ಕಾರ್ಕಳ: ವಿವಾಹಿತ ಮಹಿಳೆ ನಾಪತ್ತೆ

ಕಾರ್ಕಳ : ಕಳೆದ ಸೆ.17ರಂದು ಕಾರ್ಕಳದ ಬೈಲೂರಿನಿಂದ ಕೇರಳದ ಪೊಟ್ಟಾಂ ಎಂಬಲ್ಲಿಗೆ ಪ್ರಾರ್ಥನೆಗೆಂದು ಹೋಗಿದ್ದ ವಿವಾಹಿತ ಮಹಿಳೆಯೊಬ್ಬರು ಬಳಿಕ ಮರಳಿ ಬಾರದೆ ನಾಪತ್ತೆಯಾಗಿರುವ ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ.

ಕಾರ್ಕಳ ತಾಲೂಕಿನ ಬೈಲೂರು ಗ್ರಾಮದ ಕರಂಬಜೆಡ್ಡು ಹೌಸ್ ಪ್ರಕಾಶ್ ಕ್ವಾಡ್ರಸ್ ಎಂಬವರ ಪತ್ನಿ ಡೋಲಿ ಡಿ ಅಲ್ಮೇಡ (29) ನಾಪತ್ತೆಯಾದವರು. ಕ್ರಿಶ್ಚಿಯನ್ ಧರ್ಮದವರಾದ ಇವರು ಕೇರಳದ ಪೊಟ್ಟಾಂ ಚರ್ಚ್‌ಗೆ ಪ್ರಾರ್ಥನೆಗೆಂದು ತೆರಳಿದ್ದರು ಎನ್ನಲಾಗಿದೆ. ಸಂಸಾರದಲ್ಲಿನ ಗೊಂದಲಗಳಿಂದ ಬೇಸತ್ತ ಡೋಲಿ ಮನಶಾಂತಿಗೆಂದು ಕೇರಳಕ್ಕೆ ತೆರಳಿರುವ ಸಾಧ್ಯತೆಗಳಿದ್ದು ಈವರೆಗೂ ಪತ್ತೆಯಾಗಿಲ್ಲ.

ಈ ಕುರಿತು ಕಾರ್ಕಳ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Leave a Reply

Your email address will not be published. Required fields are marked *

error: Content is protected !!