ಕಾರ್ಕಳ: ಉದ್ಯಮಿ ಪ್ರಭಾಕರ್‌ ಶೆಣೈ ಮಸ್ಕತ್‌ನಲ್ಲಿ ನಿಧನ

ಕಾರ್ಕಳ: ಉದ್ಯಮಿ, ಪುರಸಭಾ ವ್ಯಾಪ್ತಿಯ ಕೆಮ್ಮಣ್ಣುಗುಂಡಿ ನಿವಾಸಿ ಕೆ. ಪ್ರಭಾಕರ ಶೆಣೈ (67) ಅವರು ಹೃದಯಾಘಾತದಿಂದ ಎ. 30ರಂದು ಮಸ್ಕತ್‌ನಲ್ಲಿ ನಿಧನ ಹೊಂದಿದರು. ಪ್ರಭಾಕರ್‌ ಶೆಣೈ ಅವರ ಮಗ ಮಸ್ಕತ್‌ನಲ್ಲಿರುವ ಕಾರಣ ಅವರನ್ನು ಕಾಣಲು ಕುಟುಂಬ ಸಮೇತರಾಗಿ ತೆರಳಿದ್ದರು.

ಲಾಕ್‌ಡೌನ್‌ ಹಿನ್ನೆಲೆಯಲ್ಲಿ ವಿಮಾನಯಾನ ಇಲ್ಲದಿರುವುದರಿಂದ ಮಗನ ಮನೆಯಲ್ಲೇ ಉಳಿಯುವಂತಾಗಿತ್ತು. ಮೃತರು ಪತ್ನಿ, ಓರ್ವ ಪುತ್ರ ಹಾಗೂ ಪುತ್ರಿಯನ್ನು ಅಗಲಿದ್ದಾರೆ.

ಮಾಜಿ ಪುರಸಭಾ ಅಧ್ಯಕ್ಷ ಕೆ.ಪಿ. ಶೆಣೈ ಅವರ ಸಹೋದರನಾಗಿರುವ ಪ್ರಭಾಕರ್‌ ಶೆಣೈ ಅವರು ಸಾಮಾಜಿಕ, ಸಾಂಸ್ಕೃತಿಕ, ಶೈಕ್ಷಣಿಕ ಕ್ಷೇತ್ರಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದರು. 

Leave a Reply

Your email address will not be published. Required fields are marked *

error: Content is protected !!