ಸೇನೆಯಲ್ಲಿ ಸೇವೆ ಸಲ್ಲಿಸಿದ್ದು ಅವಿಸ್ಮರಣೀಯ : ನಿವೃತ್ತ ಸೇನಾನಿ ಅನಂತ ಪದ್ಮನಾಭ ನಾಯಕ್
ಉಡುಪಿ – ಕಾರ್ಗಿಲ್ ವಿಜಯ ಹಾಗೂ ನಾನು ಸೇವೆಯಲ್ಲಿ ಸಲ್ಲಿಸಿದ ಸೇವೆ ನನ್ನ ಜೀವಮಾನದ ಅತಿ ಹೆಮ್ಮೆಯ ವಿಚಾರವಾಗಿದೆ. ನಿಜಕ್ಕೂ ಅವಿಸ್ಮರಣೀಯ ಎಂದು ಕಾರ್ಗಿಲ್ ಯುದ್ಧದ ಸಮಯದಲ್ಲಿ ಸೇನೆಯಲ್ಲಿ ಸೇವೆ ಸಲ್ಲಿಸಿದ್ದ ನಿವೃತ್ತ ಸೇನಾನಿ, ಶಿರ್ವ ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಅನಂತ ಪದ್ಮನಾಭ ನಾಯಕ್ ಹೇಳಿದರು.
ಬಂಟಕಲ್ಲು ರಾಜಾಪುರ ಸಾರಸ್ವತ ಯುವ ವೃಂದದ ಆಶ್ರಯದಲ್ಲಿ ಸೇನೆಯಲ್ಲಿ ಸೇವೆ ಸಲ್ಲಿಸುತ್ತಿರುವ ಕೊಡುಗುಡ್ಡೆ ರಾಜೇಂದ್ರ ಪಾಟ್ಕರ್ ರವರ ಮನೆಯಲ್ಲಿ ಜರುಗಿದ ‘ಕಾರ್ಗಿಲ್ ವಿಜಯ ದಿನ’ ಆಚರಣೆಯಲ್ಲಿ ಯುವ ವೃಂದದ ಸನ್ಮಾನ ಸ್ವೀಕರಿಸಿ ಮಾತನಾಡುತ್ತ .
ಕಾರ್ಗಿಲ್ ಯುದ್ಧ ಹಾಗೂ ಸೇನೆಯಲ್ಲಿ ಸೇವೆ ಕಠಿಣ ಸಂದರ್ಭಗಳನ್ನು ಸವಿಸ್ತಾರವಾಗಿ ಈ ಸಂದರ್ಭದಲ್ಲಿ ಮಾಜಿ ಸೇನಾನಿ ವಿವರಿಸಿದರು.
ನಿವೃತ್ತ ಸೇನಾನಿ ಅನಂತ ಪದ್ಮನಾಭ ನಾಯಕ್ ಹಾಗೂ ಸೇನೆಯಲ್ಲಿ ಪ್ರಸ್ತುತ ಸೇವೆ ಸಲ್ಲಿಸುತ್ತಿರುವ ರಾಜೇಂದ್ರ ಪಾಟ್ಕರ್ ರವರನ್ನು ಯುವ ವೃಂದದ ಗೌರವಾಧ್ಯಕ್ಷ ಕೆ. ಆರ್ ಗೌರವಿಸಿ ಸನ್ಮಾನಿಸಿದರು.
ಸನ್ಮಾನ ಸ್ವೀಕರಿಸಿ ಮಾತನಾಡಿದ ಸೇನಾನಿ ರಾಜೇಂದ್ರ ಪಾಟ್ಕರ್ “ಪ್ರಸ್ತುತ ಸೇನೆಯಲ್ಲಿನ ಅನುಭವಗಳನ್ನು ಹಂಚಿಕೊಂಡು ನಮ್ಮ ಸಮಾಜದ ಯುವಕರು ಸೇನೆಯಲ್ಲಿ ಸೇರಲು ಆಸಕ್ತಿ ವಹಿಸಬೇಕು” ಎಂದು ಕರೆ ನೀಡಿದರು.
ಬಂಟಕಲ್ಲು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ಆಡಳಿತ ಮಂಡಳಿಯ ಉಪಾಧ್ಯಕ್ಷ ಉಮೇಶ ಪ್ರಭು , ಆಡಳಿತ ಮಂಡಳಿಯ ಸದಸ್ಯ ಸುರೇಂದ್ರ ನಾಯಕ್ , ಯುವ ವೃಂದ ಕಾರ್ಯದರ್ಶಿ ಅನಂತರಾಮ ವಾಗ್ಲೆ ಶ್ರೀ ದುರ್ಗಾ ಮಹಿಳಾ ಮಂಡಳಿಯ ಅಧ್ಯಕ್ಷೆ ಅರುಂಧತಿ ಜಿ ಪ್ರಭು, ವೀಣಾವತಿ ರಾಜೇಂದ್ರ ಪಾಟ್ಕರ್, ಉಷಾ ವೀರೇಂದ್ರ ಪಾಟ್ಕರ್ ಉಪಸ್ಥಿತರಿದ್ದರು.
ಕಾರ್ಗಿಲ್ ಯುದ್ಧದಲ್ಲಿ ಹುತಾತ್ಮರಾದ ಯೋಧರಿಗೆ ನಮನ ಸಲ್ಲಿಸಿ ಒಂದು ನಿಮಿಷ ಮೌನ ಪ್ರಾರ್ಥನೆ ಸಲ್ಲಿಸಲಾಯಿತು.
ಯುವ ವೃಂದದ ಗೌರವ ಸಲಹೆಗಾರರಾದ ರವೀಂದ್ರ ನಾಯಕ್ ಮಾಣಿಪಾಡಿ ಹಾಗೂ ಯುವ ವೃಂದದ ಸದಸ್ಯರು ಉಪಸ್ಥಿತರಿದ್ದರು.