ಕಾರ್ಕಳ: ಹೆರಿಗೆ ಸಂದರ್ಭ ವಿಪರೀತ ರಕ್ತ ಸ್ರಾವ ಹೆಡ್ ಕಾನ್ ಸ್ಟೇಬಲ್ ದಾರುಣ ಸಾವು
ಕಾರ್ಕಳ: ಕಾರ್ಕಳ ನಗರ ಪೊಲೀಸ್ ಠಾಣೆಯ ಹೆಡ್ ಕಾನ್ ಸ್ಟೇಬಲ್ ಶ್ಯಾಮಲಾ (37) ಹೆರಿಗೆ ಸಂದರ್ಭ ಅಧಿಕ ರಕ್ತಸ್ರಾವದಿಂದಾಗಿ ನಿಧನ ಹೊಂದಿದರು.
ಮಾ.3ರಂದು ಕಾರ್ಕಳ ಸರಕಾರಿ ಆಸ್ಪತ್ರೆಗೆ ದಾಖಲಾಗಿದ್ದ ಶ್ಯಾಮಲಾ ಅವರಿಗೆ ಮಂಗಳವಾರ ಮಧ್ಯಾಹ್ನ ಹೆರಿಗೆಯಾಗಿತ್ತು. ಈ ಸಂದರ್ಭ ಗರ್ಭಿಣಿ ದೇಹದಲ್ಲಿ ಅಧಿಕ ರಕ್ತಸ್ರಾವವಾಗಿ, ಆಸ್ಪತ್ರೆಯಲ್ಲಿ ಸೂಕ್ತ ಚಿಕಿತ್ಸೆ ಇರದ ಕಾರಣ ಹೆಚ್ಚಿನ ಚಿಕಿತ್ಸೆಗಾಗಿ ಶ್ಯಾಮಲಾ ಅವರನ್ನು ಕೆಎಂಸಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಅವರು ಚಿಕಿತ್ಸೆ ಫಲಕಾರಿಯಾಗದೇ ಗುರುವಾರ ಸಂಜೆ ಮೃಪಟ್ಟರು. ಶ್ಯಾಮಲಾ ಕಾರ್ಕಳ ನಗರ ಪೊಲೀಸ್ ಠಾಣೆಯ ಪೊಲೀಸ್ ಗಿರಿಧರ್ ಪೈ ಅವರ ಪತ್ನಿ.
ಹೆರಿಗೆ ಸಂದರ್ಭ ಸರಿಯಾದ ಚಿಕಿತ್ಸೆ ಲಭಿಸದ ಕಾರಣ ಗರ್ಭಿಣಿ ಕೊನೆಯುಸಿರು ಎಳೆಯುವಂತಾಗಿದೆ. ಮಗು ಆರೋಗ್ಯವಂತಾಗಿದೆಂದು ಆಸ್ಪತ್ರೆ ಮೂಲಗಳು ತಿಳಿಸಿವೆ.