ಕಾಪು: ಸಮಾಜ ಸೇವಾ ವೇದಿಕೆ, ಜನಸಂಪರ್ಕ ಜನಸೇವಾ ವತಿಯಿಂದ ಪಡಿತರ ಸಾಮಗ್ರಿ ವಿತರಣೆ
ಕಾಪು: ಸಮಾಜ ಸೇವಾ ವೇದಿಕೆ ಹಾಗೂ ಜನಸಂಪರ್ಕ ಜನಸೇವಾ ವೇದಿಕೆ ಕಳತ್ತೂರು-ಕಾಪು ಇದರ ವತಿಯಿಂದ 3 ನೇ ಹಂತ ದಲ್ಲಿ ಬಡವರಿಗೆ, ಕೂಲಿ ಕಾರ್ಮಿಕರಿಗೆ, ನಿರ್ವಸಿತರಿಗೆ ಒಟ್ಟು 300ಕ್ಕೂ ಅಧಿಕ ಮನೆಗಳಿಗೆ ಸುಮಾರು 1000 ರೂಪಾಯಿಯ ಅಕ್ಕಿ ಹಾಗೂ ಪಡಿತರ ಸಾಮಗ್ರಿ ಯನ್ನು ಕಳತ್ತೂರು ಕುತ್ಯಾರು ಪಾದೂರು ಮಜೂರು ಜನರಿಗೆ ವಿತರಿಸಲಾಯಿತು.
ಕಾಪು ಪೊಲೀಸ್ ವೃತ್ತ ನಿರೀಕ್ಷಕ ಮಹೇಶ್ ಪ್ರಸಾದ್ ಈ ಸಮಾಜ ಸೇವಾ ಕಾರ್ಯಕ್ಕೆ ಚಾಲನೆ ನೀಡಿದರು. ಈ ಸಂದರ್ಭದಲ್ಲಿ ಶಿರ್ವ ಅರೋಗ್ಯ ಕೇಂದ್ರ ಡಾ/ಸಂತೋಷ್ ಕುಮಾರ್ ಬೈಲೂರು ಸಮಾಜ ಸೇವಾ ವೇದಿಕೆ ಅಧ್ಯಕ್ಷ ಮೊಹಮ್ಮದ್ ಫಾರೂಕ್ ಚಂದ್ರನಗರ, ಜನಸಂಪರ್ಕ ಜನಸೇವಾ ವೇದಿಕೆ ಅಧ್ಯಕ್ಷ ದಿವಾಕರ ಬಿ ಶೆಟ್ಟಿ ಕಳತ್ತೂರು, ಜಂಟಿ ಸಂಚಾಲಕರಾದ ದಿವಾಕರ ಡಿ ಶೆಟ್ಟಿ ಕಳತ್ತೂರು, ಉಪಾಧ್ಯಕ್ಷರಾದ ರಾಜೇಶ್ ಕುಲಾಲ್ ಕುತ್ಯಾರು, ಈ ಭಾಗದ ಆಶಾ ಕಾರ್ಯಕರ್ತೆಯರಾದ ಆಶಾ, ಸುಜಾತಾ ಶಿರ್ವ ನರ್ಸ್ ವಿಜಯಲಕ್ಷ್ಮಿ, ಪೋಷಕಾಂಶ ತಗ್ಜ ದಯಾನಂದ ಕೆ ಶೆಟ್ಟಿ ದೆಂದೂರು, ಕೃಷಿಕ ಲಿಯೋ ಮೆಂಡೊನ್ಸ ಕಳತ್ತೂರು, ಗಣೇಶ್ ನಾಯ್ಕ್ ಪಯ್ಯರು,ಸಂತೋಷ್ ಶೆಟ್ಟಿ ಗುರ್ಮೆ, ಸ್ಟಾನ್ಲಿಸಸ್ ಕೋರ್ಡ್ದ, ವಿಶ್ವನಾಥ ಅಮೀನ್, ಬದ್ರಿಯಾ ಜುಮ್ಮಾ ಮಸ್ಜಿದ್ ಮಜೂರ್ ಮಲ್ಲಾರು ಉಪಾಧ್ಯಕ್ಷರಾದ ಕೆ.ಉಮ್ಮರಬ್ಬ ಚಂದ್ರನಗರ,ಅಜಿಮ್ ಚಂದ್ರನಗರ, ಉಮ್ಮರಬ್ಬ ಜನತಾ ಕಾಲೋನಿ, ರಝಕ್ ಜನತಾ ಕಾಲೋನಿ ಹಾಗೂ ಇನ್ನಿತರರು ಉಪಸ್ಥಿತರಿದ್ದರು.