ಕಾರ್ಕಳ: 24 ಮಂದಿ ಹೋಮ್ ಕ್ವಾರಂಟೈನ್‌ಗೆ
ಉಡುಪಿ: ಬುಧವಾರವಷ್ಟೇ ಹಸಿರು ವಲಯಕ್ಕೆ ಬಂದ ಜಿಲ್ಲೆಗೆ ಮತ್ತಷ್ಟು ಆಘಾತಕಾರಿ ಸುದ್ದಿಗಳು ಬರುತ್ತಲೇ ಇದೆ. ಮೊನ್ನೆ ಮಂಡ್ಯದ ಸೋಂಕಿತ ವ್ಯಕ್ತಿಯೊರ್ವನಿಂದ ಸಾಸ್ತಾನ ಟೋಲ್ ಮತ್ತು ತೆಕ್ಕಟ್ಟೆ ಪೆಟ್ರೋಲ್ ಬಂಕ್ ಸಿಬ್ಬಂದಿಗಳ ಸಹಿತ 18 ಜನ ಉಡುಪಿಯ ಆಸ್ಪತ್ರೆಗಳಲ್ಲಿ ಕೊರಂಟೈನ್ ಒಳಗಾದರೇ ಮತ್ತೆ ಹೊರ ರಾಜ್ಯ ಮತ್ತು ಜಿಲ್ಲೆಗಳಿಂದ ಆಗಮಿಸಿದ ಸೋಂಕಿತರಿಂದ ಕಾರ್ಕಳದ 24 ಮಂದಿ ಹೋಮ್ ಕ್ವಾರಂಟೈನ್‌ಗೆ ಒಳಗಾಗಿದ್ದಾರೆ.
ಎಪ್ರಿಲ್ 28 ರಂದು ಮುಂಬಾಯಲ್ಲಿ ಹೃದಯಾಘಾತದಿಂದ ಮೃತಪಟ್ಟ ಮರ್ಣೆ ಗ್ರಾಮದ ಅಜೆಕಾರು ಕುರ್ಪಾಡಿ ಮಹಾಬಲ ಶೆಟ್ಟಿಯವರ ಮೃತದೇಹವನ್ನು ಬುಧವಾರ ಹುಟ್ಟೂರಿಗೆ ತಂದು ಅಂತ್ಯಸಂಸ್ಕಾರ ಮಾಡಲಾಗಿತ್ತು. ಈಗ ಇದೇ ಕಾರಣದಿಂದ 6 ಮಂದಿ ಕ್ವಾರಂಟೈನ್‌ಗೆ ಒಳಗಾಗಿದ್ದಾರೆ.
ಕೋವಿಡ್ ಸೋಂಕು ಅತೀ ಹೆಚ್ಚಿರುವ ಮುಂಬೈಯಿಂದ ಶವ ತಂದಿರುವುದಕ್ಕೆ ಸ್ಥಳೀಯರಿಂದ ವಿರೋಧವಿದ್ದರೂ ಜಿಲ್ಲಾಡಳಿತ ಯಾವುದೇ ಮುಂಜಾಗೃತ ಕ್ರಮಕೈಗೊಳ್ಳಲು ವಿಫಲವಾಗಿರುವುದ್ದಕ್ಕೆ ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಅಜೆಕಾರು ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ| ಅನುಷಾ ಶೆಟ್ಟಿ ಉಪಸ್ಥಿತಿಯಲ್ಲಿ ಅಂತ್ಯಕ್ರಿಯೆ ನಡೆದಿತ್ತು. ಪಂಚಾಯತ್ ಪಿಡಿಓ, ಗ್ರಾಮಕರಣಿಕ ಮತ್ತು ಸ್ಥಳೀಯ ಎಸೈ ಭಾಗಿಯಾಗಿದ್ದರು. ಇದೇ ಅಂತ್ಯಸಂಸ್ಕಾರದಲ್ಲಿ ಪಾಲ್ಗೊಂಡ ಮತ್ತಿಬ್ಬರಿಗೂ ಹೋಂ ಕ್ವಾರಂಟೈನ್
ಇದನ್ನು ಹೊರತುಪಡಿಸಿ ಬೆಳ್ಮಣ್ ನಲ್ಲಿ16 ಮಂದಿಗೆ ಹೋಮ್ ಕ್ವಾರಂಟೈನ್ ಮಾಡಲಾಗಿದೆಂದು ತಿಳಿದು ಬಂದಿದೆ.