ಪತ್ತುಮುಡಿಯಲ್ಲಿ ಕಲಾಶಿಬಿರ
ಬಂಟ್ವಾಳ: ಮಂಗಳೂರಿನ ಕರಾವಳಿ ಚಿತ್ರಕಲಾ ಚಾವಡಿ, ಪತ್ತುಮುಡಿ ಮನೆತನದ ಸಹಯೋಗದೊಂದಿಗೆ ತುಳುನಾಡಿನ ಸಾಂಪ್ರದಾಯಿಕ ಗುತ್ತುಮನೆಗಳ ಮಹತ್ವ ಸಾರುವ ಕಲಾಶಿಬಿರ ಭಾನುವಾರ ನಡೆಯಿತು.
ಚಿತ್ರ ಬರೆದು ಉದ್ಘಾಟಿಸಿದ. ಬಿ.ಸಿ.ರೋಡು ರಾಣಿ ಅಬ್ಬಕ್ಕ ತುಳು ಅಧ್ಯಯನ ಕೇಂದ್ರದ ಅಧ್ಯಕ್ಷ ಪ್ರೊ. ತುಕಾರಾಮ ಪೂಜಾರಿ ಮಾತನಾಡಿ, ವರ್ತಮಾನಕ್ಕೆ ಇತಿಹಾಸವನ್ನು ಸಾರುವ ನೈಪುಣ್ಯ ಚಿತ್ರಕಲಾವಿದನಿಗಿರುತ್ತದೆ. ಅಕ್ಷರಜ್ಞಾನ ಮನುಷ್ಯನಿಗೆ ಬರುವ ಸಾವಿರಾರು ವರ್ಷಗಳ ಮೊದಲೇ ಮನುಷ್ಯ ತನ್ನ ಭಾವನೆಗಳನ್ನು ಚಿತ್ರಗಳ ಮೂಲಕ ಅಭಿವ್ಯಕ್ತಪಡಿಸುತ್ತಿದ್ದ ಎಂದರು. ಭಾರತೀಯರು ಇತಿಹಾಸಪ್ರಜ್ಞೆ ಬೆಳೆಸಿಕೊಳ್ಳಬೇಕಾಗಿದೆ, ಇದನ್ನು ಕಟ್ಟಿಕೊಡುವ ಕಲಾವಿದರ ಪ್ರಯತ್ನ ಅಭಿನಂದನೀಯ ಎಂದು ಶುಭ ಹಾರೈಸಿದರು.
ಪತ್ತುಮುಡಿ ಮನೆಯವರಾದ ಅನಂತಯ್ಯ ರಾವ್, ಜಗದೀಶ ರಾವ್, ಶರತ್ ರಾವ್, ಶಿಲ್ಪಾ ಶುಭ ಹಾರೈಸಿದರು. ಕಾರ್ಯಕ್ರಮದಲ್ಲಿ ಪ್ರಸಾದ್ ಆರ್ಟ್ ಗ್ಯಾಲರಿಯ ಕೋಟಿಪ್ರಸಾದ್ ಆಳ್ವ ಉಪಸ್ಥಿತರಿದ್ದರು. ಕಲಾವಿದ ನಿವೃತ್ತ ಪ್ರಾಧ್ಯಾಪಕ ಪ್ರೊ. ಅನಂತಪದ್ಮನಾಭ ರಾವ್ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು. ಕಲಾವಿದ ದಿನೇಶ್ ಹೊಳ್ಳ ಪ್ರಾಸ್ತಾವಿಕ ಮಾತನಾಡಿ, ಕಾರ್ಯಕ್ರಮದ ಉದ್ದೇಶವನ್ನು ವಿವರಿಸಿದರು.
ಕಲಾವಿದರಾದ ಕೋಟಿಪ್ರಸಾದ್ ಆಳ್ವ, ಗಣೇಶ ಸೋಮಯಾಜಿ, ಶರತ್ ಹೊಳ್ಳ, ಅನಂತಪದ್ಮನಾಭ ರಾವ್, ಕಮಾಲ್, ಭಾಗೀರಥಿ ಭಂಡಾರ್ಕಾರ್, ಮನೋರಂಜಿನಿ, ದಿನೇಶ್ ಹೊಳ್ಳ, ಖುರ್ಷೀದ್ ಯಾಕೂಬ್, ಸಪ್ನಾ ನೊರೊನ್ಹಾ, ವೀಣಾ ಮಧುಸೂಧನ, ಸುಧೀರ್ ಕುಮಾರ್ ಜಿ, ಮುರಳೀಧರ ಆಚಾರ್, ಬಾಲಕೃಷ್ಣ ಶೆಟ್ಟಿ, ಪೂರ್ಣೇಶ್, ಜಯಶ್ರೀ ಶರ್ಮ, ತಾರಾನಾಥ ಕೈರಂಗಳ, ಈರಣ್ಣ ತಿಪ್ಪಣ್ಣವರ್, ನವೀನ್ ಬಂಗೇರ, ಜ್ಯೋತಿ ಶಿಬಿರದಲ್ಲಿ ಭಾಗವಹಿಸಿದ್ದರು.