ಕಾರ್ಕಳ: ಹಾಡುಹಗಲೇ ಕಾರಿನಲ್ಲಿದ್ದ 2 ಲಕ್ಷ ದೋಚಿದ ಕಳ್ಳರು
ಕಾರ್ಕಳ : ಇಲ್ಲಿನ ಕಾಬೆಟ್ಟು ಜಂಕ್ಷನ್ ಬಳಿ ನಿಲ್ಲಿಸಿದ್ದ ಕಾರಿನಲ್ಲಿದ್ದ 2 ಲಕ್ಷ ನಗದನ್ನು ಹಾಡುಹಗಲೇ ದೋಚಿದ ಘಟನೆ ಶನಿವಾರ ಮಧ್ಯಾಹ್ನ ನಡೆದಿದೆ. ಅತ್ತೂರು ಗುಂಡ್ಯಡ್ಕದ ಶ್ರೀದೇವಿ ಶಿಲ್ಪಕಲಾ ಕೆತ್ತನೆ ಕೆಲಸದ ಸಿಬ್ಬಂದಿ ಮಾಲಿನಿ ಕೆ. ಅವರು ಕಾಬೆಟ್ಟು ಜಂಕ್ಷನ್ ಬಳಿಯ ಸಿಂಡಿಕೇಟ್ ಬ್ಯಾಂಕ್ ನಿಂದ ಡ್ರಾ ಮಾಡಿ ತಂದ ನಗದು ಎರಡು ಲಕ್ಷ ರೂಪಾಯಿಯನ್ನು ಕಾರಿನ ಮಧ್ಯ ಸೀಟ್‌ನಲ್ಲಿ ಇಟ್ಟಿದ್ದರು. ನಂತರ ಅಲ್ಲೇ ಪಕ್ಕದಲ್ಲಿದ್ದ ಜನರಲ್ ಸ್ಟೋರ್ ಹೋಗಿ ಹಿಂದಕ್ಕೆ ಬರುವ ಸಂದರ್ಭ ತೆರೆದಿಟ್ಟ ಕಾರಿನ ಕಾಜಿನ ಕಿಟಕಿಯಿಂದ ಹಣದ ಪ್ಲಾಸ್ಟಿಕ್ ಚೀಲವನ್ನು ಕಳ್ಳರು ಎಗರಿಸಿ ಪರಾರಿಯಾಗಿದ್ದಾರೆ.
ಕಳ್ಳರು ಬೈಕ್ ನಲ್ಲಿ ಹಿಂಬಾಲಿಸಿ ಕೊಂಡು ಬಂದು ಈ ಕೃತ್ಯ ಮಾಡಿರುವ ಸಾಧ್ಯತೆಯಿದೆಂದು ಪೊಲೀಸರು ತಿಳಿಸಿದ್ದಾರೆ. ಆರೋಪಿಗಳ ಪತ್ತೆಗೆ ಕಾರ್ಕಳ ಪೊಲೀಸರು ಬಲೆ ಬೀಸಿದ್ದು, ಈಗಾಗಲೇ ಸ್ಥಳೀಯಾವಾಗಿ ಸಿಕ್ಕಿರುವ ಸಿಸಿಟಿವಿಯಲ್ಲಿ ದಾಖಲಾದ ದೃಶ್ಯದ ಆಧಾರದಲ್ಲಿ ಕಳ್ಳ ಪತ್ತೆ ಹಚ್ಚಲಾಗುವುದೆಂದು ಪೊಲೀಸರು ಮಾಹಿತಿ ನೀಡಿದರು.