ಕರ್ನಾಟಕ: ಒಂದೇ ದಿನ 16 ಕೊರೋನಾ ಸೋಂಕು ದೃಢ, ಸೋಂಕಿತರ ಸಂಖ್ಯೆ 144ಕ್ಕೆ ಏರಿಕೆ!

ಬೆಂಗಳೂರು: ರಾಜ್ಯದಲ್ಲಿ ಕೊರೋನಾ ವೈರಸ್ ವ್ಯಾಪಕವಾಗಿ ಹರಡುತ್ತಿದ್ದು ಒಂದೇ ದಿನ 16 ಮಂದಿಯಲ್ಲಿ ಸೋಂಕು ಪತ್ತೆಯಾಗಿದ್ದು ಸೋಂಕಿತರ ಸಂಖ್ಯೆ 144ಕ್ಕೇರಿದೆ.

ರಾಜ್ಯದಲ್ಲಿ ಸೋಂಕಿತರ ಸಂಖ್ಯೆ 144ಕ್ಕೇರಿದೆ. ಒಂದೇ ದಿನ 16 ಮಂದಿಯಲ್ಲಿ ಸೋಂಕು ಪತ್ತೆಯಾಗಿದೆ. ಇನ್ನು ರಾಜ್ಯದಲ್ಲಿ 4 ಮಂದಿ ಮೃತಪಟ್ಟಿದ್ದು 11 ಮಂದಿ ಡಿಸ್ಚಾರ್ಜ್ ಆಗಿದ್ದಾರೆ.

16 ಮಂದಿ ಸೋಂಕಿತರ ಪೈಕಿ ಏಳು ಪ್ರಕರಣಗಳು ಮೈಸೂರಿನಲ್ಲಿ ಪತ್ತೆಯಾಗಿವೆ. ಇನ್ನು ಮೈಸೂರಿನಲ್ಲಿ ಸೋಂಕಿತರ ಸಂಖ್ಯೆ 28ಕ್ಕೇರಿದೆ. ಏಳು ಮಂದಿ ಪೈಕಿ ನಾಲ್ವರು ದೆಹಲಿಯ ತಬ್ಲೀಘಿ ಜಮಾತ್ ಗೆ ಹೋಗಿದ್ದವರು. ಇನ್ನು ಒಂದು ಪ್ರಕರಣ 109ನೇ ಕೊರೋನಾ ಸೋಂಕಿತನಿಂದ ಬಂದಿದೆ. ಇನ್ನೆರೆಡು ಪ್ರಕರಣದ ತನಿಖೆ ನಡೆಯುತ್ತಿದೆ ಎಂದರು. 

Leave a Reply

Your email address will not be published. Required fields are marked *

error: Content is protected !!