ಕಲಾಂಗಣ : 213 ನೇ ತಿಂಗಳ ಸರಣಿ ಕಾರ್ಯಕ್ರಮ

  • ಕಲಾಕುಲ್ 2018-19 ವಿದ್ಯಾರ್ಥಿಗಳಿಗೆ ಪದವಿ ಪ್ರದಾನ
  • ಕಲಾಕುಲ್ 2019-20 ವರ್ಷದ ಹೊಸ ತಂಡದ ಪರಿಚಯ
  • ಕಲಾಕುಲೋತ್ಸವ್ 2019 ಸಮಾರೋಪದಲ್ಲಿ `ಹಾಂವ್ ಕೊಣಾಚಿಂ?’ ನೂತನ ನಾಟಕ ಪ್ರದರ್ಶನ

ಭಾನುವಾರ, 01.09.2019 ರಂದು ಸಂಜೆ 6 ಗಂಟೆಯಿಂದ, ಶಕ್ತಿನಗರದ ಕಲಾಂಗಣದಲ್ಲಿ, ಮಾಂಡ್ ಸೊಭಾಣ್ ಆಯೋಜಿಸುವ ತಿಂಗಳ ವೇದಿಕೆ ಸರಣಿಯ 213 ನೇ ಕಾರ್ಯಕ್ರಮದಲ್ಲಿ ಕಲಾಕುಲೋತ್ಸವ್ -2019 ಇದರ ಸಮಾರೋಪ ನಡೆಯಲಿದೆ.

2018-19 ಸಾಲಿನ ಕಲಾಕುಲ್ ವಿದ್ಯಾರ್ಥಿಗಳಿಗೆ ವಾಮಂಜೂರು ಸಂತ ಜೋಸೆಫ್ ಇಂಜಿನಿಯರಿಂಗ್ ಕಾಲೇಜಿನ ನಿರ್ದೇಶಕರಾದ ವಂ. ವಿಲ್ಪ್ರೆಡ್ ಪ್ರಕಾಶ್ ಡಿಸೋಜ ಪದವಿ ಪ್ರದಾನ ಮಾಡಲಿದ್ದಾರೆ.

2019-20 ಸಾಲಿನ ನೂತನ ತಂಡವನ್ನು ಪರಿಚಯಿಸಲಾಗುವುದು. ನಂತರ ಅರುಣ್ ರಾಜ್ ರೊಡ್ರಿಗಸ್ ಬರೆದು, ನಿರ್ದೇಶಿಸಿದ, `ಹಾಂವ್ ಕೊಣಾಚಿಂ?’ ಹೊಸ ಕೊಂಕಣಿ ನಾಟಕ ಪ್ರದರ್ಶನಗೊಳ್ಳಲಿದೆ.

ಸರ್ವರಿಗೂ ಉಚಿತ ಪ್ರವೇಶವಿದೆ.

Leave a Reply

Your email address will not be published. Required fields are marked *

error: Content is protected !!