೂರದಲ್ಲಿ ಸಿಗುವ ಚೊಕ್ಕಾಡಿ ರೈಲ್ವೇ ಬ್ರಿಡ್ಜ್ ಪಕ್ಕ ಕಸದ ರಾಶಿ ಎದ್ದು ಕಾಣುತ್ತದೆ. ಈ ವಿಚಾರವಾಗಿ ಹಲವು ವರ್ಷಗಳಿಂದ ಸಂಬಂಧಪಟ್ಟವರಿಗೆ ದೂರು ನೀಡುತ್ತಲೇ ಬಂದರೂ. ಇದರ ಬಗ್ಗೆ ಯಾರೊಬ್ಬರೂ ಸರಿಯಾದ ಕ್ರಮ ಕೈಗೊಳ್ಳಲಿಲ್ಲವೆಂಬ ದೂರು ಸ್ಥಳೀಯರಿಂದ ಕೇಳಿ ಬರುತ್ತಿದೆ.

ಒಮ್ಮೆ ಕಸ ವಿಲೇವಾರಿ ಮಾಡಿದರೆ ವಾರಗಳ ನಂತರ ಮತ್ತದೇ ರಾಶಿ. ಹೌದು ಜಿಲ್ಲೆಯ ಪ್ರಜ್ಞಾವಂತ ನಾಗರಿಕರೆನಿಸಿರುವ ನಾವು ಇಂತಹ ವಿಚಾರದಲ್ಲಿ ಎಚ್ಚೆತ್ತುಕೊಳ್ಳಬೇಕು. ಪ್ರತಿಯೊಬ್ಬ ನಾಗರಿಕನೂ ಇದರ ಜವಾಬ್ದಾರಿ ಹೊರಬೇಕು. ಆಗ ತಾನೆ ಸಮಸ್ಯೆಗಳಿಗೆ ಪರಿಹಾರ ದೊರಕುವುದು. ಅದೇನೆ ಇರಲಿ, ಈ ವಿಚಾರವಾಗಿ ಸಂಬಂಧಪಟ್ಟವರು ಸರಿಯಾಗಿ ಕೆಲಸ ಮಾಡಬೇಕಿದೆ, ಸ್ಥಳೀಯರ ಜೊತೆ ಚರ್ಚಿಸಿ ಕಸ ವಿಲೇವಾರಿಯ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳಬೇಕು.

ರೂಪೇಶ್ ಜೆ.ಕೆ

1 thought on “ಕಟಪಾಡಿಯ ಡಂಪಿಂಗ್ ಯಾರ್ಡ್..ಚೊಕ್ಕಾಡಿಯ ರೈಲ್ವೇ ಬ್ರಿಡ್ಜ್

  1. Pachayathiyalli kelasa maduva Kishore avaru yavagalu ade margavagi teraluttare,avaarige e vichara gittillave? Gottiddaru summaniddareye

Leave a Reply

Your email address will not be published. Required fields are marked *

error: Content is protected !!