ಕಲಾಕುಲೋತ್ಸವ್2019 : ಮೂರು ಕೊಂಕಣಿ ನಾಟಕಗಳ ಪ್ರದರ್ಶನ
ಕೊಂಕಣಿಯ ವೃತ್ತಿಪರ ನಾಟಕ ರೆಪರ್ಟರಿ ಕಲಾಕುಲ್ ಇದರ ೮ ನೇ ತಂಡದಿಂದ ಕಲಾಕುಲೋತ್ಸವ್-2019 ಇದರ ಅಂಗವಾಗಿ ನಾಟಕೋತ್ಸವವನ್ನು ಹಮ್ಮಿಕೊಳ್ಳಲಾಗಿದೆ. 17.08.2019 ರಂದು ಸಂಜೆ 6.00 ಗಂಟೆಗೆ, ಸಂತ ಎಲೋಶಿಯಸ್ ಕಾಲೇಜಿನ ನಾಟಕ ಸಂಘವು ಎಲ್‌ಸಿಆರ್‌ಐ ಸಭಾಂಗಣದಲ್ಲಿ, ವಿದ್ದು ಉಚ್ಚಿಲ್ ನಿರ್ದೇಶನದ, ಸೊಫೊಕ್ಲಿಸನ `ಆಂಟಿಗೊನ್’ ನಾಟಕವನ್ನು ಆಯೋಜಿಸಿದೆ.
25.28.2019 ರಂದು ಭಾನುವಾರ ಸಂಜೆ 6.30 ಕ್ಕೆ ವಾಮಂಜೂರು ಶ್ರಮಿಕ ಸಂತ ಜೋಸೆಫರ ಚರ್ಚ್ ವತಿಯಿಂದ ಚರ್ಚ್ ಸಭಾಭವನದಲ್ಲಿ, ಅರುಣ್‌ರಾಜ್ ರಾಡ್ರಿಗಸ್ ನಿರ್ದೇಶನದ `ಪೇಯಿಂಗ್ ಗೆಸ್ಟ್’ ನಾಟಕ ಪ್ರದರ್ಶನಗೊಳ್ಳಲಿದೆ.
1.9.2018 ರಂದು ಸಂಜೆ 6.00 ಗಂಟೆಗೆ ಶಕ್ತಿನಗರದ ಕಲಾಂಗಣದಲ್ಲಿ 213 ನೇ ತಿಂಗಳ ವೇದಿಕೆ ಕಾರ್ಯಕ್ರಮದಲ್ಲಿ ಸಮಾರೋಪ ಸಮಾರಂಭ ನಡೆಯಲಿದ್ದು , 8ನೇ ತಂಡದ ಕಲಾಕುಲ್ ವಿದ್ಯಾರ್ಥಿಗಳಿಗೆ ಪದವಿ ಪ್ರದಾನ ಮಾಡಲಾಗುವುದು. ಅಂದು `ಹಾಂವ್ ಕೊಣಾಚಿಂ?’ ಹೊಸ ನಾಟಕ ಪ್ರದರ್ಶನಗೊಳ್ಳಲಿದೆ. ಈ ಮೂರು ನಾಟಕಗಳನ್ನು ಅರುಣ್‌ರಾಜ್ ರಾಡ್ರಿಗಸ್ ರಚಿಸಿದ್ದಾರೆ. ಮೂರು ನಾಟಕಗಳಿಗೂ ಉಚಿತ ಪ್ರವೇಶವಿದೆ.
ಕೊಂಕಣಿ ನಾಟಕ ರಂಗಕ್ಕೆ ಆಧುನಿಕ ಸ್ಪರ್ಶ ನೀಡಲು ಹಾಗೂ ಸಮಕಾಲೀನವಾಗಿ ಸ್ಪಂದಿಸಲು ಮಾಂಡ್ ಸೊಭಾಣ್ ಈ ರೆಪರ್ಟರಿಯನ್ನು 2011ರಲ್ಲಿ ಆರಂಭಿಸಿತ್ತು. ಅನಿವಾಸಿ ಭಾರತೀಯ ಉದ್ಯಮಿ ಮೈಕಲ್ ಡಿಸೋಜ, ದುಬಾಯ್ ಇವರು 2019 ನೇ ಸಾಲಿಗೆ ಕಲಾಕುಲ್ ಪ್ರಮುಖ ಪೋಷಕರಾಗಿ ಪ್ರೋತ್ಸಾಹಿಸಿದ್ದಾರೆ.
ವಿದ್ಯಾರ್ಥಿಗಳು ವರ್ಷದ ಅವಧಿಯಲ್ಲಿ ನಟನೆ, ನಾಟಕ ರಚನೆ, ರಂಗಸಜ್ಜಿಕೆ, ವೇಷಭೂಷಣ, ಧ್ವನಿ-ಬೆಳಕು ನಿಯಂತ್ರಣ, ಮೈಮ್ ಇತ್ಯಾದಿ ನಾಟಕ ರಂಗದ ಎಲ್ಲಾ ಆಯಾಮಾಗಳನ್ನು ಕಲಿತು, ನಾಲ್ಕು ನಾಟಕಗಳನ್ನು ಹಾಗೂ ಕೆಲ ಬೀದಿ ನಾಟಕಗಳನ್ನು ಪ್ರದರ್ಶಿಸಬೇಕು. ಕಲಾವಿದರಿಗೆ ಸಂಭಾವನೆ ಹಾಗೂ ಪ್ರದರ್ಶನಗಳಿಗೆ ಹೆಚ್ಚುವರಿ ಭತ್ತೆ ನೀಡಲಾಗುತ್ತದೆ. ಕಲಿಕೆಯ ಕೊನೆಗೆ ಪದವಿ ಪ್ರದಾನ ನಡೆಯುತ್ತದೆ.
ಕಳೆದ ೮ ವರ್ಷಗಳಲ್ಲಿ ಪ್ರಯೋಗಾತ್ಮಕವಾದ ವಿಭಿನ್ನ ನವೀನ ಮಾದರಿಯ32 ನಾಟಕಗಳ 290 ಪ್ರದರ್ಶನಗಳನ್ನು ದೇಶ ವಿದೇಶಗಳಲ್ಲಿ ನೀಡಲಾಗಿದೆ. ಒಂದು ಕನ್ನಡ ನಾಟಕವನ್ನೂ ಪ್ರದರ್ಶಿಸಲಾಗಿದೆ. ಹಲವಾರು ರಾಜ್ಯ ಹಾಗೂ ರಾಷ್ಟ್ರ ಮಟ್ಟದ ನಾಟಕೋತ್ಸವಗಳಲ್ಲಿ ಕಲಾಕುಲ್ ತಂಡ ಭಾಗವಹಿಸಿದೆ.